»   » ಸಿಂಪಲ್ಲಾಗೇ ರು.8 ಕೋಟಿ ಬಾಚಿದ ಲವ್ ಸ್ಟೋರಿ

ಸಿಂಪಲ್ಲಾಗೇ ರು.8 ಕೋಟಿ ಬಾಚಿದ ಲವ್ ಸ್ಟೋರಿ

Posted By:
Subscribe to Filmibeat Kannada

ಹೊಸತನದಿಂದ ಕೂಡಿದ ಹೊಸ ಪ್ರಯತ್ನಕ್ಕೆ ಯಾವಾಗಲೂ ಬೆಲೆ ಇದ್ದೇ ಇರುತ್ತದೆ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿದೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ. ಬೆಂಗಳೂರು ಗಾಂಧಿನಗರದ ಅಪರ್ಣಾ ಚಿತ್ರಮಂದಿರದಲ್ಲಿ ಇನ್ನೇನು ಅರ್ಧ ಶತಕ ಬಾರಿಸಬೇಕಿತ್ತು ಅಷ್ಟರಲ್ಲಾಗಲೇ ಚಿತ್ರ ಎತ್ತಂಗಡಿಯಾಯಿತು.

ಆದರೆ ಪಿವಿಆರ್ ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರವನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ. ಚಿತ್ರ ತೆರೆಕಂಡು ಏಳು ವಾರಗಳಲ್ಲಿ ಒಟ್ಟು ರು.8.8 ಕೋಟಿ ಗಳಿಕೆ ಮಾಡಿದೆ. ಸರಿಸುಮಾರು ರು.1.20 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು.


ಚಿತ್ರದ ಸ್ಯಾಟಲೈಟ್ ರೈಟ್ಸ್ ನಿಂದಲೇ ರು.1.90 ಕೋಟಿ ಬಂದಿತ್ತು. ಮೊದಲ ವಾರ ರು.1.90 ಕೋಟಿ, ಎರಡು ಮೂರು ಹಾಗೂ ನಾಲ್ಕನೇ ವಾರದಲ್ಲಿ ಕ್ರಮವಾಗಿ 1 ಕೋಟಿ, 70 ಲಕ್ಷ ಹಾಗೂ 60 ಲಕ್ಷ ಗಳಿಸಿದೆ. ಏಳನೇ ವಾರದಲ್ಲಿ ರು.18 ಲಕ್ಷ ಗಳಿಕೆ ಮಾಡಿದೆ.

ಬೆಂಗಳೂರು, ಧಾರಾವಾಡ, ಹುಬ್ಬಳ್ಳಿ, ದಾವಣಗೆರೆ, ಮೈಸೂರಿನಲ್ಲಿ ಚಿತ್ರ ಅರ್ಧ ಶತಕ ಬಾರಿಸಲು ಸಿದ್ಧವಾಗಿದೆ. ಈ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಚಿತ್ರದ ನಿರ್ದೇಶಕ ಸುನಿ ಸಿದ್ಧತೆಯಲ್ಲಿದ್ದಾರೆ. (ಚಿತ್ರ ವಿಮರ್ಶೆ ಓದಿ)

ಒಂದು ಸೀದಾಸಾದಾ ಲವ್ ಸ್ಟೋರಿಯನ್ನು ಭಿನ್ನವಾಗಿ ಹೇಳಿ, ಅದಕ್ಕೊಂದು ರೂಪ ಕೊಟ್ಟು ಚೌಕಟ್ಟು ಹಾಕಿ ಯುವಕರನ್ನು ಸೆಳೆಯುವಂತೆ ಅಚ್ಚುಕಟ್ಟಾಗಿ ಡೈಲಾಗ್ ಗಳನ್ನು ಹೆಣೆದು ಗೆದ್ದಿದ್ದಾರೆ ಸುನಿ. ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್, ಶ್ರೀನಗರ ಕಿಟ್ಟಿ, ಆರ್ ಜೆ ರಚನಾ, ನೆ.ಲ.ನರೇಂದ್ರಬಾಬು ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
New comers 'Simple Agi Ondh Love Story' box offfice report, the seventh week gross collection is Rs.8.8 crores says SALOS team. The film will be 50 days in 11 theatres in Bangalore, Dharwad, Davanagere, Hubli and Mysore said director Suni.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada