»   » ಅರೆಬರೆ ಬೆತ್ತಲಾದ 'ಅಭಿನೇತ್ರಿ' ಪೂಜಾಗಾಂಧಿ

ಅರೆಬರೆ ಬೆತ್ತಲಾದ 'ಅಭಿನೇತ್ರಿ' ಪೂಜಾಗಾಂಧಿ

By: ಉದಯರವಿ
Subscribe to Filmibeat Kannada

ಈ ಫೋಟೋಗಳನ್ನು ನೋಡುತ್ತಿದ್ದರೆ ನಟಿ ಪೂಜಾಗಾಂಧಿ ಅವರು ಮತ್ತೆ 'ದಂಡುಪಾಳ್ಯ' ಹಾದಿ ತುಳಿದರೇ? ಎಂಬ ಅನುಮಾನ ಕಾಡುತ್ತದೆ. ದಂಡುಪಾಳ್ಯ ಚಿತ್ರದ ಸಮಯದಲ್ಲಿ ಬೆತ್ತಲೆ ಬೆನ್ನು ತೋರಿಸಿ ಪಡ್ಡೆಗಳ ನಿದ್ದೆಗೆಡಿಸಿದ್ದರು. ಜೊತೆಗೆ ಸಾಕಷ್ಟು ವಿವಾದಕ್ಕೂ ಕಾರಣರಾಗಿದ್ದರು.

ಈಗ ಅವರು ಮತ್ತೆ ಅಂತಹದ್ದೇ ಸವಾಲಿನ ಪಾತ್ರವನ್ನು 'ಅಭಿನೇತ್ರಿ' ಚಿತ್ರದಲ್ಲಿ ಪೋಷಿಸುತ್ತಿದ್ದಾರೆ. ಈಗಾಗಲೆ ಈ ಚಿತ್ರದ ಕೆಲವು ಸ್ಟಿಲ್ಸ್ ಸ್ಯಾಂಡಲ್ ವುಡ್ ನಲ್ಲಿ ಬಹಳ ಸದ್ದು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಇನ್ನೊಂದಿಷ್ಟು ಅರೆಬರೆ ನಗ್ನ ಚಿತ್ರಗಳು ಬಿಡುಗಡೆಯಾಗಿವೆ. [ಪೂಜಾಗಾಂಧಿಗಿರುವಷ್ಟು ಎದೆಗಾರಿಕೆ ಇನ್ಯಾರಿಗಿದೆ?]

ದಂಡುಪಾಳ್ಯದಲ್ಲಿ ಬೆತ್ತಲೆ ಬೆನ್ನು ತೋರಿಸಿದರೆ ಇಲ್ಲಿ ಇನ್ನೊಂದು ಕೋನದಲ್ಲಿ ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಒಟ್ಟಾರೆಯಾಗಿ ದಿನದಿಂದ ದಿನಕ್ಕೆ 'ಅಭಿನೇತ್ರಿ' ಚಿತ್ರ ಈ ರೀತಿಯ ವೆರೈಟಿ ಸ್ಟಿಲ್ಸ್ ಮೂಲಕ ಸದ್ದು ಮಾಡುತ್ತಲೇ ಇದೆ. ಸ್ಲೈಡ್ ನಲ್ಲಿ ನೋಡಿ ಪೂಜಾಗಾಂಧಿ ಇನ್ ಅಭಿನೇತ್ರಿ.

ಎಪ್ಪತ್ತರ ದಶಕದ ತಾರೆಯೊಬ್ಬರ ಗೆಟಪ್

ಈ ಬಾರಿ ಅವರು ಅರುವತ್ತು, ಎಪ್ಪತ್ತರ ದಶಕದ ತಾರೆಯೊಬ್ಬರ ಗೆಟಪ್ ನಲ್ಲಿ ಬಂದಿರುವುದು ವಿಶೇಷ. ಪೂಜಾಗಾಂಧಿ ನಟಿಸಿ, ನಿರ್ಮಿಸುತ್ತಿರುವ ಚಿತ್ರವಿದು.

ಕಲ್ಪನಾ ಅಥವಾ ಮಂಜುಳಾ ಜೀವನಕಥೆಯಲ್ಲ

ಈ ಚಿತ್ರದ ಫೋಟೋಗಳು ಶೀರ್ಷಿಕೆಗೆ ತಕ್ಕಂತೆ ಇರುವುದು ವಿಶೇಷ. ಚಿತ್ರದಲ್ಲಿನ ತಮ್ಮ ಗೆಟೆಪ್ ಬಗ್ಗೆ ಈಗಾಗಲೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದಿದ್ದಾರೆ.

ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಶೂಟಿಂಗ್

ಸತೀಶ್ ಪ್ರಧಾನ್ ನಿರ್ದೇಶನದ ಸಿನಿಮಾದ ಶೂಟಿಂಗ್ 40 ದಿನಗಳ ಮೊದಲ ಶೆಡ್ಯೂಲ್ ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ನಡೆಯಲಿದೆಯಂತೆ. ಪೂಜಾ ಇಲ್ಲಿ 70-80ರ ದಶಕದ ನಾಯಕಿಯರನ್ನ ಪ್ರತಿನಿಧಿಸೋ ಪಾತ್ರ ಮಾಡ್ತಿದ್ದಾರೆ. ಇಲ್ಲಿ ಪೂಜಾಗಾಂಧಿ 20 ಕ್ಕೂ ಹೆಚ್ಚು ಗೆಟಪ್ ಗಳಲ್ಲಿ ಮಿಂಚ್ತಾರೆ.

ಪೂಜಾಗಾಂಧಿ ಜೊತೆ ಖಳನಟ ರವಿಶಂಕರ್

ಈ ಚಿತ್ರದ ಇನ್ನೊಂದು ಪೋಸ್ಟರ್ ನಲ್ಲಿ ಖಳನಟ ರವಿಶಂಕರ್ ಇದ್ದಾರೆ. ಮೂಲಗಳ ಪ್ರಕಾರ ರವಿಶಂಕರ್ ಅವರು ಗುಡಿಗೇರಿ ಬಸವರಾಜ್ ಅವರ ಪಾತ್ರವನ್ನು ಪ್ರತಿನಿಧಿಸಲಿದ್ದಾರೆ ಎನ್ನಲಾಗಿದೆ.

ಕಾಸ್ಟ್ಯೂಮ್ ಗಳನ್ನ ವಿಶೇಷವಾಗಿ ಡಿಸೈನ್

ಕಾಸ್ಟ್ಯೂಮ್ ಗಳನ್ನ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. 70ರ ದಶಕದ ನಟಿಯರು ಬಳಸ್ತಾ ಇದ್ದ ಬಟ್ಟೆಗಳ ಡಿಸೈನನ್ನೇ ಇಲ್ಲೂ ನೋಡಬಹುದು.

ಎಪ್ಪತ್ತು ಎಂಬತ್ತರ ದಶಕಕ್ಕೆ ಹೊರಳುವ ಚಿತ್ರ

ಕನ್ನಡ ಚಿತ್ರರಂಗದ ಮಟ್ಟಿಗೆ ಎಪ್ಪತ್ತರ ದಶಕ ಸುವರ್ಣ ಯುಗ. ಆಗ ಚೆನ್ನೈನಲ್ಲಿ ಕನ್ನಡ ಚಿತ್ರಗಳನ್ನು ರಾತ್ರಿ ವೇಳೆ ಚಿತ್ರೀಕರಿಸಲಾಗುತ್ತಿತ್ತು. ಬೆಳಗಿನ ವೇಳೆ ಸ್ಟುಡಿಯೋಗಳ ಅಭಾವ ಇತ್ತು. ಆಗಿನ ಕಾಲದ ಚಿತ್ರ ನಿರ್ಮಾಣದ ಕಷ್ಟನಷ್ಟಗಳು ಹೇಗಿದ್ದವು ಎಂಬುದನ್ನೂ ತಮ್ಮ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ಎಂದಿದ್ದಾರೆ ಪೂಜಾಗಾಂಧಿ.

ಸತೀಶ್ ಪ್ರಧಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಸತೀಶ್ ಪ್ರಧಾನ್ ನಿರ್ದೇಶಿಸುತ್ತಿರುವ ಈ ಚಿತ್ರದ ಪಾತ್ರವರ್ಗದಲ್ಲಿ ಪೂಜಾಗಾಂಧಿ ಜೊತೆ ಮಕರಂದ್ ದೇಶ್ ಪಾಂಡೆ, ರವಿಶಂಕರ್, ಅತುಲ್ ಕುಲಕರ್ಣಿ, ರಮೇಶ್ ಭಟ್, ಸುಧಾ ಬೆಳವಾಡಿ, ಶೈಲಜಾ ಜೋಶಿ, ಮಂಜುನಾಥ್ ಸ್ವಾಮಿ ಮುಂತಾದವರು ಇದ್ದಾರೆ.

ಪೂಜಾಗಾಂಧಿ ಚೊಚ್ಚಲ ನಿರ್ಮಾಣದ ಚಿತ್ರ

ಇದು ಪೂಜಾಗಾಂಧಿ ಹೋಂ ಬ್ಯಾನರ್ ಚಿತ್ರ. ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಪೂಜಾಗಾಂಧಿ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ.

English summary
Actress turned politician Pooja Gandhi, who is all set to make her comeback with Sandalwood's forthcoming film Abhinetri has now made news with the spicy stills of her in the movie.
Please Wait while comments are loading...