For Quick Alerts
  ALLOW NOTIFICATIONS  
  For Daily Alerts

  'ಟಿಣಿಂಗಾ ಮಿಣಿಂಗಾ ಟಿಶ್ಯಾ' ಗಾಯಕಿಗೆ ಡಾಕ್ಟರೇಟ್, ಹೆಮ್ಮೆಯ ಸಿದ್ಧಿ

  |

  'ಸಲಗ' ಸಿನಿಮಾದ 'ಟಿಣಿಂಗಾ ಮಿಣಿಂಗಾ ಟಿಶ್ಯಾ' ಹಾಡು ಹಾಡಿದ್ದ ಸಿದ್ಧಿ ಸಹೋದರಿಯರಲ್ಲಿ ಒಬ್ಬರಾದ ಗೀತಾ ಸಿದ್ಧಿಗೆ ಡಾಕ್ಟರೇಟ್ ಲಭಿಸಿದೆ.

  ಸಿದ್ಧಿ ಸಮುದಾಯದ ಗೀತಾ ಸಿದ್ಧಿಗೆ ಈ ಡಾಕ್ಟರೇಟ್ ರಂಗಭೂಮಿ ವಿಭಾಗದಲ್ಲಿನ ಮಾಡಿದ ಅಧ್ಯಯನಕ್ಕೆ ದೊರೆತಿದ್ದು, ಈ ಸಾಧನೆ ಮಾಡಿದ ಮೊದಲ ಸಿದ್ಧಿ ಮಹಿಳೆ ಎಂಬ ಖ್ಯಾತಿಗೆ ಗೀತಾ ಸಿದ್ಧಿ ಪಾತ್ರರಾಗಿದ್ದಾರೆ.

  ಡಾ ಎಸ್‌.ಎನ್.ಸುಶೀಲಾ ಅವರ ಮಾರ್ಗದರ್ಶನದಲ್ಲಿ 'ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸ್ತ್ರೀಲೋಕ' ಹೆಸರಿನ ಮಹಾಪ್ರಬಂಧಕ್ಕೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಲಭಿಸಿದೆ.

  ಸಿದ್ದಿ ಸಮುದಾಯ ಅರಣ್ಯವನ್ನೇ ನೆಚ್ಚಿಕೊಂಡ ಸಮುದಾಯ. ಸಮಾಜದಿಂದ ನಿರ್ಲಕ್ಷ್ಯಕ್ಕೆ ಮಾತ್ರವಲ್ಲ ಸತತ ಅಪಮಾನಕ್ಕೆ ಒಳಗಾಗಿದ್ದ ಸಮುದಾಯ. ಆದರೆ ಇಂದು ಅದೇ ಸಮುದಾಯದ ಗೀತಾ ಸಿದ್ಧಿ ಡಾಕ್ಟರೇಟ್ ಪಡೆದಿದ್ದು, ಸಮುದಾಯಕ್ಕೆ ಕೀರ್ತಿ, ಗೌರವ ತಂದಿದ್ದಾರೆ. ಗೀತಾ ಸಿದ್ಧಿಯವರಿಗೆ ಡಾಕ್ಟರೇಟ್ ಬಂದಿರುವುದನ್ನು ಮಾನವತಾವಾದಿಗಳು ಸಂಭ್ರಮಿಸುತ್ತಿದ್ದಾರೆ.

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿದ್ದ 'ಸಲಗ' ಸಿನಿಮಾದ 'ಟಿಣಿಂಗಾ ಮಿಣಿಂಗಾ ಟಿಶ್ಯಾ' ಹಾಡನ್ನು ಗೀತಾ ತಮ್ಮ ಸಹೋದರಿಯೊಟ್ಟಿಗೆ ಸೇರಿ ಹಾಡಿದ್ದರು. ಹಾಗೂ ಹಾಡಿನ ವಿಡಿಯೋನಲ್ಲಿಯೂ ಕಾಣಿಸಿಕೊಂಡಿದ್ದರು. ಈ ಹಾಡಿನ ಮೂಲಕ ಸಿದ್ಧಿ ಸಹೋದರಿಯರು ಬಹಳ ಜನಪ್ರಿಯತೆ ಪಡೆದುಕೊಂಡಿದ್ದರು.

  ಗೀತಾ ಮೊದಲಿನಿಂದಲೂ ಸಾಹಿತ್ಯ, ಜನಪದ ಹಾಗೂ ರಂಗಭೂಮಿಯ ನಿಕಟ ಸಂಪರ್ಕ ಹೊಂದಿರುವವರು. ತಮ್ಮ ಭಾವ, ರಂಗಭೂಮಿ ಕಲಾವಿದ ಚನ್ನಕೇಶವ ಅವರ ನೆರವಿನಿಂದ ರಂಗಭೂಮಿಗೆ ಪರಿಚಯವಾದರು. ಶಿಕ್ಷಣ ಮುಂದುವರೆಸಿದರು. ಸುರಾನಾ ಕಾಲೇಜಿನಲ್ಲಿ ಪೊಲಿಟಿಕಲ್ ಸೈನ್ಸ್ ಪದವಿ ಬಳಿಕ ಜ್ಞಾನಭಾರತಿಯಲ್ಲಿ ನಾಟಕಶಾಸ್ತ್ರದಲ್ಲಿ ಎಂಎ ಮುಗಿಸಿದ್ದಾರೆ ಗೀತಾ.

  ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ಗೀತಾ ಅವರಿಗೆ ಅದರಲ್ಲಿಯೇ ಘನವಾದುದ್ದನ್ನು ಸಾಧಿಸುವ, ತಮ್ಮ ಸಮುದಾಯ ಹಾಗೂ ಇಡೀಯ ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡುವಾಸೆ. ಇದರ ಜೊತೆಗೆ ಒಂದು ಪುಸ್ತಕ ಬರೆಯುವ ಆಸೆಯನ್ನೂ ಗೀತಾ ಹೊಂದಿದ್ದಾರೆ.

  Read more about: drama song ನಾಟಕ ಹಾಡು
  English summary
  Siddi community girl Geetha Siddi received doctorate from Bengaluru university. Geeta Siddi sung song for Salaga movie.
  Tuesday, December 27, 2022, 16:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X