»   » ಬದಲಾದ ಕ್ಲೈಮಾಕ್ಸ್ ನೊಂದಿಗೆ ಟಾಲಿವುಡ್ ನಲ್ಲಿ 'ರಥಾವರ' ಅಬ್ಬರ

ಬದಲಾದ ಕ್ಲೈಮಾಕ್ಸ್ ನೊಂದಿಗೆ ಟಾಲಿವುಡ್ ನಲ್ಲಿ 'ರಥಾವರ' ಅಬ್ಬರ

Posted By:
Subscribe to Filmibeat Kannada

ಶ್ರೀಮುರಳಿ ನಟನೆಯ 'ರಥಾವರ' ಸಿನಿಮಾ ಸೂಪರ್ ಹಿಟ್ ಆಗಿತ್ತು. ವಿಭಿನ್ನ ಕಥೆ ಹೊಂದಿದ್ದ ಈ ಸಿನಿಮಾಗೆ ಸ್ಯಾಂಡಲ್ ವುಡ್ ಪ್ರೇಕ್ಷಕರು ಫಿದಾ ಆಗಿದ್ದರು. ಅದೇ ರೀತಿ ಈಗ ಟಾಲಿವುಡ್ ಮಂದಿ ಕೂಡ 'ರಥಾವರ' ಅಬ್ಬರ ನೋಡುವುದಕ್ಕೆ ಕಾಯುತ್ತಿದ್ದಾರೆ.

'ರಥಾವರ' ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ರಿಲೀಸ್ ಮಾಡುವುದಕ್ಕೆ ತಯಾರಿ ನಡೆಸಿದೆ. ಈಗಾಗಲೇ ತೆಲುಗಿನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಕನ್ನಡದಲ್ಲಿ ಸಿನಿಮಾವನ್ನ ನೋಡಿದ ಕೆಲವರು ಕ್ಲೈಮಾಕ್ಸ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಅದೇ ಕಾರಣದಿಂದಾಗಿ ಚಿತ್ರತಂಡ ಸಿನಿಮಾದ ಕೊನೆಯ ಭಾಗವನ್ನು ಸ್ವಲ್ಪ ಬದಲಾಯಿಸಿದೆಯಂತೆ.

Sri Murali staring 'Rathavara' Movie in telugu version

ಅಂದಹಾಗೆ, 'ರಥಾವರ' ಚಿತ್ರವನ್ನು ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡಿದ್ದರು. ಶ್ರೀಮುರಳಿ ಜೊತೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾದ ಕಥೆ ಮಂಗಳ ಮುಖಿಯರ ಜೀವನದ ಸುತ್ತ ಹೆಣೆಯಲಾಗಿತ್ತು.

English summary
Sri Murali staring 'Rathavara' Movie ready to release in telugu version

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada