For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಕೆಜಿಎಫ್'ಗೆ ಚಕ್ರವ್ಯೂಹ ನಿರ್ಮಿಸಿದೆ ಈ 6 ಬಿಗ್ಗೆಸ್ಟ್ ಚಿತ್ರಗಳು.!

  |

  'ಕೆಜಿಎಫ್' ಈಗ ಕೇವಲ ಕನ್ನಡದಲ್ಲಿ ಮಾತ್ರ ಹವಾ ಎಬ್ಬಿಸಿಲ್ಲ. ಸೌತ್ ಇಂಡಿಯಾ ಜೊತೆ ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಸಿದ್ಧವಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೆಜಿಎಫ್ ತೆರೆಕಾಣುತ್ತಿದೆ. ಈ ಮೂಲಕ ಐದು ಭಾಷೆಯ ಚಿತ್ರಗಳಿಗೂ ಕೆಜಿಎಫ್ ಸವಾಲ್ ಹಾಕಿದೆ.

  ಡಿಸೆಂಬರ್ 21 ರಂದು 'ಕೆಜಿಎಫ್' ತುಂಬಾ ದೊಡ್ಡ ಮಟ್ಟದಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಅದೇ ತಿಂಗಳು ತೆರೆಕಾಣಲು ಮತ್ತಷ್ಟು ಬಿಗ್ ಬಜೆಟ್ ಸಿನಿಮಾಗಳು ಸಜ್ಜಾಗಿ ನಿಂತಿದೆ.

  'ಕೆಜಿಎಫ್' ಟ್ರೈಲರ್ ನೋಡಿ ಅಚ್ಚರಿಗೊಂಡ ಪರಭಾಷೆ ತಾರೆಯರು

  ಕೆಜಿಎಫ್ ಎಲ್ಲ ಭಾಷೆಯಲ್ಲೂ ಬರ್ತಿರುವುದರಿಂದ ಎಲ್ಲಾ ಭಾಷೆಯ ಚಿತ್ರಗಳನ್ನ ಕೆಜಿಎಫ್ ಎದುರಿಸಬೇಕಾಗಿದೆ. ಹಾಗಂತ ಇದು ರಿಯಲ್ ಕಾಂಪಿಟೇಶನ್ ಅಂತ ಅಲ್ಲ. ಬಟ್, ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಈ ಚಿತ್ರಗಳು ಕೆಜಿಎಫ್ ಗೆ ಸ್ವಲ್ಪ ಅಡ್ಡಿಯಾಗಲಿದ್ಯಾ ಎಂಬ ಕುತೂಹಲ ಕಾಡುತ್ತಿದೆ. ಅಷ್ಟಕ್ಕೂ, ಕೆಜಿಎಫ್ ಹಿಂದೆ ಮತ್ತು ಮುಂದೆ ಬರಲಿರುವ ಆ ಬೆಸ್ಟ್ ಸಿನಿಮಾಗಳು ಯಾವುದು.? ಮುಂದೆ ಓದಿ....

  ಮೋಹನ್ ಲಾಲ್ ಸಿನಿಮಾ

  ಮೋಹನ್ ಲಾಲ್ ಸಿನಿಮಾ

  ಕೆಜಿಎಫ್ ಸಿನಿಮಾ ಮಲಯಾಳಂ ಭಾಷೆಯಲ್ಲೂ ಬರ್ತಿದೆ. ಇದು ಸಹಜವಾಗಿ ಮಲಯಾಳಂ ಪ್ರೇಕ್ಷಕರ ಗಮನ ಸೆಳೆಯಲು ಕೆಜಿಎಫ್ ಸಿದ್ಧವಾಗಿದೆ. ಆದ್ರೆ, ಕೆಜಿಎಫ್ ಗೂ ಒಂದು ವಾರ ಮುಂಚೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಒಡಿಯನ್' ಸಿನಿಮಾ ಬಿಡುಗಡೆಯಾಗ್ತಿರುವುದು ಕೆಜಿಎಫ್ ಗೆ ಸ್ವಲ್ಪ ಹಿನ್ನೆಡೆಯಾಗಬಹುದು.

  ಹಿಸ್ಟರಿ ರಿಪೀಟ್ಸ್: ಅಂದು ರವಿಚಂದ್ರನ್, ಇಂದು ಯಶ್ 'ಕೆಜಿಎಫ್'

  ಕೆಜಿಎಫ್ ದಿನವೇ 'ಯಾತ್ರ' ಆರಂಭ

  ಕೆಜಿಎಫ್ ದಿನವೇ 'ಯಾತ್ರ' ಆರಂಭ

  ಡಿಸೆಂಬರ್ 21 ರಂದು ಕೆಜಿಎಫ್ ತೆಲುಗು ಭಾಷೆಯಲ್ಲೂ ರಿಲೀಸ್ ಆಗ್ತಿದೆ. ಆದ್ರೆ, ಅದೇ ದಿನ ತೆಲುಗಿನಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಆರ್ ರಾಜಶೇಖರ್ ರೆಡ್ಡಿ ಅವರ ಬಯೋಗ್ರಫಿ ಸಿನಿಮಾ 'ಯಾತ್ರ' ಬಿಡುಗಡೆಯಾಗುತ್ತಿದೆ. ವೈಎಸ್ ಆರ್ ಪಾತ್ರದಲ್ಲಿ ಮೊಮ್ಮಟಿ ಅಭಿನಯಿಸಿರುವುದು ಕುತೂಹಲ ಮೂಡಿಸಿದೆ.

  ಯಶ್ ಗೆ ಮಾತು ಕೊಟ್ಟ ತಮಿಳು ನಟ ವಿಶಾಲ್

  ಡಿಸೆಂಬರ್ ನಲ್ಲಿ 'ಮಾರಿ-2'

  ಡಿಸೆಂಬರ್ ನಲ್ಲಿ 'ಮಾರಿ-2'

  ಕೆಜಿಎಫ್ ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಆದ್ರೆ, ತಮಿಳಿನಲ್ಲಿ ಕೆಜಿಎಫ್ ಗೆ ಪೈಪೋಟಿ ನೀಡಬಹುದಾದ ಸಿನಿಮಾ 'ಮಾರಿ-2'. ಧನುಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ ಡಿಸೆಂಬರ್ ಗೆ ಬರುವುದಾಗಿ ಹೇಳಿಕೊಂಡಿದೆ. ಆದ್ರೆ, ಖಚಿತವಾದ ದಿನಾಂಕ ಘೋಷಿಸಿಲ್ಲ.

  'ಕೆಜಿಎಫ್' ಟ್ರೈಲರ್ ನಲ್ಲಿ ಸದ್ದು ಮಾಡಿದ್ದು ಈ ಎರಡೇ ಡೈಲಾಗ್.!

  ಶಾರೂಖ್ 'ಜೀರೋ'

  ಶಾರೂಖ್ 'ಜೀರೋ'

  ಇನ್ನು ಬಾಲಿವುಡ್ ನಲ್ಲಿ ಈಗಾಗಲೇ ಗೊತ್ತಿರುವಾಗೆ ಶಾರೂಖ್ ಖಾನ್ ಅಭಿನಯದ ಜೀರೋ ಸಿನಿಮಾ ಡಿಸೆಂಬರ್ 21ಕ್ಕೆ ಅಂದ್ರೆ, ಕೆಜಿಎಫ್ ದಿನವೇ ಬರ್ತಿದೆ. ಇದು ಬಹಳ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.

  'ಜೀರೋ' ಎದುರು 'ಕೆಜಿಎಫ್' ಬರ್ತಿರೋದಕ್ಕೆ ಕಾರಣ ಕೊಟ್ಟ ರಾಕಿಂಗ್ ಸ್ಟಾರ್

  ರಣ್ವೀರ್ ಸಿಂಗ್ 'ಸಿಂಬ'

  ರಣ್ವೀರ್ ಸಿಂಗ್ 'ಸಿಂಬ'

  ಶಾರೂಖ್ ಖಾನ್ ಅಭಿನಯದ ಜೀರೋ, ಕೆಜಿಎಫ್ ಜೊತೆಯೇ ಬಿಡುಗಡೆಯಾದ್ರೆ, ರಣ್ವೀರ್ ಸಿಂಗ್ ಅಭಿನಯದ 'ಸಿಂಬ' ಒಂದು ವಾರ ಮುಂದಕ್ಕೆ ರಿಲೀಸ್ ಆಗಲಿದೆ. ಇದು ತೆಲುಗಿನಲ್ಲಿ ಎನ್.ಟಿ.ಆರ್ ಅಭಿನಯಿಸಿದ್ದ 'ಟೆಂಪರ್' ಚಿತ್ರದ ಹಿಂದಿ ರೀಮೇಕ್. ಡಿಸೆಂಬರ್ 28 ರಂದು ಈ ಸಿನಿಮಾ ಥಿಯೇಟರ್ ಗೆ ಬರ್ತಿದೆ.

  ಕೆಜಿಎಫ್ vs ಕೆಜಿಎಫ್: ಕನ್ನಡಕ್ಕಿಂತ ಪರಭಾಷೆಯಲ್ಲೇ ವೀವ್ಸ್ ಜಾಸ್ತಿ

  ವಿಜಯ್ ಸೇತುಪತಿ ಸಿನಿಮಾ

  ವಿಜಯ್ ಸೇತುಪತಿ ಸಿನಿಮಾ

  ಧನುಶ್ ಅಭಿನಯದ 'ಮಾರಿ-2' ದಿನಾಂಕ ಪಕ್ಕಾ ಇಲ್ಲ. ಆದ್ರೆ, ವಿಜಯ್ ಸೇತುಪತಿ ಅಭಿನಯದ 'ಸೀತಾಕತಿ' ಸಿನಿಮಾ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ. ಕೆಜಿಎಫ್ ಚಿತ್ರಕ್ಕಿಂತ ಒಂದು ದಿನ ಮುಂಚೆ. ಹೀಗಾಗಿ, ಈ ಚಿತ್ರವೂ ಯಶ್ ಚಿತ್ರಕ್ಕೆ ಪೈಪೋಟಿ ನೀಡಬಹುದು. ಈ ಎಲ್ಲಾ ಚಿತ್ರಗಳು ಕೆಜಿಎಫ್ ಗೆ ಒಂದಲ್ಲ ಒಂದು ರೀತಿ ಕಾಂಪಿಟೇಶನ್ ನೋಡೋದು ಪಕ್ಕಾ.

  ಕೆಜಿಎಫ್ ಟ್ರೈಲರ್ ನೋಡಿ ಅತ್ತರಂತೆ ಶ್ರೀನಿಧಿ ಶೆಟ್ಟಿ.!

  English summary
  Six Best and Biggest Movies will releasing on december month along with Kgf movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X