For Quick Alerts
  ALLOW NOTIFICATIONS  
  For Daily Alerts

  ಎನ್.ಟಿ.ಆರ್ ಮನೆಯಲ್ಲಿ ಇದು ಮೂರನೇ ದುರಂತ: ಅಂದು ಜಸ್ಟ್ ಮಿಸ್ ಆಗಿದ್ರು ಯಂಗ್ ಟೈಗರ್.!

  By Bharath Kumar
  |

  ತೆಲುಗು ಚಿತ್ರರಂಗದ ಖ್ಯಾತ ನಟ ಸೂಪರ್ ಸ್ಟಾರ್ ಎನ್.ಟಿ.ಆರ್ ಅವರ ಪುತ್ರ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಇದು ಎನ್.ಟಿ.ಆರ್ ಕುಟುಂಬಕ್ಕೆ ಭಾರಿ ಆಘಾತ ನೀಡಿದೆ.

  ಒಂದು ದುರಂತವನ್ನ ಕಣ್ಣಾರೆ ಕಂಡು ಇನ್ನೂ ಆ ನೋವಿನಿಂದ ಹೊರಬಾರದೇ ಕಣ್ಣೀರು ಹಾಕುತ್ತಿರುವ ಕುಟುಂಬಕ್ಕೆ ಈ ಸಾವು ಸಿಡಿಲು ಬಡಿದಂತೆ ಬಂದೆರೆಗಿದೆ. ಹೌದು, ಎನ್.ಟಿ.ಆರ್ ಕುಟುಂಬಕ್ಕೆ ಇದು ದುರಂತ ಸಾವು. ಯಾಕಂದ್ರೆ, ಹರಿಕೃಷ್ಣ ಅವರ ಹಿರಿಯ ಪುತ್ರ ಕೂಡ ರಸ್ತೆ ಅಪಘಾತದಲ್ಲೇ ದುರ್ಮರಣ ಹೊಂದಿದ್ದರು.

  ಬಾಳಿ ಬದುಕುಬೇಕಿದ್ದ ಮಗನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದ ಹರಿಕೃಷ್ಣ, ಮಗನಂತೆ ಇಹಲೋಕ ತ್ಯಜಿಸಬೇಕಾಗುತ್ತೆ ಎಂಬುದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದರ ಮಧ್ಯೆ ಜೂನಿಯರ್ ಎನ್.ಟಿ.ಆರ್ ಕೂಡ ಜಸ್ಟ್ ಮಿಸ್ ಆಗಿದ್ದರು ಎಂಬುದನ್ನ ಇಲ್ಲಿ ಮರೆಯವಂತಿಲ್ಲ. ಅಷ್ಟಕ್ಕೂ, ಹರಿಕೃಷ್ಣ ಅವರ ಮಗ ನಿಧನರಾಗಿದ್ದು ಹೇಗೆ.? ಜೂನಿಯರ್ ಎನ್.ಟಿ.ಆರ್ ಗೆ ಏನಾಗಿತ್ತು.? ಮುಂದೆ ಓದಿ.....

  ಅಪಘಾತದಲ್ಲಿ ಸಾವನ್ನಪ್ಪಿದ್ದ ಜಾನಕಿ ರಾಮ್

  ಅಪಘಾತದಲ್ಲಿ ಸಾವನ್ನಪ್ಪಿದ್ದ ಜಾನಕಿ ರಾಮ್

  ಹರಿಕೃಷ್ಣ ಅವರಿಗೆ ನಾಲ್ಕು ಜನ ಮಕ್ಕಳು. ಜಾನಕಿ ರಾಮ್, ಕಲ್ಯಾಣ್ ರಾಮ್, ಸುಹಾಸಿನಿ ಹಾಗೂ ಜೂನಿಯರ್ ಎನ್.ಟಿ.ಆರ್. 2014ರ ಡಿಸೆಂಬರ್ ತಿಂಗಳಲ್ಲಿ ಹರಿಕೃಷ್ಣ ಅವರ ಹಿರಿಯ ಮಗ ಜಾನಕಿ ರಾಮ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ವಿಜಯವಾಡ ಕಡೆಯಿಂದ ಹೈದ್ರಾಬಾದ್ ಗೆ ತೆರಳುತ್ತಿದ್ದಾಗ ಟ್ರ್ಯಾಕ್ಟರ್ ಗುದ್ದಿ ಕಾರು ಜಖಂ ಆಗಿತ್ತು.

  ಅದೊಂದು ಸಣ್ಣ ಕೆಲಸ ಮಾಡಿದ್ದರೆ ನಂದಮೂರಿ ಹರಿಕೃಷ್ಣ ಸಾಯುತ್ತಿರಲಿಲ್ಲವೇನೋ!

  ಎನ್.ಟಿ.ಆರ್ ಜಸ್ಟ್ ಮಿಸ್

  ಎನ್.ಟಿ.ಆರ್ ಜಸ್ಟ್ ಮಿಸ್

  ನಟ ಜೂನಿಯರ್ ಎನ್.ಟಿ.ಆರ್ ಅವರು ಕೂಡ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಆದ್ರೆ, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಕಾಕತಾಳೀಯ ಅಂದ್ರೆ, ಎನ್.ಟಿ.ಆರ್ ಸಹೋದರ ಜಾನಕಿ ರಾಮ್ ಮೃತ ಪಟ್ಟ ರಸ್ತೆಯಲ್ಲೇ, ಮತ್ತು ಬಹುತೇಕ ಅದೇ ಸ್ಥಳದಲ್ಲಿ ಜೂನಿಯರ್ ಎನ್.ಟಿ.ಆರ್ ಗೂ ಅಪಘಾತವಾಗಿತ್ತು.

  ಅಗಲಿದ ನಟನಿಗೆ ಸಂತಾಪ ಸೂಚಿಸಿದ ಮಹೇಶ್ ಬಾಬು, ಅಲ್ಲು ಅರ್ಜುನ್ಅಗಲಿದ ನಟನಿಗೆ ಸಂತಾಪ ಸೂಚಿಸಿದ ಮಹೇಶ್ ಬಾಬು, ಅಲ್ಲು ಅರ್ಜುನ್

  ಈಗ ತಂದೆ ಹರಿಕೃಷ್ಣ ಸಾವು

  ಈಗ ತಂದೆ ಹರಿಕೃಷ್ಣ ಸಾವು

  ಜೂನಿಯರ್ ಎನ್.ಟಿ.ಆರ್ ಅದೃಷ್ಟವಶಾತ್ ಪಾರಾಗಿದ್ದರು. ಜಾನಕಿ ರಾಮ್ ದುರಾದೃಷ್ಟವಶಾತ್ ಸಾವನ್ನಪ್ಪಿದರು. ಈ ಎರಡು ಘಟನೆಗಳಿಂದ ದೊಡ್ಡ ಆಘಾತದಲ್ಲಿದ್ದ ಕುಟುಂಬಕ್ಕೆ ಈಗ ಹರಿಕೃಷ್ಣ ಅವರ ಸಾವಿನ ಸುದ್ದಿ ಮತ್ತಷ್ಟು ನೋವು ತಂದಿದೆ. ಅದು ರಸ್ತೆ ಅಪಘಾತ ಎಂಬುದೇ ದೊಡ್ಡ ಆಘಾತ ನೀಡಿದೆ.

  ಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣಅಪಘಾತದಲ್ಲಿ ಎನ್‌ಟಿಆರ್ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣ

  ಅದೇ ಹೈವೇಯಲ್ಲಿ ಈ ಅಪಘಾತವೂ ಆಗಿದೆ

  ಅದೇ ಹೈವೇಯಲ್ಲಿ ಈ ಅಪಘಾತವೂ ಆಗಿದೆ

  ಜೂನಿಯರ್ ಎನ್.ಟಿ.ಆರ್ ಹಾಗೂ ಜಾನಕಿ ರಾಮ್ ಅಪಘಾತವಾಗಿದ್ದು ನೆಲ್ಲಗೊಂಡ ಹೆದ್ದಾರಿಯಲ್ಲಿ. ಈಗ ಅದೇ ಹೆದ್ದಾರಿಯಲ್ಲಿ ಹರಿಕೃಷ್ಣ ಅವರು ಅಪಘಾತವೂ ಸಂಭವಿಸಿದೆ. ಆದ್ರೆ, ಸ್ಥಳ ಬೇರೆ ಅಷ್ಟೆ.

  ಎನ್ ಟಿ ಆರ್ ಮಗನಾಗಿದ್ದರೂ ಹೆಚ್ಚು ಸಿನಿಮಾ ಮಾಡಲಿಲ್ಲ ಹರಿಕೃಷ್ಣಎನ್ ಟಿ ಆರ್ ಮಗನಾಗಿದ್ದರೂ ಹೆಚ್ಚು ಸಿನಿಮಾ ಮಾಡಲಿಲ್ಲ ಹರಿಕೃಷ್ಣ

  ಕಾರ್ ನಂಬರ್ ಸೇಮ್

  ಕಾರ್ ನಂಬರ್ ಸೇಮ್

  ಇಲ್ಲಿ ಇನ್ನೊಂದು ಕಾಕತಾಳೀಯ ಅಂದ್ರೆ, ಅಂದು ಮಗ ಜಾನಕಿ ರಾಮ್ ಅವರು ಚಲಿಸುತ್ತಿದ್ದ ಕಾರಿನ ಸಂಖ್ಯೆಯೂ ಹಾಗೂ ಇಂದು ತಂದೆ ಚಲಿಸುತ್ತಿದ್ದ ಕಾರಿನ ಸಂಖ್ಯೆಯೂ ಒಂದೇ ಆಗಿದೆ. ಅಂದ್ರೆ, ಜಾನಕಿ ರಾಮ್ ಕಾರ್ ನಂಬರ್ (AP 29 BD 2323), ಹರಿಕೃಷ್ಣ ಕಾರ್ ನಂಬರ್ (AP 28 BW 2323).

  ಜಾಗೃತಿ ಮೂಡಿಸುತ್ತಿದ್ದ ಕುಟುಂಬ

  ಜಾಗೃತಿ ಮೂಡಿಸುತ್ತಿದ್ದ ಕುಟುಂಬ

  ಜಾನಕಿ ರಾಮ್ ಅವರ ಅಪಘಾತವಾದ ಬಳಿಕ ತುಂಬಾ ನೋವು ಅನುಭವಿಸಿದ ಎನ್.ಟಿ.ಆರ್ ಕುಟುಂಬ, ನಂತರ ಜನರಲ್ಲಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಿರು. ಎನ್.ಟಿ.ಆರ್ ಕುಟುಂಬದ ಸಾರಥ್ಯದಲ್ಲಿ ತಯಾರಾಗುತ್ತಿದ್ದ ಎಲ್ಲ ಚಿತ್ರಗಳು ಪ್ರದರ್ಶನವಾಗುವುದಕ್ಕೂ ಮುಂಚೆ, ಅಪಘಾತದ ಬಗ್ಗೆ ಎಚ್ಚರದಿಂದಿರಿ. ವಾಹನ ಚಾಲನೆ ಮಾಡುವಾಗ ಹುಷಾರಾಗಿರಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಆದ್ರೆ, ವಿಧಿಯ ಆಟದ ಮುಂದೆ ಮತ್ತೊಂದು ಸಾವು ಅಪಘಾತದಲ್ಲೇ ನೋಡಬೇಕಾಯಿತು.

  English summary
  Nandamuri Harikrishna has lost his life in a road mishap at Nalgonda by meeting with a road accident early this morning. Harikrishna was on his way to Kavali during this mishap and his son Janaki Ram also died in a road mishap four years ago on 17 th December 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X