»   » 'ರಾಜರಥ'ದಲ್ಲಿ ಸವಾರಿ ಮಾಡಲಿರುವ ಶ್ರುತಿ ಹರಿಹರನ್

'ರಾಜರಥ'ದಲ್ಲಿ ಸವಾರಿ ಮಾಡಲಿರುವ ಶ್ರುತಿ ಹರಿಹರನ್

Posted By:
Subscribe to Filmibeat Kannada

ಇತ್ತೀಚೆಗಷ್ಟೇ ತಮಿಳು ನಟ ಆರ್ಯ ಅವರನ್ನ ಕನ್ನಡಕ್ಕೆ ಕರೆ ತಂದಿದ್ದ 'ರಾಜರಥ' ಸಿನಿಮಾ ಈಗ ಮತ್ತೋರ್ವ ನಟಿಯನ್ನ ತಮ್ಮ ತಂಡಕ್ಕೆ ಸೇರಿಕೊಂಡಿದೆ. ಹೌದು, ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಶೃತಿ ಹರಿಹರನ್ 'ರಾಜರಾಥ' ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ.

ಶ್ರುತಿ ಹರಿಹರನ್ ಈ ಹಿಂದೆಯೆ ಭಂಡಾರಿ ಬ್ರದರ್ಸ್ ಅವರ ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಅನೂಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಚಿತ್ರದಲ್ಲಿ ಶ್ರುತಿ ಕಾಣಿಸಿಕೊಳ್ಳಬೇಕಿತ್ತು. ಆದ್ರೆ, ಆ ಸಮಯದಲ್ಲಿ ಶ್ರುತಿ ಬೇರೆ ಚಿತ್ರದಲ್ಲಿ ಬಿಜಿಯಾಗಿದ್ದ ಕಾರಣ ಆಗಿರಲಿಲ್ಲ. ಈಗ ಮತ್ತೊಂದು ಅವಕಾಶ ಶ್ರುತಿಗೆ ಸಿಕ್ಕಿದ್ದು, ಈ ಬಾರಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಕನ್ನಡಕ್ಕೆ ಬಂದ ತಮಿಳು ನಟ ಆರ್ಯ

Sruthi Hariharan joins in Rajaratha
Sruthi Hariharan speaks about her Cinema Journey in Super Talk Time Show

ಅನೂಪ್ ಭಂಡಾರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ನಿರೂಪ್ ಭಂಡಾರಿ ಈ ಚಿತ್ರದಲ್ಲಿ ನಾಯಕನಾಗಿದ್ದು, 'ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ.

English summary
Anup Bhandari’s Rajaratha, being made in Kannada and Telugu. director managed to rope in actor Arya for his Sandalwood film. And now, the latest to join the cast is Sruthi Hariharan
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada