Don't Miss!
- News
Vande Bharat; ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!
- Finance
ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?
- Technology
ಭಾರತಕ್ಕೆ ಕೋಕ-ಕೋಲಾ ಫೋನ್ ಬರುತ್ತೆ!..ನೋಡೊಕೆ ಯಾವ ತರಹ ಇದೆ ಗೊತ್ತಾ?
- Sports
ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಸಿಟ್ಟಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
- Automobiles
ಕೈಗೆಟುಕುವ ಬೆಲೆಯ ಹುಂಡೈ ಔರಾ, ಡಿಜೈರ್, ಅಮೇಜ್, ಟಿಗೋರ್ ಕಾರುಗಳು: ಯಾವುದು ಉತ್ತಮ!
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಆ ಗುಗ್ಗುಗಳು ಬೆಳೆದಿದ್ದೇ ನಮ್ಮ ಸಿನಿಮಾಗಳಿಂದ": ಗಾಂಧಿನಗರದ ಕೆಲವರಿಗೆ ದರ್ಶನ್ ಎಚ್ಚರಿಕೆ!
ಈ ವರ್ಷದ ಮೊದಲ ಬಹುನಿರೀಕ್ಷೆಯ ಸಿನಿಮಾ 'ಕ್ರಾಂತಿ' ಬಿಡುಗಡೆ ಕ್ಷಣಗಣನೆ ಶುರುವಾಗಿದೆ. ದರ್ಶನ್ ಕೂಡ ಕೊನೆಯ ಹಂತದ ಪ್ರಚಾರವನ್ನು ಮಾಡಿ ಮುಗಿಸಿದ್ದಾರೆ. ಈ ಹಂತದಲ್ಲಿ ದರ್ಶನ್ ತಮ್ಮ ಅಭಿಮಾನಿಗಳ ಅಧಿಕೃತ ಯೂಟ್ಯೂಬ್ ಚಾನೆಲ್ ಡಿ ಕಂಪನಿಗೆ ಸಂದರ್ಶ ನೀಡಿದ್ದಾರೆ.
ಸುಮಾರು 22 ತಿಂಗಳುಗಳಿಂದ ದರ್ಶನ್ ಅಭಿನಯದ ಒಂದೇ ಒಂದು ಸಿನಿಮಾನೂ ಬಿಡಗಡೆಯಾಗಿರಲಿಲ್ಲ. ಈಗ ಒಂದಿಷ್ಟು ಸವಾಲುಗಳನ್ನು ಎದುರಿಸುತ್ತಲೇ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಈ ಎಲ್ಲಾ ಸವಾಲುಗಳ ಬಗ್ಗೆ ದರ್ಶನ್ ಸಂದರ್ಶನದಲ್ಲಿ ಮಾತಾಡಿದ್ದಾರೆ.
ಮುಂಬೈ,
ಪುಣೆ,
ಹೈದ್ರಾಬಾದ್‌ನಲ್ಲಿ
'ಕ್ರಾಂತಿ'
ಟಿಕೆಟ್
ಬುಕ್ಕಿಂಗ್
ಆರಂಭ:
ಹೈದ್ರಾಬಾದ್‌ನಲ್ಲಿ
ಒಂದು
ಶೋ
ಸೋಲ್ಡೌಟ್!
ಡಿ ಕಂಪನಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸದ್ಯ ಗಾಂಧಿನಗರದ ಟ್ರೆಂಡ್ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ ಕೆಲವು ಮಂದಿ ಹೀರೊಗಳ ಚಲನವಲನಗಳನ್ನೂ ಅವರೇ ಡಿಸೈಡ್ ಮಾಡುತ್ತಿದ್ದಾರೆ ಅನ್ನೋ ಗಂಭೀರ ಆರೋಪವನ್ನೂ ಮಾಡಿದ್ದಾರೆ. ದರ್ಶನ್ ಅವರ ಈ ಹೇಳಿಕೆ ಸಾರಾಂಶ ಇಲ್ಲಿದೆ.

'ಗಾಂಧಿನಗರದ ಕೆಲವು ಮಂದಿ ಎಲ್ಲಾ ಡಿಸೈಡ್ ಮಾಡ್ತಾರಂತೆ'
ಕನ್ನಡ ಚಿತ್ರರಂಗದಲ್ಲಿ ಕೆಲವರು ಎಲ್ಲವನ್ನು ಅವರೇ ನಿರ್ಧಾರ ಮಾಡುತ್ತಾರೆ. ಹೀರೊಗಳ ನಡೆ, ಸಿನಿಮಾ, ಪ್ರೊಡಕ್ಷನ್ ಹೌಸ್ ಬೆಳೆಸಬೇಕು ಅಂತ ನಿರ್ಧಾರ ಮಾಡುತ್ತಾರಂತೆ ಅಂತ ದರ್ಶನ್ ಗಂಭೀರ್ ಆರೋಪ ಮಾಡಿದ್ದಾರೆ. "ಮೊನ್ನೆ ಯಾರೋ ಹೇಳುತ್ತಿದ್ದರು.ಕೆಲವರು ಗಾಂಧಿನಗರದಲ್ಲಿ ಇದ್ದಾರಂತೆ. ಅವರೇ ಎಲ್ಲವನ್ನೂ ಡಿಸೈಡ್ ಮಾಡುತ್ತಾರಂತೆ. ಯಾವ ಹೀರೊ ಮುಂದಕ್ಕೆ ಹೋಗಬೇಕು. ಯಾವ ಹೀರೊ ಹಿಂದಕ್ಕೆ ಬರಬೇಕು. ಯಾವ ಹೀರೊ ಸೈಡ್‌ಗೆ ನಿಲ್ಲಿಸಿಕೊಳ್ಳಬೇಕು. ಯಾವ ಹೀರೊ ಈ ಕಡೆಗೆ ಹೋಗಬೇಕು. ಯಾವ ಪ್ರೊಡಕ್ಷನ್ ಹೌಸ್ ನಾವು ಎತ್ತಬೇಕು ಅಂತ." ಅಂತ ದರ್ಶನ್ ಗಂಭೀರ ಆರೋಪ ಮಾಡಿದ್ದಾರೆ.

'ಗುಗ್ಗು ನನ್ ಮಕ್ಕಳು' ಅಂದಿದ್ದೇಕೆ ದರ್ಶನ್?
"ನಾನು ಆ ಗುಗ್ಗು ನನ್ ಮಕ್ಕಳಿಗೆ ಹೇಳೋದು, ನಿಮ್ಮ ಡಿಸ್ಟ್ರಿಬ್ಯೂಷನ್ ಆಫೀಸ್ ಓಪನ್ ಮಾಡಿದ್ದಾಗ, ನಿಮಗೆ ಹೆಸರು ಮಾಡಿಕೊಟ್ಟಿದ್ದೇ ನಮ್ಮ ಸಿನಿಮಾಗಳಿಂದ. ಇವತ್ತು ನೀವು ಕೂತ್ಕೊಂಡು ಎಲ್ಲಾ ಆಳ್ತೀವಿ ಅಂತ ಅಂದ್ರೆ, ಅದು ನಿಮ್ಮ ಮುಟ್ಟಾಳ್ತನ." ಎಂದು ಮುಕ್ತವಾಗಿಯೇ ದರ್ಶನ್ ಎಚ್ಚರಿಕೆ ಕೊಟ್ಟಿದ್ದಾರೆ.

'ಯಾರು ಪುಂಯ್ ಅಂದ್ರೂ ವಾಸನೆ ಎಲ್ಲೋ ಹೋಗುತ್ತೆ'
"ಅವರು ಅಂದ್ಕೊಂಡಿರಬಹುದೇನೋ ಗೊತ್ತಿಲ್ಲ. ನಾವೇನೋ ದೂರದಲ್ಲಿ ಇದ್ದೇವೆ ಅಂತ. ಪ್ರತಿಯೊಂದು ಬಂದೇ ಬರುತ್ತೆ. ಯಾರು ಎಲ್ಲೇ ಪುಂಯ್ ಅಂದ್ರೂ, ವಾಸನೆ ಎಲ್ಲೋ ಹೋಗಿರುತ್ತೆ. ಇನ್ನು ನಮಗೆ ಬಾರದೆ ಇರುತ್ತಾ? ಅಲ್ಲಾ ಕಂಡ್ರಯ್ಯ, ಇಷ್ಟು ತಲೆ ಓಡಿಸುತ್ತಿದ್ದೀರಲ್ಲ. ನೀವು ಪ್ರೊಡಕ್ಷನ್ ಮಾಡುತ್ತಿದ್ದೀರಲ್ಲ ಆ ಸಿನಿಮಾಗೆ ತಲೆಕೆಡಿಸಿಕೊಳ್ಳಿ. ಯಾರದ್ದೋ ಪ್ರೊಡಕ್ಷನ್ ಹೌಸ್. ಹೀರೊ ಯಾವನೋ, ಅವನದ್ದೇನೋ ಇದು. ನೀವು ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರ? ಆದರೆ, ಇಷ್ಟು ಜನರ ನಿದ್ದೆ ಹಾಳಾಗುತ್ತಿದೆ ಅಂತ ತುಂಬಾನೇ ಖುಷಿಯಿದೆ ನನಗೆ." ಎಂದಿದ್ದಾರೆ ದರ್ಶನ್.

ಥಿಯೇಟರ್ ಸಮಸ್ಯೆ ಹೇಳಿದ 'ಸಾರಥಿ'
"ಇದೇ ಸಾರಥಿ ರಿಲೀಸ್.. ಅದಾದ ಇನ್ನೊಂದು ವಾರಕ್ಕೆ ಇನ್ನೊಂದು ಸಿನಿಮಾ ರಿಲೀಸ್. ಎಲ್ಲರೂ ಏನಂದುಕೊಂಡರು ಅಂದ್ರೆ, ಸಿನಿಮಾ ಓಡಲ್ಲ ಅಂದ್ಕೊಂಡ್ರು. ಎಲ್ಲಾ ಸೆಕೆಂಡ್ ಗ್ರೇಡೆಡ್ ಥಿಯೇಟರ್‌ಗಳಿಗೇ ಹೋಗಿದ್ದು. ಅಲ್ಲಿಗೆ ಯಾರೂ ಸಿನಿಮಾನೇ ಹಾಕಲ್ಲ. ಥಿಯೇಟರ್‌ಗೆ ಜನಾನೇ ಬರಲ್ಲ ಅಂದ್ಕೊಂಡಿದ್ದವರು. ಅಂತಹ ಕಡೆ 100 ಡೇಸ್ ಓಡಿದ ಸಿನಿಮಾ ಅದು. ತಲೆ ಯಾಕೆ ಕೆಡಿಸಿಕೊಳ್ಳಬೇಕು. ಇವನು ಕೊಟ್ಟಿಲ್ಲ ಅಂದ್ರೆ ಬಿಟ್ಟಾಕಿ. ಅವನು ಕೊಡಲಿಲ್ಲ ಅಂದ್ರೆ ಬಿಟ್ಟಾಕಿ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.