For Quick Alerts
  ALLOW NOTIFICATIONS  
  For Daily Alerts

  ನಟಿಯಾಗಿದ್ದ ಸಿಂಧು ಲೋಕನಾಥ್ ಈಗ ನಿರ್ಮಾಪಕಿ

  By Pavithra
  |

  ನಟಿ ಸಿಂಧು ಲೋಕನಾಥ್ ಸ್ಯಾಂಡಲ್ ವುಡ್ ನಲ್ಲಿ ಆಯ್ದ ಒಳ್ಳೆಯ ಸಿನಿಮಾಗಳಲ್ಲಿ ಮಾತ್ರ ಅಭಿನಯ ಮಾಡುತ್ತಾರೆ. 'ಹೀಗೊಂದು ದಿನ' ಚಿತ್ರದಲ್ಲಿ ಅಭಿನಯಿಸಿದ ನಂತರ ಇದೀಗ ಅವರು ಒಂದು ಕಿರುಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

  ಈ ಶಾರ್ಟ್ ಮೂವಿ ಮೂಲಕ ಸಿಂಧು ನಿರ್ಮಾಪಕಿ ಆಗಿ ಹಾಗೂ ಕಥೆಗಾರ್ತಿ ಆಗಿ ಬದಲಾಗಿದ್ದಾರೆ. 30 ವರ್ಷವಾದ ನಂತರ ಹೆಣ್ಣು ಮಕ್ಕಳಿಗೆ ಮದುವೆ ಬಗ್ಗೆ ಸಾಮಾನ್ಯವಾಗಿ ಜನರು ಕೇಳುವ ಪ್ರಶ್ನೆಗಳು ಹಾಗೂ ಮನೆಯವರ ಪರಿಸ್ಥಿತಿ ಇವುಗಳ ಬಗೆಗಿನ ಕಥೆ ಇದಾಗಿದ್ದು ಸಖತ್ ಸ್ಟುಡಿಯೋ ಮೂಲಕ ಕಿರುಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

  'ಹೀಗೊಂದು ದಿನ' ಸಿನಿಮಾ ನೋಡಿ ಖುಷಿಯಾದ ಸ್ಯಾಂಡಲ್ ವುಡ್ ನಟ, ನಟಿಯರು'ಹೀಗೊಂದು ದಿನ' ಸಿನಿಮಾ ನೋಡಿ ಖುಷಿಯಾದ ಸ್ಯಾಂಡಲ್ ವುಡ್ ನಟ, ನಟಿಯರು

  'ಜಯಮ್ಮನ ಮಗ' ಸಿನಿಮಾ ಖ್ಯಾತಿಯ ವಿಕಾಸ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ವಿಕ್ರಂ ಯೋಗಾನಂದ್ ಕ್ಯಾಮೆರಾ ವರ್ಕ್ ಮಾಡಿದ್ದು, 'ಐ ಆಮ್ 30' ಶಾರ್ಟ್ ಫಿಲ್ಮಂ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

  ಸಿನಿಮಾದಲ್ಲಿ ಕೆಲಸ ಮಾಡುವ ತಂತ್ರಜ್ಞರೇ 'ಐ ಆಮ್ 30' ಕಿರುಚಿತ್ರದಲ್ಲಿ ಕೆಲಸ ಮಾಡಿದ್ದು ಸಿಂಧು ಲೋಕನಾಥ್ ಜೊತೆಯಲ್ಲಿ ಸನ್ನಿ ಮಹೀಪಾಲ್, ಸೀತಾ ಕೋಟೆ, ಶ್ರೀನಿವಾಸ್ ಚೆಬ್ಬಿ, ಸಂಜನಾ ಪ್ರಕಾಶ್, ಪವನ್ ವೇಣುಗೋಪಾಲ್, ಅಪೂರ್ವ ತೇಜ್ ಇನ್ನು ಅನೇಕರು ಅಭಿನಯ ಮಾಡಿದ್ದಾರೆ.

  English summary
  Kannada actress Sindhu Lokanath has produced a short film I Am 30. Sindhu has acted in a short film alongside production.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X