»   » ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್

ಶ್ರೀಮುರುಳಿಯ 'ರಥಾವರ' ಖಡಕ್ ಗೆಟಪ್ ಔಟ್

Posted By:
Subscribe to Filmibeat Kannada

'ಉಗ್ರಂ' ವೀರಂ ಅಂತ ಗಾಂಧಿನಗರದಲ್ಲಿ ಉಗ್ರ ಪ್ರತಾಪ ಮೆರೆದಿದ್ದ ಶ್ರೀಮುರುಳಿ ಅದಾಗಲೇ 'ರಥಾವರ' ಏರಿಬಿಟ್ಟಿದ್ದಾರೆ. 'ಉಗ್ರಂ' ಶತಕ ಬಾರಿಸಿದ ಸಂಭ್ರಮದಲ್ಲಿ ತಮ್ಮ ಹೊಸ ಚಿತ್ರ 'ರಥಾವರ'ಗೆ ಚಾಲನೆ ನೀಡಬೇಕೆಂದಿದ್ದ ಶ್ರೀಮುರುಳಿ ಸದ್ದಿಲ್ಲದೇ ರಥವನ್ನೇರಿ ಅಚ್ಚರಿ ಮೂಡಿಸಿದ್ದಾರೆ.

ಗಾಂಧಿನಗರದ ಸಂಪ್ರದಾಯಕ್ಕೆ ಗೋಲಿ ಹೊಡೆದು, ನಿರ್ಮಾಪಕರ ಹಿತದೃಷ್ಟಿಗಾಗಿ ಅದ್ದೂರಿ ಮುಹೂರ್ತ ಮಾಡದೆ ಪೂಜಾ ಕೈಂಕರ್ಯಗಳನ್ನು ಮಾತ್ರ ನೆರವೇರಿಸಿ 'ರಥಾವರ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ ಶ್ರೀಮುರುಳಿ. 'ರಥಾವರ' ಚಿತ್ರದಲ್ಲಿ ಉಗ್ರ ರೂಪ ತಾಳಿರುವ ಶ್ರೀಮುರುಳಿಯ ಹೊಸ ಲುಕ್ ನೋಡದವರಿಗೆ ಇಲ್ಲಿದೆ ಮೊದಲ ದರ್ಶನ.

Rathavara

ನೋಡೋಕೆ ಖಡಕ್ ಆಗಿ ಕಾಣುವ ಶ್ರೀಮುರುಳಿ, 'ಧಮ್ ಮಾರೋ ಧಮ್' ಸ್ಟೈಲ್ ನಲ್ಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದ್ದಾರೆ. ಅದರಲ್ಲೂ ಹುರಿಗಟ್ಟಿದ ಮೀಸೆ, ಗಡ್ಡ ಬಿಟ್ಟಿರುವ ಶ್ರೀಮುರುಳಿಯ 'ರಥಾವರ' ಪೋಸ್ 'ಅಯೋಮಯ'ವಾಗಿದೆ. [ಉಗ್ರಂ 'ಶ್ರೀಮುರುಳಿ'ಯ ರೌದ್ರಾವತಾರ ನೋಡಿದ್ದೀರಾ?]

ಶ್ರೀಮುರುಳಿಯ ಈ ಹೊಸ ರೂಪ ಮತ್ತು ಪೋಸ್ಟರ್ ನೋಡ್ತಿದ್ರೆ, 'ರಥಾವರ' ಚಿತ್ರದ ಬಗ್ಗೆ ಕುತೂಹಲ ಮೂಡುವುದು ಸಹಜ. ಆದ್ರೆ, 'ರಥಾವರ' ಚಿತ್ರದಲ್ಲಿ ಶ್ರೀಮುರುಳಿಯ ಪಾತ್ರವೇನು? ಶ್ರೀಮುರುಳಿ ಧಮ್ ಗೆ ಚಾಲೆಂಜ್ ಹಾಕುವ ವಿಲನ್ ಯಾರು? ಶ್ರೀಮುರುಳಿ ಜೊತೆ ಡ್ಯುಯೆಟ್ ಹಾಡುವ ಹುಡುಗಿ ಯಾರು? ಅನ್ನುವುದಿನ್ನೂ ಗುಟ್ಟಾಗಿದೆ. ಆದ್ರೆ ಪ್ರಮುಖ ಪಾತ್ರವೊಂದರಲ್ಲಿ ರವಿಶಂಕರ್ ಕಾಣಿಸಿಕೊಂಡಿರುವುದು ಮಾತ್ರ ಕನ್ ಫರ್ಮ್.

Rathavara2

ಈ ಹಿಂದೆ 'ಆನೆ ಪಟಾಕಿ' ಸಿಡಿಸಿದ್ದ ನಿರ್ದೇಶಕ ಚಂದ್ರು, ರಥಾವರ ಚಿತ್ರಕ್ಕೆ ಸೈಲೆಂಟಾಗಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಸಿನಿಮಾ ರಿಲೀಸ್ ಗೂ ಮೊದಲು ಟ್ರೇಲರ್ ಬಿಡುಗಡೆ ಮಾಡುವಂತೆ, ಫಸ್ಟ್ ಲುಕ್ ಟೀಸರ್ ಔಟ್ ಆಗುವ ಮುನ್ನ, ಪೋಸ್ಟರ್ ರಿಲೀಸ್ ಮಾಡಿ 'ರಥಾವರ' ಚಿತ್ರತಂಡ ತಮಟೆ ಬಾರಿಸುವ ಕಾರ್ಯ ಶುರುಹಚ್ಕೊಂಡಿದೆ.

ಇದೇ ಡಿಸೆಂಬರ್ ತಿಂಗಳ 17ಕ್ಕೆ 'ರಥಾವರ' ಮೊದಲ ನೋಟದ ತುಣುಕು ಶ್ರೀಮುರುಳಿಯ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ಇದೊಂದೇ ಪೋಸ್ಟರ್ ನಿಮಗೆ ಗಟ್ಟಿ. (ಫಿಲ್ಮಿಬೀಟ್ ಕನ್ನಡ)

English summary
Actor Srimuruli's upcoming movie Rathavara first look is out, Take a look

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada