»   » 'ಧೂಮ್ರಪಾನ' ಜಾಹೀರಾತಿನ ಆ ಪುಟ್ಟ ಬಾಲಕಿ ಈಗ ಕನ್ನಡದಲ್ಲಿ ನಾಯಕಿ.!

'ಧೂಮ್ರಪಾನ' ಜಾಹೀರಾತಿನ ಆ ಪುಟ್ಟ ಬಾಲಕಿ ಈಗ ಕನ್ನಡದಲ್ಲಿ ನಾಯಕಿ.!

Posted By:
Subscribe to Filmibeat Kannada
'ಧೂಮ್ರಪಾನ' ಜಾಹೀರಾತಿನ ಆ ಪುಟ್ಟ ಬಾಲಕಿ ಈಗ ಕನ್ನಡದಲ್ಲಿ ನಾಯಕಿ.! | Filmibeat Kannada

ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋದಾಗ ಆರಂಭದಲ್ಲಿ ಕೆಲವು ಜಾಹೀರಾತುಗಳು ಪ್ರಸಾರವಾಗುತ್ತೆ. ಅದರಲ್ಲಿ ತಂಬಾಕು, ಮತ್ತು ಧೂಮಪಾನ ನಿಷೇಧ ಜಾಹೀರಾತುಗಳನ್ನ ಗಮನಿಸಿರಬಹುದು.

ಕಚೇರಿಯಿಂದ ಬರುವ ಅಪ್ಪ, ಅಪ್ಪನ ಆಗಮನವನ್ನೇ ಎದುರು ನೋಡುತ್ತ ಕೂತ ಪುಟ್ಟ ಮಗು ತನ್ನ ತಂದೆ ಧೂಮಪಾನ ಮಾಡುವುದನ್ನು ನೋಡುತ್ತಾಳೆ. ಧೂಮಪಾನದಿಂದ ಏನು ಪರಿಣಾಮ ಆಗುತ್ತೆ ಎಂಬುದನ್ನ ಟಿವಿನಲ್ಲಿ ನೋಡುವ ಅಪ್ಪ ಮಗಳಿಗಾಗಿ ಸಿಗರೇಟು ಬಿಸಾಕಿ ತನ್ನ ಪುಟ್ಟ ಕಂದನನ್ನು ತಬ್ಬಿಕೊಳ್ಳುತ್ತಾರೆ. ಈ ಪುಟ್ಟ ಬಾಲಕಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಅನೇಕ ಅವಕಾಶಗಳು ಹುಡುಕಿಕೊಂಡು ಬಂದಿದ್ದರೂ ಕನ್ನಡ ಸಿನಿಮಾದಲ್ಲಿ ನಟಿಸಲು ಮನಸ್ಸು ಮಾಡಿರುವ ಸಿಮ್ರಾನ್ ನಾಟೇಕರ್ ಈಗ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಯಾವ ಚಿತ್ರದಲ್ಲಿ ಮುಂದೆ ಓದಿ....?

'ಕಾಜಲ್' ಚಿತ್ರಕ್ಕೆ ಸಿಮ್ರಾನ್ ನಾಯಕಿ.!

ಧೂಮಪಾನ ಜಾಹೀರಾತು ಮೂಲಕ ಪ್ರತಿಯೊಬ್ಬರ ಗಮನ ಸೆಳೆದಿದ್ದ ಸಿಮ್ರಾನ್ 'ಕಾಜಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಹಿಂದೆ ‘ನಾನಿ' ಹಾಗೂ ಇದೀಗ ವಸಿಷ್ಠ ಸಿಂಹ ಜತೆಗೆ ‘ಕಾಲಚಕ್ರ' ಸಿನಿಮಾ ನಿರ್ದೇಶನ ಮಾಡುತ್ತಿರುವ ಸುಮಂತ್ ಕ್ರಾಂತಿ ಅವರ ಸಿಮ್ರಾನ್ ಅವರನ್ನ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ.

ಸಂತೋಷ್ ಜೊತೆ ಸ್ಕ್ರೀನ್ ಶೇರ್

'ಗಣಪ' ಮತ್ತು 'ಕರಿಯ-2' ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ 'ಕಾಜಲ್'. ಈ ಚಿತ್ರದಲ್ಲಿ ಸಿಮ್ರಾನ್, ಸಂತೋಷ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆನೇಕಲ್ ಬಾಲರಾಜ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

10ನೇ ತರಗತಿ ಓದುತ್ತಿರುವ ಸಿಮ್ರಾನ್

ಮುಂಬೈನ ಖಾಸಗಿ ಹೋಟೆಲ್ ಮ್ಯಾನೇಜರ್ ಪುತ್ರಿಯಾಗಿರುವ ಸಿಮ್ರನ್, ಸದ್ಯ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಮಗುವಾಗಿದ್ದಾಗಲೇ ಜಾಹೀರಾತು ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಿಮ್ರನ್, ಕೇಂದ್ರ ಸರ್ಕಾರದ ‘ಸ್ಮೋಕಿಂಗ್ ಕಿಲ್ಸ್' ಜಾಹೀರಾತಿನ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು.

ಬಾಲಿವುಡ್ ಬಿಟ್ಟು ಬಂದ ಸಿಮ್ರಾನ್

ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟು ಗುರುತಿಸಿಕೊಂಡಿರುವ ಸಿಮ್ರಾನ್ ಗೆ ಬಾಲಿವುಡ್ ನಿಂದ ನಾಲ್ಕೈದು ಸಿನಿಮಾ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಆದ್ರೆ, ಕಥೆ ಇಷ್ಟವಾಗದ ಕಾರಣ ಆ ಸಿನಿಮಾಗಳನ್ನ ಕೈಬಿಟ್ಟಿದ್ದಾರೆ. ಆದ್ರೆ, ಸುಮಂತ್ ಕ್ರಾಂತಿ ‘ಕಾಜಲ್' ಕಥೆಗೆ ಸಿಮ್ರಾನ್ ಅವರನ್ನ ನಮ್ಮ ಇಂಡಸ್ಟ್ರಿಗೆ ಬರುವಂತೆ ಮಾಡಿದೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ ಸಿಮ್ರಾನ್. ಇದೇ ತಿಂಗಳು 31 ರಂದು ಸಂತೋಷ್ ಅವರ ಹುಟ್ಟುಹಬ್ಬವಿದ್ದು, ಅದೇ ದಿನ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆ.

English summary
Wonder how girl in familiar no-smoking ad looks now? Bet you won't recognise Simran Natekar that easily. latest report Simran Natekar seleceted to as a heroine for kannada movie Kajal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada