For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಪ್ರೀಮಿಯರ್ ಲೀಗ್: ಗೆದ್ದು ಬೀಗಿದ 'ರುಸ್ತುಂ ರೈಮ್ಸ್' ತಂಡ

  |

  ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಪೂರೈಸಿದ ಹಿನ್ನಲೆಯಲ್ಲಿ 'ಎಸ್‌ಪಿಎಲ್' ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಫೆಬ್ರವರಿ 20 ಮತ್ತು 21 ಎರಡು ದಿನಗಳ ಕಾಲ ನಡೆದ ಈ ಟೂರ್ನಿಯಲ್ಲಿ 'ರುಸ್ತುಂ ರೈಮ್ಸ್' ತಂಡ ಪ್ರಶಸ್ತಿಗೆ ಮುತ್ತಿಟ್ಟಿದೆ.

  ಶಿವ ಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಅಭಿಮಾನಿ ಸಂಘ ಆಯೋಜಿಸಿದ್ದ ಈ ಟೂರ್ನಮೆಂಟ್ ಗೆ ಅಭಿಮಾನಿಗಳು, ಸಿನಿಮಾ ತಂತ್ರಜ್ಞರು, ಕಲಾವಿದರು, ಸಿನಿಮಾ ತಂಡಗಳು, ಸಿನಿಮಾ ಪತ್ರಕರ್ತರು ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.

  ಶಿವಣ್ಣ 35ನೇ ವರ್ಷದ ಸಂಭ್ರಮ: ಫೆಬ್ರವರಿ 21ಕ್ಕೆ 'ಎಸ್‌ಪಿಎಲ್' ಕ್ರಿಕೆಟ್ ಹಬ್ಬ

  ರುಸ್ತುಂ ರೈಮ್ಸ್ ( ರೇಮ್ಸ್ ಸಿನೆಮಾ ತಂಡ) ಮೊದಲ ಬಹುಮಾನ ಪಡೆದುಕೊಂಡರೆ, ಶಿವಸೈನ್ಯ ಸ್ಪಾರ್ಟನ್ಸ್ (ಶಿವಣ್ಣ ಅಭಿಮಾನಿ ಸಂಘ) ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿದೆ.

  ವಿಶೇಷ ಅಂದ್ರೆ ಎಸ್‌ಪಿಎಲ್ ಪಂದ್ಯಾವಳಿಯನ್ನು ಸಚಿವ ವಿ . ಸೋಮಣ್ಣ ಉದ್ಘಾಟನೆ ಮಾಡಿದರು. ಉದ್ಘಾಟನೆ ಸಮಾರಂಭದಲ್ಲಿ ಯುವ ಮುಖಂಡರು ಅರುಣ್ ಸೋಮಣ್ಣ ಹಾಗೂ ಉಮೇಶ್ ಶೆಟ್ಟಿ ಪಾಲ್ಗೊಂಡಿದ್ದರು. ಕನ್ನಡದ ಖ್ಯಾತ ನಿರ್ಮಾಪಕ ಭಾ ಮಾ ಹರೀಶ್ ಇಡೀ ಟೂರ್ನಿಗೆ ಬೆಂಬಲವಾಗಿ ನಿಂತು ಯಶಸ್ವಿಯಾಗಲು ಸಹಕಾರ ನೀಡಿದರು.

  ವಿಜಯನಗರದ ಬಿಜಿಎಸ್ ಗ್ರೌಂಡ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಧೀರನ್ ರಾಮ್ ಕುಮಾರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟಿ ಸುಮನ್ ನಗರ್ಕರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

  ಎಸ್‌ಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಹನ್ನೆರಡು ತಂಡಗಳು ಇಂತಿವೆ....

  ಎಸ್‌ಆರ್‌ಕೆ ಅಭಿಮಾನಿ

  ಆರ್ಯನ್ ಅಟ್ಯಾಕರ್ಸ್

  ಅಸುರ ಫೈಟರ್ಸ್

  ಭಜರಂಗಿ ಹಂಟರ್ಸ್

  ಶಿವಸೈನ್ಯ ಸ್ಪಾರ್ಟನ್ಸ್

  ಜೋಗಿ ಚಾಲೆಂಜರ್ಸ್

  ಓಂ ಬ್ರಿಗೇಡಿಯರ್ಸ್

  ಗಾಜನೂರು ಗ್ಲಾಡಿಯೇಟರ್ಸ್

  ಟಗರು ಟೈಟನ್ಸ್

  ರುಸ್ತಮ್ ರೈಮ್ಸ್

  ವಜ್ರಕಾಯ ವಾರಿಯರ್ಸ್

  ಅಭಿಮಾನಿಗಳು ಮಾಡಿದ್ದು ದರ್ಶನ್ ಕಣ್ಣಿಗೆ ಸರಿಯಾಗಿ ಕಾಣ್ತಿದ್ಯ..? | Darshan | Jaggesh | Filmibeat Kannada

  ಸಂತ ಸ್ಟ್ರೈಕರ್ಸ್

  English summary
  SPL cricket Tournament: Rusthum rhyme team won SPL Trophy and shiva sainya spartans get second place.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X