For Quick Alerts
  ALLOW NOTIFICATIONS  
  For Daily Alerts

  ಸೈಮಾ 2020: 'ಲವ್‌ ಮಾಕ್ಟೆಲ್' ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ

  |

  ದಕ್ಷಿಣ ಭಾರತದ ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುವ ಸೈಮಾ 2020ನೇ ಸಾಲಿನ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗಿದೆ.

  ಮೊನ್ನೆ 2019ನೇ ಸಾಲಿನ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗಿದ್ದು, ನಿನ್ನೆ 2020ನೇ ಸಾಲಿನಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. ವಿಶೇಷವೆಂದರೆ ನೇರವಾಗಿ ಒಟಿಟಿಗಳಲ್ಲಿ ಬಿಡುಗಡೆ ಆದ ಸಿನಿಮಾಗಳನ್ನೂ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. 2019ರ ಸಾಲಿನ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದ್ದು, 'ಯಜಮಾನ' ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ ಪ್ರಶಸ್ತಿ ದರ್ಶನ್, ಅತ್ಯುತ್ತಮ ನಟಿ ಪ್ರಶಸ್ತಿ ರಚಿತಾ ರಾಮ್ ಪಾಲಾಗಿತ್ತು. ಈಗ 2020 ರ ಅತ್ಯುತ್ತಮ ಸಿನಿಮಾ, ನಟ-ನಟಿ, ತಂತ್ರಜ್ಞರಿಗೆ ಸೈಮಾ ಪ್ರಶಸ್ತಿ ನೀಡಲಾಗಿದೆ.

  ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 2020ನೇ ಸಾಲಿನಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಪೋಷಕ ನಟ-ನಟಿಯರನ್ನು ಆರಿಸಿ ಪ್ರಶಸ್ತಿ ನೀಡಲಾಗಿದೆ. ಹಲವು ತಂತ್ರಜ್ಞರು ಸಹ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ಸೈಮಾ 2020 ಪ್ರಶಸ್ತಿ ವಿಜೇತರಾದ ಕನ್ನಡಿಗರ ಪಟ್ಟಿ ಇಂತಿದೆ

  ಅತ್ಯುತ್ತಮ ಸಿನಿಮಾ: 'ಲವ್ ಮಾಕ್ಟೇಲ್'

  ಅತ್ಯುತ್ತಮ ನಟ: ಡಾಲಿ ಧನಂಜಯ್ (ಪಾಪ್‌ಕಾರ್ನ್ ಮಂಕಿ ಟೈಗರ್)

  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪ್ರಜ್ವಲ್ ದೇವರಾಜ್ (ಜಂಟಲ್‌ಮ್ಯಾನ್)

  ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಖುಷಿ ರವಿ (ದಿಯಾ)

  ಅತ್ಯುತ್ತಮ ಪೋಷಕ ನಟ: ಬಿ ಸುರೇಶ್ (ಆಕ್ಟ್ 1978)

  ಅತ್ಯುತ್ತಮ ಪೋಷಕ ನಟಿ: ಅಮೃತಾ ಅಯ್ಯಂಗಾರ್ (ಲವ್ ಮಾಕ್ಟೆಲ್)

  ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು (ಫ್ರೆಂಚ್ ಬಿರಿಯಾನಿ)

  ಅತ್ಯುತ್ತಮ ನಟ (ಮೊದಲ ಸಿನಿಮಾ): ಪೃಥ್ವಿ ಅಂಬರ್ (ದಿಯಾ)

  ಅತ್ಯುತ್ತಮ ನಟಿ (ಮೊದಲ ಸಿನಿಮಾ): ಸಪ್ತಮಿ ಗೌಡ (ಪಾಪ್‌ಕಾರ್ನ್ ಮಂಕಿ ಟೈಗರ್)

  ಅತ್ಯುತ್ತಮ ಹಿನ್ನೆಲೆ ಗಾಯನ: ಸಂಚಿತ್ ಹೆಗಡೆ (ಜಂಟಲ್‌ಮ್ಯಾನ್; ಮರಳಿ ಮನಸಾಗಿದೆ)

  ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಧಿತಿ ಸಾಗರ್ (ಫ್ರೆಂಚ್ ಬಿರಿಯಾನಿ; ಬೆಂದಕಾಳೂರು)

  ಅತ್ಯುತ್ತಮ ಛಾಯಾಗ್ರಹಣ: ವಿಶಾಲ್ ವಿಠ್ಠಲ್, ಸೌರಬ್ ವಾಗ್ಮೋರೆ (ದಿಯಾ)

  ಅತ್ಯುತ್ತಮ ಗೀತ ಸಾಹಿತ್ಯ: ಧನಂಯ್ ರಂಜನ್ (ಸೋಲ್ ಆಫ್ ದಿಯಾ)

  ಅತ್ಯುತ್ತಮ ನಿರ್ದೇಶಕ (ಮೊದಲ ಸಿನಿಮಾ): ರಾಧಾ ಕೃಷ್ಣ (ಮಾಯಾಬಜಾರ್ 2016)

  ಅತ್ಯುತ್ತಮ ನಿರ್ಮಾಪಕ (ಮೊದಲ ಸಿನಿಮಾ): ಅಂಜನಾದ್ರಿ ಸಿನಿ ಕ್ರಿಯೇಶನ್ಸ್ (ಶಿವಾಜಿ ಸೂರತ್ಕಲ್)

  ಸೈಮಾ 2019ನೇ ಸಾಲಿನ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ
  ಅತ್ಯುತ್ತಮ ಸಿನಿಮಾ: 'ಯಜಮಾನ'
  ಅತ್ಯುತ್ತಮ ನಟ: ದರ್ಶನ್ (ಯಜಮಾನ)
  ಅತ್ಯುತ್ತಮ ನಟಿ: ರಚಿತಾ ರಾಮ್ (ಆಯುಶ್‌ಮಾನ್ ಭಾವ)
  ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)
  ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ರಶ್ಮಿಕಾ ಮಂದಣ್ಣ (ಯಜಮಾನ)
  ಅತ್ಯುತ್ತಮ ಹೊಸ ನಟ: ಅಭಿಷೆಕ್ ಅಂಬರೀಶ್ (ಅಮರ್)
  ಅತ್ಯುತ್ತಮ ಹೊಸ ನಟಿ: ಶ್ರೀಲೀಲಾ (ಕಿಸ್)
  ಅತ್ಯುತ್ತಮ ಪೋಷಕ ನಟ: ದೇವರಾಜ್ (ಯಜಮಾನ)
  ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ)
  ಅತ್ಯುತ್ತಮ ವಿಲನ್: ಸಾಯಿ ಕುಮಾರ್ (ಭರಾಟೆ)
  ಅತ್ಯುತ್ತಮ ಹಾಸ್ಯನಟ: ಸಾಧುಕೋಕಿಲ (ಯಜಮಾನ)
  ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್ (ಗೀತಾ)
  ಅತ್ಯುತ್ತಮ ನಿರ್ದೇಶಕ: ಹರಿಕೃಷ್ಣ, ಪೊನ್ ಕುಮಾರನ್ (ಯಜಮಾನ)
  ಅತ್ಯುತ್ತಮ ಹೊಸ ನಿರ್ದೇಶಕ: ಮಯೂರ ರಾಘವೇಂದ್ರ (ಕನ್ನಡ್ ಗೊತ್ತಿಲ್ಲ)
  ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)
  ಅತ್ಯುತ್ತಮ ಗೀತ ಸಾಹಿತ್ಯ: ಪವನ್ ಒಡೆಯರ್ (ನಟಸಾರ್ವಭೌಮ)

  English summary
  SIIMA awards Winners List: Check out Kannada winners of 2020. Love Mocktail won best movei award, Dali Dhananjay is best actor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X