»   » ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಸಿಹಿಕಹಿ ಚಂದ್ರು ಪುತ್ರಿ

ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ಸಿಹಿಕಹಿ ಚಂದ್ರು ಪುತ್ರಿ

By: ಉದಯರವಿ
Subscribe to Filmibeat Kannada

ಕನ್ನಡ ಕಿರುತೆರೆಯ ಸರದಾರ ಸಿಹಿಕಹಿ ಚಂದ್ರು ಹಾಗೂ ಗೀತಾ ಅವರ ಪುತ್ರಿ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದಾರೆ. ಲೂಸ್ ಮಾದ ಯೋಗಿ ಅವರ ಸ್ನೇಕ್ ನಾಗ ಚಿತ್ರಕ್ಕೆ ಚಂದ್ರು ಅವರ ಪುತ್ರಿ ಹಿತಾ ಚಂದ್ರಶೇಖರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಕನ್ನಡದ ಹೊಸ ಪೀಳಿಗೆಯ ಲೇಖಕಿ ಪ್ರತಿಭಾ ನಂದಕುಮಾರ್. ಈ ಚಿತ್ರ ಉಮಾರಾವ್ ಅವರ ಸಣ್ಣ ಕಥೆ 'ಹಾವಾಡಿಗ' ಆಧಾರಿತವಾಗಿದೆ. ಈ ಚಿತ್ರವನ್ನು ನಿರ್ದೇಶಕ ಕಮ್ ಸಾಹಿತಿ ಯೋಗರಾಜ ಭಟ್ಟರ ಸ್ವಂತ ಬ್ಯಾನರ್ ಯೋಗರಾಜ್ ಮೂವೀಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. [ಭಟ್ಟರ ಬ್ಯಾನರ್ ನಲ್ಲಿ 'ಸ್ನೇಕ್ ನಾಗ' ನಾದ ಯೋಗಿ]

Hitha

ಇನ್ನು ಹಿತಾ ಚಂದ್ರಶೇಖರ್ ಅವರಿಗೆ ಮೊದಲಿಂದಲೂ ಬಣ್ಣ ಹಚ್ಚಬೇಕೆಂಬ ಕನಸು ಇತ್ತು. ಅದು ಈಗ ನೆರವೇರುತ್ತಿದೆ. ತಮ್ಮ ಪುತ್ರಿ ಬಣ್ಣದ ಜಗತ್ತಿಗೆ ಅಡಿಯಿಟ್ಟ ಬಗ್ಗೆ ಚಂದ್ರು ದಂಪತಿಗಳಿಗೆ ಒಂಚೂರು ಆತಂಕ ಖುಷಿ ಒಟ್ಟಿಗೆ ಆಗುತ್ತಿವೆ. ಅದರಲ್ಲೂ ಪ್ರತಿಭಾ ಅವರ ನಿರ್ದೇಶನದಲ್ಲಿ ಅವರು ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಅವರಿಗೆ ತುಂಬಾನೆ ಖುಷಿ ಕೊಟ್ಟಿದೆಯಂತೆ.

ಈ ಚಿತ್ರಕ್ಕೆ ಮೊದಲಿಗೆ ಲೂಸಿಯಾ ಖ್ಯಾತಿಯ ನೀನಾಸಂ ಸತೀಶ್ ಅವರನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು, ಆದರೆ, ಸ್ನೇಕ ನಾಗ ನಾಗುವ ಯೋಗ ಯೋಗಿಗೆ ಒಲಿದಿದೆ. ಸಾಹಿತಿ ಪ್ರತಿಭಾ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿ ಮೊದಲ ಬಾರಿಗೆ ಪಾತ್ರವಹಿಸಲಿದ್ದಾರೆ.

ಕಾಲಿವುಡ್ ನಲ್ಲಿ ನಿರ್ದೇಶಕ ಕೆವಿ ಆನಂದ್ ಅವರ ಸಹಾಯಕಿಯಾಗಿ 'ಕೋ'.. 'ಮಾಟ್ರನ್' ಚಿತ್ರದಲ್ಲಿ ಪ್ರತಿಭಾ ಅವರು ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಐದಾರು ಕವನ ಸಂಕಲನ, ಅಂಕಣಗಾರ್ತಿ, ಸಣ್ಣಕಥೆ, ಜೀವನ ಚರಿತ್ರೆಗಳನ್ನು ಬರೆದಿರುವ ಪ್ರತಿಭಾ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಸಾಕ್ಷ್ಯಚಿತ್ರಗಳ ನಿರ್ದೇಶಕಿಯಾಗಿದ್ದ ಪ್ರತಿಭಾ ಅವರು ಈಗ ಕನ್ನಡ ಚಿತ್ರರಂಗದ ಮಹಿಳಾ ನಿರ್ದೇಶಕಿಯರ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾರೆ.

English summary
Kannada small screen big couple Sihi Kahi Chandru and Geetha daughter Hitha Chandrashekar debut in Sandalwood with Yogi starter 'Snake Naga' being directed by Pratibha Nandakumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada