For Quick Alerts
  ALLOW NOTIFICATIONS  
  For Daily Alerts

  ಟ್ರೈಲರ್‌ನಿಂದಲೇ ಕಿಕ್ ಕೊಡುತ್ತಿದೆ 'ಸ್ಪೂಕಿ ಕಾಲೇಜ್'

  |

  ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಹೊಸಬರ ಸಿನಿಮಾಗಳು ಭಿನ್ನ ವಿಭಿನ್ನ ಟೈಟಲ್ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆಯುತ್ತಿವೆ. ಅದರಲ್ಲೊಂದು 'ಸ್ಪೂಕಿ ಕಾಲೇಜ್'. ಹಾರರ್ ಟಚ್ ಕೊಟ್ಟಿರುವ ಈ ಸಿನಿಮಾ ಪ್ರೇಕ್ಷಕರನ್ನು ಗಮನ ಸೆಳೆಯುತ್ತಿದೆ.

  'ಸ್ಪೂಕಿ ಕಾಲೇಜ್' ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನಮನ ಗೆದ್ದಿತ್ತು. ಈಗ 'ಸ್ಪೂಕಿ ಕಾಲೇಜ್' ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದ್ದೆ.

  ಅಂದ್ಹಾಗೆ 'ಸ್ಪೂಕಿ' ಅಂದ್ರೆ ಏನು? ಅನ್ನೋ ಕುತೂಹಲವಂತೂ ಇದ್ದೇ ಇರುತ್ತೆ. ಇಲ್ಲಿ 'ಸ್ಪೂಕಿ' ಎಂದರೆ ಎಂದರೆ ಭಯ ಎಂದರ್ಥ. ಈ ಭಯವನ್ನೇ 'ಸ್ಪೂಕಿ ಕಾಲೇಜ್' ಸಿನಿಮಾದಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಲಾಗಿದೆ.

  ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರೋ ಧಾರವಾಡದ ಕಾಲೇಜ್‌ನಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಅಲ್ಲದೆ ದಾಂಡೇಲಿಯ ಅಭಯಾರಣ್ಯದಲ್ಲೂ 'ಸ್ಪೂಕಿ ಕಾಲೇಜ್' ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

  'ಸ್ಪೂಕಿ ಕಾಲೇಜ್' ಸಿನಿಮಾವನ್ನು ಯುವ ನಿರ್ದೇಶಕ ಭರತ್ ನಿರ್ದೇಶಿಸಿದ್ದಾರೆ. "ವೀರ ಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ನಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ‌. ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕ ವಿವೇಕ್ ಸಿಂಹ ಹಾಗೂ ನಾಯಕಿ ಖುಷಿ ರವಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೈಟ್ ಎನ್ನಬಹುದು." ಎನ್ನುತ್ತಾರೆ ನಿರ್ದೇಶಕ ಭರತ್.

  Spooky College Movie Trailer Has Received A Lot Of Praise

  'ಸ್ಪೂಕಿ ಕಾಲೇಜ್' ಸಿನಿಮಾವನ್ನು ಕೋವಿಡ್ ಸಮಯದಲ್ಲೇ ಹೆಚ್ಚಿನ ಭಾಗ ಚಿತ್ರೀಕರಣ ಮಾಡಲಾಗಿದೆ. ಹೀಗಾಗಿ ಬಜೆಟ್ ಹೆಚ್ಚಾಗಿದೆ ಎಂದು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರೇ ಒಪ್ಪಿಕೊಂಡಿದ್ದಾರೆ. 2023ರ ಮೊದಲ ವಾರ ಜನವರಿ 6 ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

  'ಚೂರಿಕಟ್ಟೆ' ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ವಿವೇಕ್ ಸಿಂಹ ಈ ಸಿನಿಮಾದ ಹೀರೊ.. ಬಳಿಕ 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲೂ ನಟಿಸಿದ್ದರು. ಈಗ 'ಸ್ಪೂಕಿ ಕಾಲೇಜ್' ಮೂಲಕ ವಿವೇಕ್ ಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ 'ದಿಯಾ' ಖ್ಯಾತಿಯ ಖುಷಿ ರವಿ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಇವರೊಂದಿಗೆ ರಘು ರಮಣಕೊಪ್ಪ, ವಿಜಯ್ ಚೆಂಡೂರ್ ಶೃತಿ ರಾವ್ ಮುಂತಾದ ಕಲಾವಿದರು ಹಾಗೂ ಛಾಯಾಗ್ರಾಹಕ ಮನೋಹರ್ ಜೋಶಿ ಸೇರಿದಂತೆ ಅನೇಕ ತಂತ್ರಜ್ಞರು 'ಸ್ಪೂಕಿ ಕಾಲೇಜ್' ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

  English summary
  Spooky College Movie Trailer Has Received A Lot Of Praise, Know More.
  Saturday, December 31, 2022, 23:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X