For Quick Alerts
  ALLOW NOTIFICATIONS  
  For Daily Alerts

  ನಟಿ ದಿವ್ಯ ಉರುಡುಗ ಬರ್ತ್‌ಡೇಗೆ ವಿಶೇಷವಾಗಿ ವಿಶ್ ಮಾಡಿದ ಅರವಿಂದ್

  |

  ದಿವ್ಯ ಉರುಡುಗ ಮತ್ತು ಕೆ.ಪಿ ಅರವಿಂದ್. ಈ ಇಬ್ಬರ ಹೆಸರು ಇತ್ತೀಚೆಗೆ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಕಿರುತೆರೆ ಧಾರಾವಾಹಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ದಿವ್ಯಾ ಉರುಡುಗಾ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾಧಿಸಿದ್ದಾರೆ.

  ಇನ್ನು ಕೆ.ಪಿ.ಅರವಿಂದ್ ಅಂತಾರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಆಗಿ ದೇಶದ ಕೀರ್ತಿ ಪತಾಕೆಯನ್ನು ಹಲವು ಬಾರಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಇವರು ಬೈಕ್ ರೇಸಿನಲ್ಲಿ 17 ರಾಷ್ಟ್ರೀಯ ಮತ್ತು 1 ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಹೀಗೆ ಸಿನಿಮಾ ನಟಿ ದಿವ್ಯಾ ಉರುಡುಗ ಮತ್ತು ಕ್ರೀಡಾ ಕ್ಷೇತ್ರದ ಸಾಧಕ ಕೆ.ಪಿ. ಅರವಿಂದ್ ಲವ್ವಿ ಡವ್ವಿ ಆರಂಭವಾಗಿ ಸಾಕಷ್ಟು ದಿನಗಳೇ ಕಳೆದಿದೆ.

  ಇಂದು ದಿವ್ಯಾ ಉರುಡುಗ ಅವರ ಹುಟ್ಟುಹಬ್ಬ. ಅಭಿಮಾನಿಗಳು ದಿವ್ಯ ಹುಟ್ಟು ಹಬ್ಬಕ್ಕೆ ಅರವಿಂದ್ ಹೇಗೆ ವಿಶ್ ಮಾಡುತ್ತಾರೆ? ಎಂಬ ಕುತೂಹಲವನ್ನು ಇಟ್ಟುಕೊಂಡಿತ್ತು. ಅದರಂತೇ ಇಂದು ಅಭಿಮಾನಿಗಳ ನಿರೀಕ್ಷೆಯಂತೆ ಅರವಿಂದ್ ತನ್ನ ಪ್ರೀತಿಯ ಹುಡುಗಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ

  ದಿವ್ಯಾ ಹುಟ್ಟು ಹಬ್ಬಕ್ಕೆ ಅರವಿಂದ್ ವಿಶೇಷ ಶುಭಾಶಯ.

  ದಿವ್ಯಾ ಹುಟ್ಟು ಹಬ್ಬಕ್ಕೆ ಅರವಿಂದ್ ವಿಶೇಷ ಶುಭಾಶಯ.

  ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ಪ್ರಣಯ ಪಕ್ಷಿಗಳಾಗಿ ಸಾಕಷ್ಟು ದಿನಗಳೇ ಕಳೆದಿವೆ. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳು ಕೂಡ ಇದ್ದು, ಇವರಿಬ್ಬರ ಮದುವೆಯನ್ನು ಎದುರು ನೋಡುತ್ತಿದ್ದಾರೆ. ಅದರಂತೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡು ತಮ್ಮಿಬ್ಬರ ಪ್ರೀತಿಯ ಬಗ್ಗೆ ತಿಳಿಸುವ ಈ ಜೋಡಿ ಪದೇ ಪದೇ ಸುದ್ದಿಯಲ್ಲಿ ಇರುತ್ತಾರೆ. ಅಂತೆಯೇ ಇಂದು (16-01-22) ದಿವ್ಯ ಉರುಡುಗ ಹುಟ್ಟಿದ ದಿನವಾಗಿದ್ದು, ಅರವಿಂದ್ ವಿಶೇಷವಾಗಿ ವಿ‍ಶ್ ಮಾಡಿದ್ದಾರೆ

  ದಿವ್ಯಾ ಜೊತೆಗಿನ ಫೋಟೋ ಶೇರ್ ಮಾಡಿದ ಅರವಿಂದ್

  ಇಂದು ದಿವ್ಯಾ ಉರುಡುಗ ಅವರು 32ನೇ ವಸಂತಕ್ಕೆ ಕಾಲಿಟ್ಟಿದ್ದು, ದಿವ್ಯಾ ಉರುಡುಗ ಜೊತೆಗಿರುವ ಫೋಟೋವೊಂದನ್ನು ಅರವಿಂದ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು 'ಕೆ'. "ಪ್ರೀತಿ ಇರಲಿ ಅಂತರಾಳದಿಂದ" ಎಂದು ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೇ ದಿವ್ಯಾ ಉರುಡುಗ ಕಿರುತೆರೆ ಹಾಗೂ ಬೆಳ್ಳಿತೆರೆಯ ಪುಟ್ಟ ಜರ್ನಿ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಕೂಡ ಹಂಚಿಕೊಂಡಿದ್ದಾರೆ.

  ಮದುವೆ ಯಾವಾಗ ಅಂತ ಪ್ರಶ್ನೆ ಮಾಡಿದ ಫ್ಯಾನ್ಸ್

  ಮದುವೆ ಯಾವಾಗ ಅಂತ ಪ್ರಶ್ನೆ ಮಾಡಿದ ಫ್ಯಾನ್ಸ್

  ಇನ್ನು ದಿವ್ಯಾ ಉರುಡುಗ ಬರ್ತ್‌ಡೇಗೆ ಸ್ನೇಹಿತರು ಕೂಡ ವಿಶ್ ಮಾಡಿದ್ದಾರೆ. ಶುಭಾ ಪೂಂಜಾ, ದಿವ್ಯಾ ಸುರೇಶ್, ವೈಷ್ಣವಿ ಗೌಡ ಸೇರಿದಂತೆ ಹಲವರು ದಿವ್ಯಾ ಉರುಡುಗಾಗೆ ಶುಭಾಶಯ ತಿಳಿಸಿದ್ದಾರೆ. ಚಿತ್ರರಂಗದ ಸ್ನೇಹಿತರು ಸೇರಿದಂತೆ, ಕಿರುತೆರೆ ಸದಸ್ಯರು, ಕುಟುಂಬ ಸದಸ್ಯರು ಕೂಡ ದಿವ್ಯಾಗೆ ಶುಭಕೋರಿದ್ದಾರೆ. ಇನ್ನು ಅರವಿಂದ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕೂಡ ಕಮೆಂಟ್ ಮಾಡುತ್ತಿದ್ದು, ದಿವ್ಯಾ ಉರುಡುಗಾಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಮದುವೆ ಯಾವಾಗ ಅಂತ ಹಲವರು ಕೇಳಿದರೆ, ಹೀಗೆ ಖುಷಿ ಖುಷಿ ಆಗಿರಿ ಎಂದು ಸಾಕಷ್ಟು ಅಭಿಮಾನಿಗಳು ಹರಸುತ್ತಿದ್ದಾರೆ.

  ತಮ್ಮ ತಮ್ಮ ಕ್ಷೇತ್ರದಲ್ಲಿ ಬ್ಯುಸಿಯಾದ ಫೇಮಸ್ ಕಪಲ್!

  ತಮ್ಮ ತಮ್ಮ ಕ್ಷೇತ್ರದಲ್ಲಿ ಬ್ಯುಸಿಯಾದ ಫೇಮಸ್ ಕಪಲ್!

  ದಿವ್ಯಾ ಉರುಡುಗ ಮತ್ತು ಕೆಪಿ ಅರವಿಂದ್ ನಡುವೆ ಪ್ರೀತಿ ಶುರುವಾಗಿ ಸಾಕಷ್ಟು ಸಮಯಗಳು ಕಳೆದರೂ ಇನ್ನೂ ಕೂಡ ಅಧಿಕೃತವಾಗಿ ಈ ಜೋಡಿ ಏನನ್ನೂ ಹೇಳಿಕೊಂಡಿಲ್ಲಾ. ತಾವು ಪ್ರೀತಿ ಮಾಡುತ್ತಿರುವ ಬಗ್ಗೆಯೂ ಮೌನ ಮುರಿದ್ದಿಲ್ಲ. ಆದರೇ ಇವರಿಬ್ಬರು ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುವುದು, ಕುಟುಂಬದವರೊಂದಿಗೆ ಇಬ್ಬರು ಸಮಯ ಕಳೆಯುವುದು, ಅರವಿಂದ ಬೈಕ್ ರೇಸಿಂಗ್‌ ಜಾಗದಲ್ಲಿ ದಿವ್ಯಾ ಕೂಡ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲಾ. ಹಾಗೇ ಸದ್ಯ ಅರವಿಂದ್ ತನ್ನ ಬೈಕ್ ರೇಸಿಂಗ್‌ನಲ್ಲಿ ಈಗ ಬ್ಯುಸಿಯಾಗಿದ್ದು, ದಿವ್ಯಾ ಉರುಡುಗ ಸಿನಿಮಾ ಆಕ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

  English summary
  Aravind shares special photo with Divya Uruduga for Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion