»   » ಶ್ರೇಷ್ಠ ನಟಿ, ನಟ ಪ್ರಶಸ್ತಿ ರಮ್ಯಾ-ಪುನೀತ್ ಪಾಲು

ಶ್ರೇಷ್ಠ ನಟಿ, ನಟ ಪ್ರಶಸ್ತಿ ರಮ್ಯಾ-ಪುನೀತ್ ಪಾಲು

Posted By:
Subscribe to Filmibeat Kannada

ಎಲ್ಲರಲ್ಲೂ ತೀವ್ರ ಕುತೂಹಲ ಹುಟ್ಟುಹಾಕಿದ್ದ 'ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ (ಎಸ್ ಐಐಎಂಎ) ಕಾರ್ಯಕ್ರಮ ಮುಗಿದಿದೆ. ಪ್ರಶಸ್ತಿಗಳಲ್ಲಿ ಹೆಚ್ಚಿನ ಪಾಲನ್ನು ನಾಗಶೇಖರ್ ನಿರ್ದೇಶನ, ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ 'ಸಂಜು ವೆಡ್ಸ್ ಗೀತಾ' ಚಿತ್ರ ಪಡೆದಿದೆ.

ಕನ್ನಡ ಚಿತ್ರಗಳಿಗಾಗಿ ಮೀಸಲಾಗಿದ್ದ ಶ್ರೇಷ್ಠ ನಟ, ನಟಿ ಪ್ರಶಸ್ತಿಗಳನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಗೋಲ್ಡನ್ ಗರ್ಲ್ ರಮ್ಯಾ ಪಡೆದಿದ್ದಾರೆ. ಜೂನ್ 22, 2012ರ ಶುಕ್ರವಾರ ದುಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ದುಬೈಯಲ್ಲಿ ನಡೆದ ಈ ಕಾರ್ಯಕ್ರಕ್ಕೆ ರೆಬೆಲ್ ಸ್ಟಾರ್ ಅಂಬರೀಷ್-ಸುಮಲತಾ, ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರಮ್ಯಾ, ದಿಗಂತ್, ಐಂದ್ರಿತಾ ರೇ ಮುಂತಾದ ನಟ-ನಟಿಯರು ಭಾಗವಹಿಸಿದ್ದರು. ಎಸ್ ಐಐಎಂಎ ಮೊದಲ ವರ್ಷದಲ್ಲೇ ಪ್ರಶಸ್ತಿ ಪಡೆದಿದ್ದಲ್ಲದೇ ರಮ್ಯಾ, ಈ ವರ್ಷದಲ್ಲಿ 6 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈಗ್ಗೆ ಎರಡು ದಿನಗಳ ಹಿಂದಷ್ಟೇ ಗೋಲ್ಡನ್ ಗರ್ಲ್ ರಮ್ಯಾ 'ಬೆಂಗಳೂರು ಟೈಮ್ಸ್' ಅವಾರ್ಡ್ ಪಡೆದಿದ್ದರು. ಅದರಲ್ಲೂ ಅವರೇ ನಾಯಕಿಯಾಗಿ ನಟಿಸಿದ್ದ 'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ಪ್ರಶಸ್ತಿಗಳಲ್ಲಿ ಸಿಂಹಪಾಲು ಬಂದಿರುವುದು ರಮ್ಯಾಗೆ ಖುಷಿಯೋ ಖುಷಿ. ಪವರ್ ಸ್ಟಾರ್ ಪುನೀತ್ ಅವರಿಗೆ ಈ ಪ್ರಶಸ್ತಿ ಹುಡುಗರು ಚಿತ್ರಕ್ಕಾಗಿ ಸಂದಿದೆ.

ಪ್ರಶಸ್ತಿಗಳ ಪಡೆದವರ ವಿವರ:

ಶ್ರೇಷ್ಠ ನಟ: ಪುನೀತ್ ರಾಜ್‌ ಕುಮಾರ್ (ಹುಡುಗರು)
ಶ್ರೇಷ್ಠ ನಟಿ: ರಮ್ಯಾ (ಸಂಜು ವೆಡ್ಸ್ ಗೀತಾ)
ಶ್ರೇಷ್ಠ ನಿರ್ದೇಶಕ: ನಾಗಶೇಖರ್ (ಸಂಜು ವೆಡ್ಸ್ ಗೀತಾ)
ಶ್ರೇಷ್ಠ ಸಿನಿಮಾ: ಸಾರಥಿ (ಕೆ.ವಿ. ಸತ್ಯಪ್ರಕಾಶ್-ನಿರ್ಮಾಪಕರು)
ಶ್ರೇಷ್ಠ ನವ ನಟ: ಶ್ರೀಕಾಂತ್ (ಒಲವೇ ಮಂದಾರ)
ಶ್ರೇಷ್ಠ ನವ ನಟಿ: ಆಕಾಂಕ್ಷಾ (ಒಲವೇ ಮಂದಾರ)
ಶ್ರೇಷ್ಠ ನವ ನಿರ್ದೇಶಕ: ವಿ. ಕುಮಾರ್ (ವಿಷ್ಣುವರ್ಧನ)
ಉತ್ತಮ ನಟ, ವಿಶೇಷ ಪ್ರಶಸ್ತಿ: ಉಪೇಂದ್ರ
ಉತ್ತಮ ನಟಿ, ವಿಶೇಷ ಪ್ರಶಸ್ತಿ: ನಿಧಿ ಸುಬ್ಬಯ್ಯ (ಕೃಷ್ಣನ್ ಮ್ಯಾರೇಜ್ ಸ್ಟೋರಿ)
ಶ್ರೇಷ್ಠ ಪೋಷಕ ನಟಿ: ಐಂದ್ರಿತಾ ರೇ (ಪರಮಾತ್ಮ)
ಶ್ರೇಷ್ಠ ಖಳ ನಟ: ರಂಗಾಯಣ ರಘು (ಸಂಜು ವೆಡ್ಸ್ ಗೀತಾ)
ಶ್ರೇಷ್ಠ ಹಾಸ್ಯ ನಟ: ಸಾಧು ಕೋಕಿಲಾ (ಹುಡುಗರು)
ಶ್ರೇಷ್ಠ ಸಂಗೀತ ನಿರ್ದೇಶಕ: ವಿ. ಹರಿಕೃಷ್ಣ (ಹುಡುಗರು)
ಶ್ರೇಷ್ಠ ಚಿತ್ರ ಸಾಹಿತಿ: ಕವಿರಾಜ್ (ಸಂಜು ವೆಡ್ಸ್ ಗೀತಾ - ಗಗನವೇ ಬಾಗಿ)
ಶ್ರೇಷ್ಠ ಛಾಯಾಗ್ರಾಹಕ: ಸತ್ಯ ಹೆಗಡೆ (ಸಂಜು ವೆಡ್ಸ್ ಗೀತಾ)
ಶ್ರೇಷ್ಠ ಹಿನ್ನೆಲೆ ಗಾಯಕ: ಅವಿನಾಶ್ ಛಬ್ಬಿ (ಮುರಳಿ ಮೀಟ್ಸ್ ಮೀರಾ)
ಶ್ರೇಷ್ಠ ಹಿನ್ನೆಲೆ ಗಾಯಕಿ: ಆಕಾಂಕ್ಷಾ ಬಾದಾಮಿ (ರಾಜಧಾನಿ - ಟೈಟು ಟೈಟು)
ಶ್ರೇಷ್ಠ ನೃತ್ಯ ನಿರ್ದೇಶಕ: ಇಮ್ರಾನ್ ಸರ್ದಾರಿಯಾ
ಜೀವಮಾನದ ಸಾಧನೆ ಪ್ರಶಸ್ತಿ: ಅಂಬರೀಶ್
ವಿಶೇಷ ಪ್ರಶಸ್ತಿ: ಬೇಬಿ ಅನಿ
ಎಸ್ ಐಐಎಂಎ ಶ್ರೀ: ಶಿವರಾಜ್ ಕುಮಾರ್
(ಒನ್ ಇಂಡಿಯಾ ಕನ್ನಡ)

English summary
Power Star Puneeth Rajkumar and Golden Girl Ramya bagged the Best Actor and Actress of Kannada Moves award at SIIMA, South Indian International Movie Awards. Here attached the list of winners.
 
Please Wait while comments are loading...