»   » 'ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!

'ಚಕ್ರವರ್ತಿ' ದರ್ಶನ್ ಜೊತೆ 'ಗುರಾಯಿಸುವ ಗುಮ್ಮ'ನಾದ ಸೃಜನ್.!

Posted By:
Subscribe to Filmibeat Kannada

ಕಿರುತೆರೆಯ 'ಮಜಾ ಸ್ಟಾರ್' ಅಂತಲೇ ಖ್ಯಾತಿ ಪಡೆದಿರುವ ಸೃಜನ್ ಲೋಕೇಶ್ ಮಜಾ ಕೊಡುವುದು ನಿಲ್ಲಿಸಿ, ಸ್ವಲ್ಪ ಸೀರಿಯಸ್ ಆದ್ರೆ ಹೇಗಿರುತ್ತೆ.?

ಸದ್ಯಕ್ಕೆ ಈ ಚಿಂತನೆ 'ಚಕ್ರವರ್ತಿ' ಚಿತ್ರದ ನಿರ್ದೇಶಕ ಚಿಂತನ್ ಗೆ ಬಂದಿದೆ. ಇದೇ ಕಾರಣಕ್ಕೆ, 'ಚಕ್ರವರ್ತಿ' ಸಿನಿಮಾದಲ್ಲಿ ಸೃಜನ್ ಲೋಕೇಶ್ ಗೆ ಕಾಮಿಡಿ ಪಾತ್ರ ನೀಡುವ ಬದಲು 'ಗುರಾಯಿಸುವ ಗುಮ್ಮ' ನಂತೆ ಸೀರಿಯಸ್ ಪಾತ್ರ ನೀಡಿದ್ದಾರೆ.

ಈಗಾಗಲೇ 'ಚಕ್ರವರ್ತಿ' ಚಿತ್ರದಲ್ಲಿ ರೆಟ್ರೋ ಲುಕ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಖಡಕ್ ಫೋಟೋಶೂಟ್ ನೋಡಿದ್ದೀರಾ.! [ಫೋಟೋಶೂಟ್: 'ಚಕ್ರವರ್ತಿ' ದರ್ಶನ್ ಗೆ ಸರಿಸಾಟಿ ಯಾರೂ ಇಲ್ಲ ಬಿಡಿ.!]

-
-
-
-
-
-
-
-
-
-
-
-
-
-
-
-
-
-
-
-
-

ಸೇಮ್ ಟು ಸೇಮ್ ಅದೇ ರೆಟ್ರೋ ಲುಕ್ ನಲ್ಲಿ, ಫ್ಲೋರಲ್ ಶರ್ಟ್ ಹಾಗೂ ಬೂಟ್ ಕಟ್ ಪ್ಯಾಂಟ್ ಧರಿಸಿ ಸೃಜನ್ ಲೋಕೇಶ್ ಮಿಂಚಿರುವ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. [ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ]

srujan-lokesh-turns-serious-for-kannada-actor-darshan-s-chakravarthy

''ನನಗೆ ಎಲ್ಲರನ್ನ ನಗಿಸುವುದು ಎಂದರೆ ಇಷ್ಟ. ಹಾಗೇ, ಸೀರಿಯಸ್ ಪಾತ್ರಗಳು ಕೂಡ ನನಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಅದಕ್ಕೆ 'ಎದೆಗಾರಿಕೆ' ಸಿನಿಮಾ ಉದಾಹರಣೆ. ಒಬ್ಬ ನಟನಾಗಿ ವೈವಿಧ್ಯಮಯ ಪಾತ್ರಗಳನ್ನ ಮಾಡುವುದು ನನ್ನ ಆದ್ಯತೆ''.

''ದರ್ಶನ್ ಮತ್ತು ನನ್ನ ಕಾಂಬಿನೇಷನ್ 'ಜಗ್ಗುದಾದಾ' ಚಿತ್ರದಲ್ಲಿ ವರ್ಕ್ ಔಟ್ ಆಗಿದೆ. 'ಚಕ್ರವರ್ತಿ' ಚಿತ್ರದಲ್ಲೂ ನಾನು ದರ್ಶನ್ ಸ್ನೇಹಿತನ ಪಾತ್ರ ನಿರ್ವಹಿಸುತ್ತಿದ್ದೇನೆ. 'ಚಕ್ರವರ್ತಿ' ಸೀರಿಯಸ್ ಸಬ್ಜೆಕ್ಟ್. ಹೀಗಾಗಿ, ನನಗೂ ಸೀರಿಯಸ್ ಪಾತ್ರ ಸಿಕ್ಕಿದೆ'' ಎನ್ನುತ್ತಾರೆ ಸೃಜನ್ ಲೋಕೇಶ್. [ದರ್ಶನ್ 'ಚಕ್ರವರ್ತಿ' ನಿರ್ಮಾಪಕ ಹಠಾತ್ ಬದಲಾವಣೆ.! ಕಾರಣ ಇದೇನಾ?]

ಅಂದ್ಹಾಗೆ, 'ಚಕ್ರವರ್ತಿ' ಚಿತ್ರದಲ್ಲಿ ದಿನಕರ್ ತೂಗುದೀಪ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಆದಿತ್ಯ ಕೂಡ ವಿಶೇಷ ಪಾತ್ರದಲ್ಲಿ ಮಿನುಗಲಿದ್ದಾರೆ. ದರ್ಶನ್ ಗೆ ದೀಪಾ ಸನ್ನಿಧಿ ಜೋಡಿಯಾಗಿದ್ದಾರೆ. ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

English summary
Kannada Actor Srujan Lokesh is roped into play a serious role in Kannada Actor Darshan starrer Kannada Movie 'Chakravarthi' (Chakravarthy) directed by Chintan, produced by Anaji Nagaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada