»   » 'ಸೈಮಾ ಪ್ರಶಸ್ತಿ 2017': ಯಾರು ಯಾರಿಗೆ ಲಭಿಸಬಹುದು.?

'ಸೈಮಾ ಪ್ರಶಸ್ತಿ 2017': ಯಾರು ಯಾರಿಗೆ ಲಭಿಸಬಹುದು.?

Posted By:
Subscribe to Filmibeat Kannada

2017ರ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು (ಜೂನ್ 30) ಮತ್ತು ನಾಳೆ (ಜುಲೈ 1) ದುಬೈ ನಲ್ಲಿ ನಡೆಯಲಿದೆ. ಈಗಾಗಲೇ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ತಾರೆಯರು ದುಬೈಗೆ ಹಾರಿದ್ದಾರೆ. ಕಾರ್ಯಕ್ರಮದಲ್ಲಿ ಇಂದು ಕನ್ನಡ ಮತ್ತು ತೆಲುಗು ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಾಳೆ ಮಲಯಾಳಂ ಮತ್ತು ತಮಿಳು ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.

ಕನ್ನಡದಲ್ಲಿ ಈ ಬಾರಿ ಸೈಮಾ ಪ್ರಶಸ್ತಿಗಾಗಿ ದೊಡ್ಡ ಫೈಟ್ ನಡೆದಿದೆ. ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಯಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳು ಪ್ರಶಸ್ತಿ ಪಟ್ಟಿಗೆ ನಾಮಿನೇಟ್ ಆಗಿದೆ. ಇನ್ನೊಂದು ಕಡೆ ಹೊಸಬರ ಸಿನಿಮಾಗಳು ಸಹ ದೊಡ್ಡ ಸವಾಲು ಹಾಕುವುದಕ್ಕೆ ಸಜ್ಜಾಗಿದೆ.

ದುಬೈಗೆ ಹಾರಿದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

2017ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ನಾಮ ನಿರ್ದೇಶನ ಆದ ಕನ್ನಡ ಸಿನಿಮಾರಂಗದ ಪಟ್ಟಿ ಇಲ್ಲಿದೆ ಓದಿ...

ಅತ್ಯುತ್ತಮ ಸಿನಿಮಾ

ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ 'ತಿಥಿ', 'ಕೋಟಿಗೊಬ್ಬ 2', 'ಕಿರಿಕ್ ಪಾರ್ಟಿ', 'ಯೂ ಟರ್ನ್', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾಗಳು ಸ್ಪರ್ಧೆಯಲ್ಲಿದೆ.

ಅತ್ಯುತ್ತಮ ನಟ

ನಟ ಶಿವರಾಜ್ ಕುಮಾರ್ (ಶಿವಲಿಂಗ), ಪುನೀತ್ ರಾಜ್ ಕುಮಾರ್(ದೊಡ್ಮನೆ ಹುಡ್ಗ), ಜಗ್ಗೇಶ್ (ನೀರ್ ದೋಸೆ,) ಯಶ್, ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ) ಅತ್ಯುತ್ತಮ ನಟ ವಿಭಾಗದಲ್ಲಿ ನಾಮಾಂಕಿತರಾಗಿದ್ದಾರೆ.

ಅತ್ಯುತ್ತಮ ನಟಿ

ಅತ್ಯುತ್ತಮ ನಟಿ ಪಟ್ಟಿಯಲ್ಲಿ ಶೃತಿ ಹರಿಹರನ್ (ಗೋಧಿ ಬಣ್ಣ ಸಾಧಾರಣ ಮೈ ಕಟ್ಟು), ಹರಿಪ್ರಿಯಾ (ನೀರ್ ದೋಸೆ), ವೇದಿಕಾ (ಶಿವಲಿಂಗ), ಪಾರೂಲ್ ಯಾದವ್ (ಕಿಲ್ಲಿಂಗ್ ವೀರಪ್ಪನ್), ಶ್ರದ್ಧಾ ಶ್ರೀನಾಥ್ (ಯೂ ಟರ್ನ್) ಇದ್ದು ಪ್ರಶಸ್ತಿ ಯಾರ ಪಾಲಾಗಲಿದೆ ಎನ್ನುವ ನಿರೀಕ್ಷೆ ಇದೆ.

ಅತ್ಯುತ್ತಮ ನಿರ್ದೇಶಕ

ವಿಭಿನ್ನ ಸಿನಿಮಾವನ್ನು ತೆಗೆದಿದ್ದ ಸುಮನಾ ಕಿತ್ತೂರು(ಕಿರಗೂರಿನ ಗಯ್ಯಾಳಿಗಳು), ರಿಷಬ್ ಶೆಟ್ಟಿ (ಕಿರಿಕ್ ಪಾರ್ಟಿ), ವಿಜಯ ಪ್ರಸಾದ್ (ನೀರ್ ದೋಸೆ), ಪವನ್ ಒಡೆಯರ್(ಜೆಸ್ಸಿ), ಪವನ್ ಕುಮಾರ್ (ಯೂ ಟರ್ನ್), ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾರೆ.

ನವ ನಟ

ತಮ್ಮ ಮೊದಲ ಸಿನಿಮಾದ ಮೂಲಕ ನಟ ಸಚಿನ್ (ಹ್ಯಾಪಿ ನೂ ಹಿಯರ್), ನಿಖಿಲ್ ಕುಮಾರ್ (ಜಾಗ್ವಾರ್), ದಿಲೀಪ್ ಪ್ರಕಾಶ್ (ಕ್ರೇಜಿ ಬಾಯ್), ಅನೂಪ್ (ಲಕ್ಷ್ಮಣ), ರೋಗರ್ ನಾರಾಯಣ್ (ಯೂ ಟರ್ನ್) ಉದಯೋನ್ಮುಖ ನಟ ಪಟ್ಟಿಯಲ್ಲಿ ನಾಮಿನೇಟ್ ಆಗಿದ್ದಾರೆ.

ನವ ನಟಿ

ಯುವ ನಟಿಯರಾದ ಆಶಿಕಾ (ಕ್ರೇಜಿ ಬಾಯ್), ರಶ್ಮಿಕಾ ಮಂದಣ್ಣ(ಕಿರಿಕ್ ಪಾರ್ಟಿ), ಕೃಷಿ ತಾಪಂಡ (ಅಕಿರಾ), ಸಂಯುಕ್ತ ಹೆಗ್ಡೆ (ಕಿರಿಕ್ ಪಾರ್ಟಿ) ಅವರು ಹೆಸರುಗಳು ಸೈಮಾ ಪ್ರಶಸ್ತಿ ಸ್ಪರ್ಧೆಯಲ್ಲಿದೆ.

ನವ ನಿರ್ದೇಶಕರು

ಮೊದಲ ಪ್ರಯತ್ನದಲ್ಲಿಯೇ ಗೆದ್ದ ರಾಮ್ ರೆಡ್ಡಿ (ತಿಥಿ), ರಾಘವೇಂದ್ರ ಹೆಗ್ಡೆ (ಜಗ್ಗುದಾದ), ನವನೀತ್ (ಕರ್ವ), ಹೇಮಂತ್ ರಾವ್ (ಗೋಧಿ ಬಣ್ಣ ಸಾಧಾರಣ ಮೈ ಕಟ್ಟು) , ಸತ್ಯ ಪ್ರಕಾಶ್ (ರಾಮ ರಾಮ ರೇ) ನಿರ್ದೇಶಕರುಗಳು ಪ್ರಶಸ್ತಿಯನ್ನು ಗೆಲ್ಲುವ ತವಕದಲ್ಲಿದ್ದಾರೆ.

English summary
List Of Kannada Movie Nomination For South Indian International Movie Awards 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada