»   » ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯೂಟ್ಯೂಬ್ ಸೌಂಡ್!

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಯೂಟ್ಯೂಬ್ ಸೌಂಡ್!

Posted By:
Subscribe to Filmibeat Kannada
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಎಂಬ ಆಕರ್ಷಕ ಶೀರ್ಷಿಕೆಯ ಚಿತ್ರ ಇತ್ತೀಚಿಗಷ್ಟೇ ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣ ಹಂತದಲ್ಲಿದೆ. ಈ ಚಿತ್ರದ ನಿರ್ದೇಶಕರು ಸುನಿಲ್ ಕುಮಾರ್. ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್ ಈ ಚಿತ್ರದ ನಾಯಕ-ನಾಯಕಿಯರು. ಚಿತ್ರ ಪ್ರಾರಂಭವಾಗಿದೆ ಅಷ್ಟೇ, ಆದರೆ ನಿರ್ದೇಶಕರು ಈಗಲೇ ಬಹಳ ಎನ್ನುವಷ್ಟು ಖ್ಯಾತಿ ಪಡೆದಿದ್ದಾರೆ.

ಸುನಿಲ್ ಕುಮಾರ್ ತಮ್ಮ ಚಿತ್ರದ ಟೀಸರನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ, ಅದಕ್ಕೆ ಭಾರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಹತ್ತು ದಿನಗಳಲ್ಲೇ ಒಂದು ಲಕ್ಷ ಜನ ಈ ಟೀಸರ್ ನೋಡಿದ್ದಷ್ಟೇ ಅಲ್ಲ, ಮೆಚ್ಚುಗೆಯನ್ನೂ ಸೂಚಿಸಿದ್ದಾರಂತೆ. ಮುಹೂರ್ತದ ದಿನವೇ ತೋರಿಸಲಾದ ಈ ಟೀಸರ್ ಪತ್ರಕರ್ತರಿಂದಲೂ ಮೆಚ್ಚುಗೆ ಗಳಿಸಿತ್ತು.

ಅದರಲ್ಲಿರುವ ಸಂಭಾಷಣೆ ತುಣುಕುಗಳು ಹೀಗಿವೆ...
* ಗಳಿಗೆ ಸಿದ್ಧ ಒಳಗೊಳಗೆ ಮಾಡ್ದಾ ಅಂದಂಗೆ...
* ಕೈ ಬಿಡ್ತೀಯಾ, ನಿನ್ನಲ್ಲೇ ಕೇಳ್ತಾ ಇರೋದು, ಕೈ ಬಿಡ್ತೀಯಾ... ಹಲೋ, ಹಿಡ್ಕೊಂಡಿರೋ ಕೈ ಬಿಡ್ತೀಯಾಂತಾ...
* ಹುಡುಗೀರು ಬ್ಯಾಕಲ್ಲಿ ತುಂಬಾ ಸುಂದರವಾಗಿ ಕಾಣ್ತಾರೆ.., ಆದ್ರೆ ಪ್ರೆಂಟಲ್ಲಿ ಏನೂ ಇರಲ್ಲ...!
* ಕೂತ್ಕೊಂಡು ರಂಗೋಲಿ ಹಾಕೋ ನಿನಗೇ ಇಷ್ಟು ಪೊಗರಿರಬೇಕಾದರೆ ನಿಂತ್ಕೊಂಡು ಧಮ್ ಹೊಡೆಯೋ ನನಗೆಷ್ಟಿರ ಬೇಡ...

ಟೀಸರ್ ಗಮನಸೆಳೆಯಲು ಮುಖ್ಯ ಕಾರಣ ಅರಲ್ಲಿರುವ ಹರಿತವಾದ ಸಂಭಾಷಣೆ ಹಾಗೂ ನೋಡಿದವರಿಗೆ ಕಚಗುಳಿಯಿಡುವಂತ ದೃಶ್ಯವೈಭವ. ಈ ಮೊದಲು ಯೋಗರಾಜ್ ಭಟ್ಟರ 'ಜಾಕಿ' ಚಿತ್ರದ ಹಾಡುಗಳು, ಗೋವಿಂದಾಯನಮಃ ಚಿತ್ರದ 'ಪ್ಯಾರ್ಗೆ ಆಗ್ಬಿಟ್ಟೈತೆ' ಹಾಗೂ ನಿಂಬೆಹುಳಿ ಚಿತ್ರದ 'ರಾಮಾ ಶ್ರೀರಾಮಾ' ಹಾಡುಗಳು ಯೂಟ್ಯೂಬಿನಲ್ಲಿ ಜನಪ್ರಿಯವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. (ಯೂಟ್ಯೂಬ್ ಲಿಂಕ್)

ಒಟ್ಟಿನಲ್ಲಿ ಹೊಸ ನಿರ್ದೇಶಕ ಹಾಗೂ ಚಿತ್ರತಂಡದ ಚಿತ್ರವೊಂದು ಚಿತ್ರೀಕರಣ ಪ್ರಾರಂಭಿಸಿದ ತಕ್ಷಣ ಈ ಪರಿಯ ಜನಪ್ರಿಯತೆ ಪಡೆದಿರುವುದು ಅಚ್ಚರಿ ಮೂಡಿಸಿದೆ. ಈ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಆಕರ್ಷಕ ಶೀರ್ಷಿಕೆಯಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಯೂಟ್ಯೂಬ್ ಮೂಲಕ ಲಕ್ಷಕ್ಕೂ ಹೆಚ್ಚು ಜನರ ಗಮನಸೆಳೆದಿರುವ ಈ ಚಿತ್ರ, ತೆರೆಗೆ ಬಂದಾಗ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದೀಗ ಕುತೂಹಲದ ವಿಷಯ. (ಒನ್ ಇಂಡಿಯಾ ಕನ್ನಡ)

English summary
Simple Aag Ondh Love Story titled movie teaser is in Youtube now. This teaser already got more than one lakh Hits. This movie direction is by Sunil Kumar. Rakshith Shetty and Shwetha Srivatsav are the lead. 
 
Please Wait while comments are loading...