For Quick Alerts
  ALLOW NOTIFICATIONS  
  For Daily Alerts

  ಎರಡು ವಾರದ ಅಂತರದಲ್ಲಿ ಈ ನಿರ್ದೇಶಕನ ಎರಡು ಸಿನಿಮಾ ರಿಲೀಸ್: ಏನಿದು ಲೆಕ್ಕಾಚಾರ?

  |

  ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಒಂದು ವಾರಗಳ ಕಾಲ ಕಣ್ಣೀರು ಹಾಕಿದ್ದ ಸ್ಯಾಂಡಲ್‌ವುಡ್ ಎಂದಿನಂತೆ ಸಿನಿಮಾ ಚಟುವಟಿಕೆಗಳನ್ನು ಆರಂಭಿಸಿದೆ. ಕನ್ನಡದ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಆದರೆ, ಈ ಎರಡೂ ಸಿನಿಮಾಗಳ ನಿರ್ದೇಶಕರು ಕೂಡ ಒಬ್ಬರೇ ಅನ್ನುವುದು ವಿಶೇಷ. ಸಿಂಪಲ್ ಸುನಿ ನಿರ್ದೇಶನದ ಎರಡು ಸಿನಿಮಾ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿದೆ. ಶರಣ್ ಅಭಿನಯದ ಅವತಾರ ಪುರುಷ ಹಾಗೂ ಗಣೇಶ್ ಅಭಿನಯದ ಸಖತ್. ಒಬ್ಬರೇ ನಿರ್ದೇಶಿಸಿದ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿರುವುದು ಯಾಕೆ? ಎರಡು ಸಿನಿಮಾಗಳ ನಿರ್ಮಾಪಕರ ಲೆಕ್ಕಾಚಾರವೇನು? ನಿರ್ದೇಶಕ ಸಿಂಪಲ್ ಸುನಿ ಏನಂತಾರೆ? ಇಲ್ಲಿದೆ ನೋಡಿ.

  ಸಿಂಪಲ್ ಸುನಿ ನಿರ್ದೇಶನದ ಎರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಶರಣ್ ಅಭಿನಯದ ಅವತಾರ ಪುರುಷ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಸಿನಿಮಾಗಳು ಕೇವಲ ಎರಡು ವಾರಗಳ ಅಂತರದಲ್ಲಿ ರಿಲೀಸ್ ಆಗುತ್ತಿದೆ. ಈ ಎರಡೂ ಸಿನಿಮಾಗಳ ನಿರ್ದೇಶಕ ಸಿಂಪಲ್ ಸುನಿ ಸಿಕ್ಕಾ-ಪಟ್ಟೆ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

  ಗಣೇಶ್ ಅಭಿನಯದ ಸಖತ್ ಸಿನಿಮಾ

  ಗಣೇಶ್ ಅಭಿನಯದ ಸಖತ್ ಸಿನಿಮಾ

  ಗಣೇಶ್ ಅಭಿನಯದ ಸಖತ್ ಸಿನಿಮಾ ಇದೇ ನವೆಂಬರ್ 26ರಂದು ರಿಲೀಸ್ ಆಗಿತ್ತಿದೆ. ಅದೇ ಶರಣ್ ಅಭಿನಯದ ಅವತಾರ ಪುರುಷ ಚಾಪ್ಟರ್ 1 ಡಿಸೆಂಬರ್ 10ರಂದು ರಿಲೀಸ್‌ಗೆ ರೆಡಿಯಾಗಿದೆ. ಎರಡು ವಾರಗಳ ಅಂತರದಲ್ಲಿ ಒಬ್ಬನೇ ನಿರ್ದೇಶಕನ ಎರಡು ಹಾಸ್ಯ ಪ್ರಧಾನ ಚಿತ್ರಗಳು ಬಿಡುಗಡೆಯಾಗುತ್ತಿದೆ. ಹೀಗಾಗಿ ಪ್ರೇಕ್ಷಕರು ಯಾವ ಸಿನಿಮಾ ನೋಡಬೇಕು? ಎರಡೂ ಸಿನಿಮಾ ಬಗ್ಗೆ ನಿರ್ದೇಶಕ ಸುನಿ ಹೇಳಿದ ಮಾತು ಇಲ್ಲಿದೆ.

  ಸಖತ್ ಹಾಗೂ ಅವತಾರ ಪುರುಷ ಸಿನಿಮಾ ಬಿಡುಗಡೆ

  ಸಖತ್ ಹಾಗೂ ಅವತಾರ ಪುರುಷ ಸಿನಿಮಾ ಬಿಡುಗಡೆ

  ಸಖತ್ ಹಾಗೂ ಅವತಾರ ಪುರುಷ ಸಿನಿಮಾ ಬಿಡುಗಡೆಯಾಗುತ್ತಿರುವ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಖುಷಿಯಾಗಿದ್ದಾರೆ. ''2019ನಲ್ಲಿ ಅವತಾರ ಪುರುಷ ಆರಂಭ ಆಗಿತ್ತು. 2020ಯಲ್ಲಿ ಸಖತ್ ಸಿನಿಮಾ ಶೂಟಿಂಗ್ ಶುರುವಾಗಿತ್ತು. ಈಗ ಎರಡೂ ಸಿನಿಮಾಗಳೂ ಬಿಡುಗಡೆಗೆ ಸಜ್ಜಾಗಿವೆ. ಅವತಾರ ಪುರುಷ ಪಾರ್ಟ್ 1, ಪಾರ್ಟು 2 ಆಗಿದ್ದರಿಂದ ಸ್ವಲ್ಪ ತಡವಾಗಿದೆ. ಜೊತೆಗೆ ಕೊರೊನಾ ಬಂದಿದ್ದರಿಂದ ಶೂಟಿಂಗ್ ಲೇಟ್ ಆಗಿದೆ ಅಷ್ಟೇ. ಎರಡೂ ಚಿತ್ರಗಳಿಗೂ ಒಬ್ಬನೇ ನಿರ್ದೇಶಕ ಆಗಿದ್ದರೂ ಅವತಾರ ಪುರುಷ ಶರಣ್ ಸಿನಿಮಾ ಅಂತ ಗುರುತಿಸಿಕೊಳ್ಳುತ್ತೆ. ಸಖತ್ ಗಣೇಶ್ ಸಿನಿಮಾ ಅಂತ ಗುರುತಿಸಿಕೊಳ್ಳುತ್ತೆ. ಹಾಗಾಗಿ ಪ್ರೇಕ್ಷಕರು ಗೊಂದಲವಿಲ್ಲದೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ." ಅಂತಾರೆ ನಿರ್ದೇಶಕ ಸುನಿ.

  ಅಪ್ಪು ಅಗಲಿಕೆ ನೋವಿನಲ್ಲಿ ಇಡೀ ರಾಜ್ಯದ ಜನತೆ

  ಅಪ್ಪು ಅಗಲಿಕೆ ನೋವಿನಲ್ಲಿ ಇಡೀ ರಾಜ್ಯದ ಜನತೆ

  " ಸಖತ್ ಸಿನಿಮಾ ನವೆಂಬರ್ 12ಕ್ಕೆ ರಿಲೀಸ್ ಮಾಡ್ಬೇಕು ಅಂತ ಪ್ಲ್ಯಾನ್ ಆಗಿತ್ತು. ಆದರೆ, ಅಪ್ಪು ಅಗಲಿಕೆ ನೋವಿನಲ್ಲಿ ಇಡೀ ರಾಜ್ಯದ ಜನತೆ ಇರುವಾಗ ಸಿನಿಮಾ ಬಿಡುಗಡೆ ಸರಿ ಹೋಗುವುದಿಲ್ಲ. ಹೀಗಾಗಿ ಸಖತ್ ಸಿನಿಮಾವನ್ನು ನವೆಂಬರ್ 26ಕ್ಕೆ ಪೋಸ್ಟ್ ಪೋನ್ ಮಾಡಲಾಗಿದೆ. ಇಲ್ಲದೆ ಹೋಗಿದ್ದಲ್ಲಿ ಅವತಾರ ಪುರುಷ ಹಾಗೂ ಸಖತ್ ಸಿನಿಮಾಗಳ ನಡುವೆ ಕನಿಷ್ಟ ಒಂದು ತಿಂಗಳ ಗ್ಯಾಪ್ ಇರುತ್ತಿತ್ತು. ಆದರೆ, ಎರಡೂ ಸಿನಿಮಾಗಳು ಹಾಸ್ಯದ ಹಿನ್ನೆಲೆ ಇದ್ದರೂ ಸಖತ್ ಚಿತ್ರದಲ್ಲಿ ಗಂಭೀರತೆ ಇದೆ. ಈ ಕಾರಣಕ್ಕೆ ಪ್ರೇಕ್ಷಕರಿಗೆ ಈ ಎರಡೂ ಚಿತ್ರಗಳೂ ಇಷ್ಟ ಆಗುತ್ತೆ" ಅನ್ನೋದು ಸುನಿ ಮಾತು.

  ನಿರ್ದೇಶಕ ಸಿಂಪಲ್ ಸುನಿ ಮಾತು

  ನಿರ್ದೇಶಕ ಸಿಂಪಲ್ ಸುನಿ ಮಾತು

  "ಗಣೇಶ್ ನಟನೆಯ ಸಖತ್ ಸಿನಿಮಾವನ್ನು ಸುಪ್ರಿತ್ ಹಾಗೂ ಗಂಗಾಧರ್ ವಿತರಣೆ ಮಾಡುತ್ತಿದ್ದಾರೆ. ಹಾಗೇ ಶರಣ್ ನಟನೆಯ ಅವತಾರ ಪುರುಷ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಮೋಹನ್ ಫಿಲಂಸ್ ಸಂಸ್ಥೆ ವಿತರಣೆ ಮಾಡುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳು ಕಮ್ಮಿ ಅಂದ್ರೂ 10 ಕೋಟಿ ಶೇರ್ ಬರುತ್ತೆ ಅಂತ ನಂಬಿದ್ದೇನೆ." ಅಂತಾರೆ ನಿರ್ದೇಶಕ ಸಿಂಪಲ್ ಸುನಿ.

  ಶರಣ್ ನಟನೆಯ ಅವತಾರ ಪುರುಷ

  ಶರಣ್ ನಟನೆಯ ಅವತಾರ ಪುರುಷ

  ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಹಾಗೂ ಶರಣ್ ನಟನೆಯ ಅವತಾರ ಪುರುಷ ಎರಡೂ ದೊಡ್ಡ ಸಿನಿಮಾಗಳೇ. ಹೀಗಾಗಿ ಕಮ್ಮಿ ಅಂದ್ರೂ 200 ಚಿತ್ರಮಂದಿರಗಳಲ್ಲಿ ಎರಡೂ ಸಿನಿಮಾಗಳನ್ನು ಬಿಡುಗಡೆ ಮಾಡೋಕೆ ಚಿತ್ರರಂಗ ಸಜ್ಜಾಗಿದೆ. ಕೋಟಿಗೊಬ್ಬ 3, ಭಜರಂಗಿ, ಸಲಗ ಬಳಿಕ 2021ರಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿರೋ ಸಿನಿಮಾಗಳಿವು. ಎಲ್ಲಕ್ಕಿಂತ ಹೆಚ್ಚಾಗಿ ಎರಡೂ ಸಿನಿಮಾಗಳಲ್ಲೂ ಹಾಸ್ಯದ ಝಲಕ್ ಇರುವುದರಿಂದ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

  English summary
  Simple Suni Directional Sharan, Ashika Ranganath Starrer Avatara Purusha releasing on november 26 and Ganesh starrer Sakath movie releasing on December 10. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X