»   » ಸ್ನೇಹಲೋಕದಲ್ಲಿ ಥ್ರಿಲ್ ಆದ ಥ್ರಿಲ್ಲರ್ ಬಾಯ್ಸ್

ಸ್ನೇಹಲೋಕದಲ್ಲಿ ಥ್ರಿಲ್ ಆದ ಥ್ರಿಲ್ಲರ್ ಬಾಯ್ಸ್

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ನಟ, ನಟಿಯರು, ಕಲಾವಿದರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳೋದು ತೀರಾ ಅಪರೂಪ. ಶೂಟಿಂಗ್ ನಡುವೆ ಒಂದು ದಿನ ಬಿಡುವು ಸಿಕ್ತು ಅಂದ್ರೆ ಆ ಭಾನುವಾರವನ್ನ ಕುಟುಂಬದ ಜೊತೆ ಕಳೆಯೋಕೆ ಯೋಚಿಸೋರೆ ಹೆಚ್ಚು.

ಆದ್ರೆ ಸಾಹಸ ಸಿಂಹ ವಿಷ್ಣುವರ್ಧನ್ ಕನಸಿನ 'ಸ್ನೇಹಲೋಕ' ತಂಡ ಮಾತ್ರ ಈ ಭಾನುವಾರವನ್ನ ಕ್ರಿಕೆಟ್ ಆಡೋದ್ರ ಮೂಲಕ, ಸಿನಿಮಾ ಸ್ನೇಹಿತರ ಜೊತೆ ಒಂದಾಗೋದ್ರ ಮೂಲಕ ಕಳೆಯೋಕೆ ಇಷ್ಟಪಡುತ್ತೆ. ಇದ್ರ ಹಿಂದಿರೋ ಪ್ರೇರಕ ಶಕ್ತಿ ಭಾರತಿ ವಿಷ್ಣುವರ್ಧನ್. [ಪತ್ತೆದಾರ ಸಾಹಸಸಿಂಹ ಇನ್ನೊಂದು ರಹಸ್ಯ ಭೇದಿಸಬೇಕಾಗಿದೆ!]

Snehaloka

ಈ ಭಾನುವಾರ ಸ್ನೇಹಲೋಕ ಕ್ರಿಕೇಟ್ ತಂಡ ಥ್ರಿಲ್ಲರ್ ಮಂಜು ನಾಯಕತ್ವದ ಥ್ರಿಲ್ಲರ್ ಇಲವೆನ್ ತಂಡದ ಜೊತೆ ಸೌಹಾರ್ದಯುತ ಕ್ರಿಕೆಟ್ ಆಡಿ ಸಂಭ್ರಮಿಸಿತು. ಖ್ಯಾತ ಖಳನಟ ಶೋಭರಾಜ್ ಸ್ನೇಹಲೋಕ ತಂಡದ ನಾಯಕತ್ವ ವಹಿಸಿದ್ರು. ಪಂದ್ಯದಲ್ಲಿ ಸ್ನೇಹಲೋಕ ತಂಡ ಪಂದ್ಯವನ್ನ ಗೆದ್ರೆ ಥ್ರಿಲ್ಲರ್ ಬಾಯ್ಸ್ ರನ್ನರ್ ಅಪ್ ಟ್ರೋಫಿ ಪಡೆದುಕೊಂಡ್ರು.

Snehaloka2

ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳನ್ನು ಹುಡುಕಲು ಡಾ.ವಿಷ್ಣುವರ್ಧನ್ ಕಟ್ಟಿದ ಸಂಸ್ಥೆ ಸ್ನೇಹಲೋಕ. ಕಳೆದ ಮೂರು ವರ್ಷಗಳಿಂದ ಸ್ನೇಹಲೋಕ ಕ್ರಿಕೆಟ್ ಪಂದ್ಯಾವಳಿ ನಡೆದುಕೊಂಡು ಬರುತ್ತಿದೆ. ಈ ಪಂದ್ಯಾವಳಿಯಿಂದ ಬಂದಂತಹ ಹಣವನ್ನು ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿದೆ.

2014ರ ಪಂದ್ಯಾವಳಿಯನ್ನು ಡಾ.ಶಿವರಾಜ್‌ಕುಮಾರ್‌ ಮತ್ತು ಪುನೀತ್‌ರಾಜ್‌ಕುಮಾರ್‌ ಪಾರಿವಾಳ ಹಾಗೂ ಬಲೂನ್‌ ಹಾರಿಬಿಡುವ ಮೂಲಕ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Snehaloka3

ನಟ ದುನಿಯಾ ವಿಜಯ್‌, ಹಿರಿಯ ನಟಿ ಭವ್ಯಾ, ಹಿರಿಯ ಕಲಾವಿದ ಶಿವರಾಮ್‌, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್‌, ಆನಿರುದ್ಧ, ಶೋಭರಾಜ್‌, ರವಿಚೇತನ್‌, ಕಿರುತೆರೆ ನಿರ್ದೇಶಕ ರವಿಕಿರಣ್‌,ರವಿಶಂಕರ್‌ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ವಿಜಯಕುಮಾರ್‌, ಥ್ರಿಲ್ಲರ್‌ ಮಂಜು ಸೇರಿದಂತೆ ಇತರೆ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು.

English summary
Recently Snehaloka cricket friendly match held between Snehaloka (Headed by Shobharaj) and Thriller boys (Headed by Thriller Manju). The mathch won by Snehaloka team.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada