»   » ಬೆತ್ತನಗೆರೆ ಸೀನನಾಗಿ 'ಸಿಲ್ಕ್' ಬಾಯ್ ಅಕ್ಷಯ್

ಬೆತ್ತನಗೆರೆ ಸೀನನಾಗಿ 'ಸಿಲ್ಕ್' ಬಾಯ್ ಅಕ್ಷಯ್

Posted By:
Subscribe to Filmibeat Kannada

ಬೆತ್ತನಗೆರೆಯ ಸೀನನ ಎನ್ ಕೌಂಟರ್ ಆದದ್ದೇ ತಡ ಸ್ಯಾಂಡಲ್ ವುಡ್ ನಲ್ಲಿ ಬೆತ್ತನಗೆರೆ ಅನ್ನೋ ಟೈಟಲ್ ಗಾಗಿ ಕಿತ್ತಾಟಗಳೇ ಶುರುವಾಗಿದ್ವು. ಅಶ್ವಿನಿ ಆಡಿಯೋದ ಅಶ್ವಿನಿ ರಾಮ್ ಪ್ರಸಾದ್ ಸೇರಿದಂತೆ ಆರೇಳು ನಿರ್ಮಾಪಕರು ಈ ಒಂದೇ ಟೈಟಲ್ ಗೆ ಮುಗಿಬಿದ್ದಿದ್ರು.

ಈಗ 'ಬೆತ್ತನಗೆರೆ' ಟೈಟಲ್ ನಲ್ಲಿ ಸಿನಿಮಾ ಶುರುವಾಗ್ತಿರೋ ಬಗ್ಗೆ ಸುದ್ದಿ ಸಿಕ್ಕಿದೆ. ಕನ್ನಡದ ಡರ್ಟಿ ಪಿಕ್ಚರ್ 'ಸಿಲ್ಕ್ ಸಕ್ಕತ್ ಹಾಟ್ ಮಗಾ' ಚಿತ್ರ 50ನೇ ದಿನ ಪೂರೈಸ್ತಾ ಇರೋ ಸಂದರ್ಭದಲ್ಲಿ ನಾಯಕ ಅಕ್ಷಯ್ ಮತ್ತೊಂದು ಹಾಟ್ ನ್ಯೂಸ್ ಕೊಟ್ಟಿದ್ದಾರೆ.


ಅಕ್ಷಯ್ ಈಗ 'ಬೆತ್ತನೆಗೆರೆ' ಸೀನನಾಗೋಕೆ ರೆಡಿಯಾಗ್ತಿದ್ದಾರೆ. ಸೀನನ ಥ್ರಿಲ್ಲಿಂಗ್ ಕಥೆಗೆ ಪ್ರೊಡ್ಯೂಸರ್ ರೆಡಿಯಾಗಿದ್ದು ಅಕ್ಷಯ್ ಅಭಿನಯದ ಸಿಲ್ಕ್ ಚಿತ್ರ 50 ದಿನ ಪೂರೈಸಿದ್ದು ಯಶಸ್ವಿಯಾಗಿ ಮುನ್ನುಗ್ತಿದ್ದು ಸದ್ಯದಲ್ಲೇ ಬೆತ್ತನೆಗೆರೆ ಚಿತ್ರ ಸೆಟ್ಟೇರಲಿದೆ.

ಆದರೆ ಅಕ್ಷಯ್ ಇಲ್ಲಿವರೆಗೂ ಇಂತಹಾ ಪಕ್ಕಾ ರಫ್ ಅಂಡ್ ಟಫ್ ಕ್ಯಾರೆಕ್ಟರ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಲವ್ಲೀ ಲಡ್ಕ ಆಗಿದ್ದ ಅಕ್ಷಯ್ ಬೆತ್ತನಗೆರೆಯಂತಹಾ ಪವರ್ ಫುಲ್ ಕ್ಯಾರೆಕ್ಟರ್ ಗೆ ಹೇಗೆ ಪವರ್ ತುಂಬ್ತಾರೋ ಕಾದು ನೋಡ್ಬೇಕು. (ಒನ್ಇಂಡಿಯಾ ಕನ್ನಡ)

English summary
After infamous gangster Bettanagere Seena alias Srinivas gun downed the sandalwood film industry making film on his name. The movie titled as Bettanagere. Silk Sakkat Hot fame Akshay playing role of Bettanagere.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada