For Quick Alerts
  ALLOW NOTIFICATIONS  
  For Daily Alerts

  ಪೋಟುಗಾಡು ತಮಿಳು ರಿಮೇಕ್ ನಲ್ಲಿ ಸಿಂಬು

  By ಜೇಮ್ಸ್ ಮಾರ್ಟಿನ್
  |

  ನಿರ್ದೇಶಕ ಪವನ್ ಒಡೆಯರ್ ಹ್ಯಾಟ್ರಿಕ್ ವಿಜಯ ಸಾಧಿಸಿದ್ದಾರೆ. ಕನ್ನಡದಲ್ಲಿ ಗೋವಿಂದಾಯ ನಮಃ ಹಾಗೂ ಗೂಗ್ಲಿ ಚಿತ್ರಗಳ ಯಶಸ್ಸಿನ ಜತೆಗೆ ತೆಲುಗಿನಲ್ಲಿ 'ಪೋಟುಗಾಡು' ಚಿತ್ರ ನಿರ್ದೇಶಿಸಿ ಗೆದ್ದಿದ್ದಾರೆ.

  ಕೋಮಲ್ ಅಭಿನಯದ ಗೋವಿಂದಾಯ ನಮಃ ಚಿತ್ರ ತೆಲುಗಿನಲ್ಲಿ 'ಪೋಟುಗಾಡು' ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಗೆದ್ದಿದೆ. ಮೋಹನ್ ಬಾಬು ಅವರ ಮಗ ಮಂಚು ಮನೋಜ್ ಅಭಿನಯದ ಚಿತ್ರ ಪೋಟುಗಾಡು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

  ಆದರೆ, ಪೋಟುಗಾಡು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿದೆ ಎಂದು ನಿರ್ಮಾಪಕ ಲಗಡಪತಿ ಶ್ರೀಧರ್ ಹೇಳಿದ್ದಾರೆ. ಇದೇ ಖುಷಿಯಲ್ಲಿ ಈ ಚಿತ್ರವನ್ನು ಕಾಲಿವುಡ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

  ಪೋಟುಗಾಡು ಚಿತರ್ದಲ್ಲಿ 'ಬುಜ್ಜಿ ಪಿಲ್ಲಾ..' ಹಾಡು ಹಾಡಿ ರಂಜಿಸಿದ ತಮಿಳಿನ ಲಿಟ್ಲ್ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಸಿಲಂಬರಸನ್ ಅಲಿಯಾಸ್ ಸಿಂಬು ಅವರೇ ತಮಿಳು ಆವೃತ್ತಿಯ ಪೋಟುಗಾಡು ಚಿತ್ರದ ನಾಯಕರಂತೆ.

  ಮೈ ಆಟೋಗ್ರಾಫ್ ಎಂಬ ಉತ್ತಮ ಚಿತ್ರ ನಿರ್ದೇಶಿಸಿದ್ದ ಚೇರನ್ ಅವರು ಪೋಟುಗಾಡು ತಮಿಳು ರಿಮೇಕ್ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸಿಂಬು ನಾಯಕರಾಗಿದ್ದರೆ, ಸಂತಾನಂ ಕಾಮಿಡಿ ಟ್ರ್ಯಾಕ್ ನೋಡಿಕೊಳ್ಳಲಿದ್ದಾರಂತೆ.

  ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಮ್ಮ ಪವನ್ ಒಡೆಯರ್ ಅವರೇ ತಮಿಳಿನಲ್ಲೂ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ, 'ನನಗೆ ಭಾಷಾ ಸಮಸ್ಯೆ ಇರುವುದರಿಂದ ತಮಿಳು ಚಿತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೇ ನಾನು ಈಗಾಗಲೇ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದೇನೆ' ಎಂದು ಹ್ಯಾಟ್ರಿಕ್ ನಿರ್ದೇಶಕ ಪವನ್ ಹೇಳಿದ್ದಾರೆ.

  ಪವನ್ ಅವರು ಸದ್ಯಕ್ಕೆ ನಾಯಕನಾಗಿ ಬಡ್ತಿ ಪಡೆದಿದ್ದು ಪ್ರೀತಿ ಗೀತಿ ಇತ್ಯಾದಿ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಗೂಗ್ಲಿ ಯಶಸ್ಸಿನ ನಂತರ ಗೂಗ್ಲಿ 2 ತೆರೆಗೆ ತರಲು ಕೂಡಾ ಉತ್ಸುಕರಾಗಿದ್ದಾರಂತೆ.

  English summary
  'Potugadu', the Manchu Manoj starrer movie is the remake of Kannada film 'Govindaya Namaha' Pawan Wadeyarthe director of the original version also directed the Telugu film,. Now Movie will be remade in Tamil with Simbu in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X