For Quick Alerts
  ALLOW NOTIFICATIONS  
  For Daily Alerts

  'ಮದಗಜ' ಚಿತ್ರೀಕರಣ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟು: 15 ದಿನಗಳು ಸಂಪೂರ್ಣ ವಿಶ್ರಾಂತಿ

  |

  ಮದಗಜ ಚಿತ್ರೀಕರಣ ವೇಳೆ ನಟ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದಿದೆ. ಚಿತ್ರದ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಈ ಘಟನೆ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆಯೋಗ್ಯ ಖ್ಯಾತಿಯ ಮಹೇಶ್ ಸಾರಥ್ಯದಲ್ಲಿ ಮದಗಜ ಸಿನಿಮಾ ಮೂಡಿಬರುತ್ತಿದೆ.

  5 ದಿನಗಳ ಕಾಲ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ಸಿನಿಮಾತಂಡ ಯೋಜನೆ ಹಾಕಿಕೊಂಡಿತ್ತು. ಆಕ್ಷನ್ ದೃಶ್ಯ ಸೆರೆಹಿಡಿಯಲು ಅದ್ದೂರಿ ಸೆಟ್ ಕೂಡ ನಿರ್ಮಾಣಮಾಡಲಾಗಿದೆ. ಚಿತ್ರದ ಅತೀ ದೊಡ್ಡ ಫೈಟ್ ದೃಶ್ಯ ಇದಾಗಿದ್ದು, ಸುಮಾರು 300ಕ್ಕೂ ಅಧಿಕ ಜೂನಿಯರ್ ಕಲಾವಿದರು ಆಕ್ಷನ್ ದೃಶ್ಯ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

  'ಸಲಾರ್' ವಿಚಾರದಲ್ಲಿ ಮತ್ತೆ ಗೊಂದಲ: ರೀಮೇಕ್ ವಿಷ್ಯ ಮುಚ್ಚಿಡ್ತಿದ್ದಾರಾ ಪ್ರಶಾಂತ್ ನೀಲ್?'ಸಲಾರ್' ವಿಚಾರದಲ್ಲಿ ಮತ್ತೆ ಗೊಂದಲ: ರೀಮೇಕ್ ವಿಷ್ಯ ಮುಚ್ಚಿಡ್ತಿದ್ದಾರಾ ಪ್ರಶಾಂತ್ ನೀಲ್?

  ಈ ವೇಳೆ ಶ್ರೀಮುರಳಿ ಕಾಲಿಗೆ ಏಟಾಗಿದೆ. ಕಾಲಿಗೆ ಪೆಟ್ಟು ಬೀಳುತ್ತಿದ್ದಂತೆ ಶ್ರೀಮುರಳಿ ಸ್ಥಳದಲ್ಲೇ ಕುಸಿದಿದ್ದಾರೆ. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಶ್ರೀಮುರಳಿಗೆ 15 ದಿನಗಳು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

  ಮದಗಜ ಸಿನಿಮಾ ಸೆಟ್ಟೇರಿ ಎರಡು ವರ್ಷದ ಮೇಲಾಗಿದೆ. ಕೊರೊನಾ ಕಾರಣದಿಂದ ತಡವಾಗಿದ್ದ ಸಿನಿಮಾಗೆ ಲಾಕ್ ಡೌನ್ ಬಳಿಕ ಮತ್ತೆ ಕಿಕ್ ಸ್ಟಾರ್ಟ್ ನೀಡಲಾಗಿತ್ತು. ಆದರೀಗ ಶ್ರೀಮುರಳಿ ಕಾಲಿಗೆ ಪೆಟ್ಟಾದ ಕಾರಣ ಮತ್ತೆ ಚಿತ್ರೀಕರಣ ತಡವಾಗುತ್ತಿದೆ.

  ಮದಗಜ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ಖ್ಯಾತ ನಟ ಜಗಪತಿ ಬಾಬು ನಟಿಸಿದ್ದಾರೆ. ಟೀಸರ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿರುವ ಮದಗಜ ಯಾವಾಗ ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Actor Sriimurali got injured on Madagaja shooting set.
  Wednesday, April 7, 2021, 16:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X