»   » ಸೆಂಚುರಿ ಹೊಡೆದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಸೆಂಚುರಿ ಹೊಡೆದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

Posted By:
Subscribe to Filmibeat Kannada

ಸುನಿ ಚೊಚ್ಚಲ ನಿರ್ದೇಶನದ ಸಿಂಪಲ್ಲಾಗ್ ಒಂದ್ Love Story ಚಿತ್ರ ಅಂತೂ ಇಂತೂ ಸೆಂಚುರಿ ಹೊಡೆದಿದೆ. 'ತುಗ್ಲಕ್' ಖ್ಯಾತಿಯ ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ತನ್ನ ವಿಭಿನ್ನ ಡೈಲಾಗ್ ಗಳ ಮೂಲಕ ಯುವಜನಾಂಗಕ್ಕೆ ಸಿಕ್ಕಾಪಟ್ಟೆ ಇಷ್ಟವಾಗಿದೆ.

ಒಂದು ಹೀರೋ ಮತ್ತೊಂದು ಹೀರೋಯಿನ್ ಹೀಗೆ ಎರಡೇ ಎರಡು ಮುಖ್ಯಪಾತ್ರಗಳನ್ನು ಇಟ್ಟುಕೊಂಡು ಸುನಿ ಭಿನ್ನ ಪ್ರಯತ್ನ ಮಾಡಿದ್ದರು. ಅವರ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನುತಟ್ಟಿದ್ದಾರೆ. ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲ ಹೀಗೆ ಋತುಮಾನದ ಹಿನ್ನೆಲೆಯಲ್ಲಿ ನಿರೂಪಣೆ ಪ್ರೇಕ್ಷಕರಿಗೆ ಇಷ್ಟವೂ ಆಗಿದೆ.


ಮನೋಹರ್ ಜೋಷಿ ಅವರ ಕ್ಯಾಮೆರಾ ಕೈಚಳಕ, ಭರತ್ ಜಿ ಅವರ ಹಿತವಾದ ಸಂಗೀತ ಚಿತ್ರದ ಮತ್ತೊಂದು ಹೈಲೈಟ್. ಜೋಷಿ ಅವರು ಬಳಸಿದ್ದ 5ಕೆ ರೆಸಲ್ಯೂಷನ್ ಕ್ಯಾಮೆರಾ ಕಣ್ಣಿಗೆ ಆಹ್ಲಾದಕರ ಅನುಭವ ನೀಡುತ್ತದೆ. (ಚಿತ್ರ ವಿಮರ್ಶೆ ಓದಿ)

ಮಲ್ಟಿಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಈ ಚಿತ್ರದ ಇನ್ನೊಂದು ವಿಶೇಷ. ಕೋರಮಂಗಲ ಹಾಗೂ ರಾಜಾಜಿನಗರದ ಪಿವಿಆರ್ ಗಳಲ್ಲಿ ಸಿಂಪಲ್ಲಾಗ್ ಒಂದ್ Love Story ಚಿತ್ರ ಶತಕ ಪೂರೈಸಿದೆ. ನಿರ್ಮಾಪಕ ಹೇಮಂತ್ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
Kannada film Simple Aag Ondh Love Story completes 100 days. The film has Rakshit Shetty and Shwetha Srivatsav in lead roles. The movie inspired from American romantic comedy '50 First Dates' (2004).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada