»   » ಚಮಕ್ ಕೊಟ್ಟ ನಂತರ 'ಬಜಾರ್'ಗೆ ಬಂದ ಸಿಂಪಲ್ ಸುನಿ

ಚಮಕ್ ಕೊಟ್ಟ ನಂತರ 'ಬಜಾರ್'ಗೆ ಬಂದ ಸಿಂಪಲ್ ಸುನಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಗೆ ವೆರೈಟಿ ಸಿನಿಮಾಗಳನ್ನ ಕೊಟ್ಟಿರುವ ನಿರ್ದೇಶಕ ಸುನಿ ಚಮಕ್ ಚಿತ್ರದ ಬಳಿಕ ಹೊಸ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ನಾಯಕ ನಟನನ್ನ ಚಿತ್ರರಂಗಕ್ಕೆ ಪರಿಚಯಿಸಲು ಸಿಂಪಲ್ ಸುನಿ ಯೋಜನೆ ಹಾಕಿಕೊಂಡಿದ್ದಾರೆ.

ಸುನಿ ತಮ್ಮ ಮುಂದಿನ ಚಿತ್ರಕ್ಕೆ ಬಜಾರ್ ಎಂದು ಟೈಟಲ್ ಫಿಕ್ಸ್ ಮಾಡಿದ್ದು ಧನ್ವೀರ್ ಗೌಡ ಎನ್ನುವ ಪ್ರತಿಭೆಯನ್ನ ಈ ಮೂಲಕ ಸಿನಿಮಾರಂಗಕ್ಕೆ ನಾಯಕನಾಗಿ ಇಂಟ್ರಡ್ಯೂಸ್ ಮಾಡಲಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ಪಾರಿವಾಳ ಜೂಜಾಟ ಹಾಗೂ ಸ್ಪರ್ಧೆಯ ಬಗ್ಗೆ ಸಿನಿಮಾ ಕಥೆಯನ್ನ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಸುನಿ.

simple suni next direction movie name is bazaar

ರವಿ ಬಸ್ರೂರ್ ಬಜಾರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದು ಸಂತೋಷ್ ರೈ ಪಾತಾಜೆ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಲಿದ್ದಾರೆ. ಮೂಲಗಳ ಪ್ರಕಾರ ಬಜಾರ್ ಚಿತ್ರ ಸಂಕ್ರಾಂತಿ ಹಬ್ಬದಂದು ಸೆಟ್ಟೇರಲಿದೆ.

simple suni next direction movie name is bazaar

ಧೈರ್ಯಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಅದಿತಿ ಪ್ರಭುದೇವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ. ಈ ಬಗ್ಗೆ ಅಧಿತಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

simple suni next direction movie name is bazaar

ಬಜಾರ್ ಟೈಟಲ್ ಮಾಸ್ ಫೀಲ್ ನೀಡುತ್ತಿದ್ದು, ಚಮಕ್ ಸಿನಿಮಾ ಮೂಲಕ ಎಮೋಷನಲ್ ಕಥೆಯನ್ನ ಪ್ರಯೋಗ ಮಾಡಿದ್ದ ಸುನಿ ಬಜಾರ್ ಚಿತ್ರ ನಿರ್ದೇಶನ ಮಾಡಿ ಮಾಸ್ ಸಿನಿಮಾಗಳನ್ನೂ ನಿರ್ದೇಶನ ಮಾಡಬಲ್ಲರು ಎಂದು ನಿರೂಪಿಸಲಿದ್ದಾರೆ.

English summary
Kannada film director Simple Suni unveiled Name of his upcoming Movie. suni directing bazaar movie. Dhanveer Gowda is acting as a hero in the movie. The movie will be start from january 14th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X