»   » 'ಬಾಹುಬಲಿ' ನಿರ್ದೇಶಕ ರಾಜಮೌಳಿಯ ಹೊಸ ಸಿನಿಮಾ 'RRR'

'ಬಾಹುಬಲಿ' ನಿರ್ದೇಶಕ ರಾಜಮೌಳಿಯ ಹೊಸ ಸಿನಿಮಾ 'RRR'

Posted By:
Subscribe to Filmibeat Kannada

'ಬಾಹುಬಲಿ ಬಿಗಿನಿಂಗ್' ಮತ್ತು 'ಬಾಹುಬಲಿ ಕನ್ ಕ್ಲೂಷನ್' ಚಿತ್ರಗಳ ನಂತರ ನಿರ್ದೇಶಕ ರಾಜಮೌಳಿ ಅವರ ಮುಂದಿನ ಸಿನಿಮಾ ಯಾವುದು ಎಂದು ಅಧಿಕೃತವಾಗಿ ಘೋಷಣೆಯಾಗಿದೆ.

ರಾಜಮೌಳಿಯ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ತೆಲುಗಿನ ಇಬ್ಬರು ಸ್ಟಾರ್ ನಟರು ಅಭಿನಯಿಸುತ್ತಿರುವುದು ಖಚಿತವಾಗಿದೆ. ಸದ್ಯ, 'RRR' ಹೆಸರಿನಲ್ಲಿ ಮೋಷನ್ ಪೊಸ್ಟರ್ ರಿಲೀಸ್ ಆಗಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

SS Rajamouli confirms Jr NTR-Ram Charan in his next

ಅಂದ್ಹಾಗೆ, RRR ಅಂದ್ರೆ ಇದು ಚಿತ್ರದ ಟೈಟಲ್ ಅಲ್ಲ ಮೂವರು ಒಟ್ಟಿಗೆ ಸಿನಿಮಾ ಮಾಡ್ತಿರೋದಕ್ಕೆ ಚಾಲನೆ ಎಂದು ರಾಜಮೌಳಿ ತಿಳಿಸಿದ್ದಾರೆ. ರಾಮ್ ಚರಣ್ ತೇಜ, ಜೂನಿಯರ್ ಎನ್.ಟಿ.ಆರ್ ಮತ್ತು ರಾಜಮೌಳಿ.....ಈ ಮೂವರ ಹೆಸರಿನಲ್ಲಿ R ಇದ್ದು, ಹೀಗಾಗಿ 'RRR' ಎಂದು ಬ್ರ್ಯಾಂಡ್ ಮಾಡಲಾಗಿದೆ ಅಷ್ಟೇ.

ಈ ಹಿಂದೆ ಈ ಇಬ್ಬರ ನಟರ ಜೊತೆಯಲ್ಲಿ ರಾಜಮೌಳಿ ಸಿನಿಮಾ ಮಾಡಿದ್ದಾರೆ. ರಾಮ್ ಚರಣ್ ಜೊತೆಯಲ್ಲಿ 'ಮಗಧೀರ' ಸಿನಿಮಾ ಮಾಡಿದ್ದ ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಜೊತೆಯಲ್ಲಿ 'ಸ್ಟೂಡೆಂಟ್ ನಂ-1' ಅಂತಹ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದರು. ಇದೀಗ, ಇಬ್ಬರು ಸ್ಟಾರ್ ನಟರ ಜೊತೆ ಸಕ್ಸಸ್ ಫುಲ್ ನಿರ್ದೇಶಕ ಒಟ್ಟಿಗೆ ಸೇರಿದ್ದಾರೆ.

ಸದ್ಯ, ಈ ಚಿತ್ರದ ಕಥೆ, ಟೈಟಲ್ ಹಾಗೂ ಯಾವಾಗ ಆರಂಭ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಡಿವಿವಿ ಎಂಟರ್ ಪ್ರೈಸಸ್ ಅಡಿಯಲ್ಲಿ ಈ ಚಿತ್ರ ಪ್ರಾರಂಭವಾಗುತ್ತಿರುವುದು ಖಚಿತವಾಗಿದೆ.

English summary
SS Rajamouli confirmed his next film will feature two of the biggest stars of the Telugu film industry, Jr NTR and Ram Charan Teja.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X