»   » 'ಮಫ್ತಿ 2' ಸಿನಿಮಾದ ಬಗ್ಗೆ ಮಾತನಾಡಿದ ಶ್ರೀ ಮುರಳಿ !

'ಮಫ್ತಿ 2' ಸಿನಿಮಾದ ಬಗ್ಗೆ ಮಾತನಾಡಿದ ಶ್ರೀ ಮುರಳಿ !

Posted By:
Subscribe to Filmibeat Kannada
ಮಫ್ತಿ ಸಿನಿಮಾದ ಪಾರ್ಟ್ 2 ಬರಬಹುದು, ಅಂದ್ರು ಶ್ರೀಮುರಳಿ | Filmibeat Kannada

'ಮಫ್ತಿ' ಸಿನಿಮಾದ ಈಗಾಗಲೇ ಸೂಪರ್ ಹಿಟ್ ಹಿಟ್ ಆಗಿದೆ. ಸಿನಿಮಾವನ್ನು ಜನ ಅಪ್ಪಿಕೊಂಡಿದ್ದಾರೆ. ಅದರ ಜೊತೆಗೆ ಸಿನಿಮಾದ ಓಪನ್ ಎಂಡಿಂಗ್ ಕ್ಲೈಮ್ಯಾಕ್ಸ್ ನೋಡಿದವರು ಚಿತ್ರದ ಮುಂದುರವರೆದ ಭಾಗವಾಗಿ ಪಾರ್ಟ್ 2 ಬರುತ್ತದೆಯಾ ಎಂಬ ಕುತೂಹಲದಲ್ಲಿ ಇದ್ದರು. ಆದರೆ ಈಗ ಈ ಬಗ್ಗೆ ಸ್ವತಃ ಚಿತ್ರದ ನಾಯಕ ಶ್ರೀ ಮುರಳಿ ಮಾತನಾಡಿದ್ದಾರೆ.

'ಮಫ್ತಿ' ವಿಮರ್ಶೆ : ಹಿತವನು ಬಯಸುವ ಕಡು ರಾಕ್ಷಸನ ಕಥೆ !

''ಮಫ್ತಿ 2' ಸಿನಿಮಾವನ್ನು ಸದ್ಯದಲ್ಲಿ ಮಾಡುವ ಆಲೋಚನೆಯಿಲ್ಲ. ನನ್ನ ಹಿಂದಿನ ಬದ್ಧತೆಗಳನ್ನು ಮುಗಿಸಿದ ನಂತರ 'ಮಫ್ತಿ'ಯ ಮುಂದುವರಿದ ಭಾಗವನ್ನು ಕೈಗೆತ್ತಿಕೊಳ್ಳುತ್ತೇವೆ. ಇಂದಿನ ಕಾಲದ ಜನರು ಇಷ್ಟಪಡುವ ಚಿತ್ರ ಮಫ್ತಿಯಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡನೇ ಭಾಗವನ್ನು ಮಾಡುವ ಯೋಜನೆಯಿದೆ'' ಎಂದು ಶ್ರೀ ಮುರಳಿ ಹೇಳಿದ್ದಾರೆ. ಕಳೆದ ಶುಕ್ರವಾರ ತೆರೆಗೆ ಬಂದ 'ಮಫ್ತಿ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಬೆಂಬಲ ಸಿಕ್ಕಿದೆ. ಇದರಿಂದ ಸಂತಸದಲ್ಲಿರುವ ಶ್ರೀ ಮುರಳಿ 'ಮಫ್ತಿ 2' ಮಾಡುವ ಪ್ಲಾನ್ ನಲ್ಲಿ ಇದ್ದಾರೆ.

'ಭೈರತಿ ರಣಗಲ್ಲು' ಪಾತ್ರದ ಹುಟ್ಟಿನ ಬಗ್ಗೆ 'ಮಫ್ತಿ' ನಿರ್ದೇಶಕರ ಮಾತು!

 Srimurali spoke about 'Mufti - 2?

ಅಂದಹಾಗೆ, 'ಮಫ್ತಿ' ಒಬ್ಬ ಪೊಲೀಸ್ ಅಧಿಕಾರಿ ಮತ್ತು ಗ್ಯಾಂಗ್ ಸ್ಟಾರ್ ನಡುವೆ ನಡೆಯುವ ಕಥೆ ಆಗಿದೆ. ಶಿವರಾಜಕುಮಾರ್ ಇಲ್ಲಿ ಭೈರತಿ ರಣಗಲ್ಲು ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರ ಈಗ ದೊಡ್ಡ ಟ್ರೆಂಡ್ ಸೃಷ್ಟಿ ಮಾಡಿದೆ. ನರ್ತನ್ ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಠ, ಶಾನ್ವಿ ಶ್ರೀವಾತ್ಸವ, ದೇವರಾಜ್, ಪ್ರಕಾಶ್ ಬೆಳವಾಡಿ ನಟಿಸಿದ್ದಾರೆ.

English summary
Actor Srimurali and Shiva Rajkumar starrer Kannada Movie 'Mufti' has hit the screens last friday (December 1st). and now Srimurali spoke about 'Mufti - 2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada