»   » ಡೈಮಂಡ್ ಸ್ಟಾರ್ ಕಿಟ್ಟಿಗೆ ಎಸ್.ಮಹೇಂದರ್ ಆಕ್ಷನ್ ಕಟ್

ಡೈಮಂಡ್ ಸ್ಟಾರ್ ಕಿಟ್ಟಿಗೆ ಎಸ್.ಮಹೇಂದರ್ ಆಕ್ಷನ್ ಕಟ್

Posted By:
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ಜೊತೆ 'ನಮಸ್ತೆ ಮೇಡಂ' ಮತ್ತು 'ಅಭಿನೇತ್ರಿ' ಚಿತ್ರದ ಹಾಡೊಂದರಲ್ಲಿ ಬಿಟ್ಟರೆ ಗಾಂಧಿನಗರದ ಅಂಗಳದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದೇ ಇಲ್ಲ. 'ಸುಬ್ರಮಣಿ', 'ಶಂಕ್ರ' ಸೇರಿದಂತೆ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳನ್ನ ಇಟ್ಟೊಂಡಿರುವ ನಟ ಶ್ರೀನಗರ ಕಿಟ್ಟಿ ಈಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ.

ಅದು ನಿರ್ದೇಶಕ ಎಸ್.ಮಹೇಂದರ್ ಜೊತೆ. ವರ್ಷಗಳ ನಂತರ ಎಸ್.ಮಹೇಂದರ್ 'ಮಹಾಕಾಳಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸೆಂಟಿಮೆಂಟ್ ಚಿತ್ರಗಳಿಂದಲೇ ಗುರುತಿಸಿಕೊಂಡಿದ್ದ ಎಸ್.ಮಹೇಂದರ್, ಹೆಣ್ ಚಿರತೆ ಮಾಲಾಶ್ರೀಗಾಗಿ ಆಕ್ಷನ್ ಸಿನಿಮಾ ನಿರ್ದೇಶಿಸಿದ್ದಾರೆ.

srinagara-kitty-mahendar

'ಮಹಾಕಾಳಿ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಅಷ್ಟರಲ್ಲಾಗಲೇ ಎಸ್.ಮಹೇಂದರ್, ಕಿಟ್ಟಿ ಜೊತೆ ಹೊಸ ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. ರೋಮ್ಯಾಂಟಿಕ್-ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ಕೃತಿ ಖರಬಂಧ ನಾಯಕಿ ಆಗುವ ಸಾಧ್ಯತೆಗಳಿವೆ. [ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಬೇಸರಕ್ಕೆ ಕಾರಣವೇನು?]

kriti-kharbandha

ಈ ಬಗ್ಗೆ ಆಗಲೇ ಕೃತಿ ಖರಬಂಧ ಜೊತೆ ಮಾತುಕತೆ ನಡೆದಿದ್ದು, ಡೇಟ್ಸ್ ಫೈನಲೈಸ್ ಆಗಬೇಕಿದೆ. ಹೊಸ ನಿರ್ಮಾಪಕರೊಬ್ಬರು ಇನ್ನೂ ಹೆಸರಿಡದ ಈ ಚಿತ್ರಕ್ಕೆ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್)

English summary
Kannada Actor Srinagara Kitty teams up with the Director S.Mahender for his upcoming movie. Grapevine is that the Actress Krithi Kharbanda will be roped into play lead opposite Srinagara Kitty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada