»   » 'ಬಾಹುಬಲಿ-2' ಪೋಸ್ಟರ್ ಕಾಪಿ ಮಾಡಿದ್ರಾ ನಿರ್ದೇಶಕ ರಾಜಮೌಳಿ.?

'ಬಾಹುಬಲಿ-2' ಪೋಸ್ಟರ್ ಕಾಪಿ ಮಾಡಿದ್ರಾ ನಿರ್ದೇಶಕ ರಾಜಮೌಳಿ.?

Posted By:
Subscribe to Filmibeat Kannada

ಇತ್ತೀಚೆಗಷ್ಟೆ ಎಸ್.ಎಸ್.ರಾಜಮೌಳಿ 'ಬಾಹುಬಲಿ-2' ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಿ, ಸಿನಿ ಪ್ರಿಯರಿಗೆ ಶಿವರಾತ್ರಿ ಉಡುಗೊರೆ ನೀಡಿದ್ದು ನಿಮಗೆಲ್ಲ ಗೊತ್ತೇ ಇದೆ. ಹಾಗೆ ನೀವೆಲ್ಲಾ ಆ ಪೋಸ್ಟರ್ ನೋಡಿರುತ್ತೀರಿ.[ಶಿವರಾತ್ರಿಗೆ 'ಬಾಹುಬಲಿ 2' ಚಿತ್ರದ ಉಡುಗೊರೆ ಇದು]

ನಿರ್ದೇಶಕರು ಬಿಡುಗಡೆ ಮಾಡಿದ್ದ 'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರದ ಎರಡನೇ ಮೋಷನ್ ಪೋಸ್ಟರ್ ಈಗ ಹೊಸ ಚರ್ಚೆಯೊಂದಕ್ಕೆ ಕಾರಣವಾಗಿದೆ.

'ಬಾಹುಬಲಿ 2' ಪೋಸ್ಟರ್ ಸುತ್ತ ಹೊಸ ಚರ್ಚೆ

ನಿರ್ದೇಶಕ ಎಸ್.ಎಸ್ ರಾಜಮೌಳಿ ಬಿಡುಗಡೆ ಮಾಡಿರುವ ಎರಡನೇ ಮೋಷನ್ ಪೋಸ್ಟರ್, ಥಾಯ್ ಭಾಷೆಯ ಚಿತ್ರವೊಂದರ ಪೋಸ್ಟರ್ ನಿಂದ ಪ್ರೇರಣೆ ಪಡೆದಿದೆ ಎನ್ನಲಾಗಿದೆ.

ಪೋಸ್ಟರ್ ಒರಿಜಿನಲ್ ಅಲ್ಲ..

'ಬಾಹುಬಲಿ-2' ಪೋಸ್ಟರ್ ನಲ್ಲಿ ಬಾಹುಬಲಿ(ಪ್ರಭಾಸ್) ಆನೆ ಮೇಲೆ ನಿಂತಿದ್ದು, ನೋಡುಗರ ಮೈನವಿರೇಳಿಸುವಂತಿದೆ. ಈ ಪೋಸ್ಟರ್ ಥೇಟ್ ಥಾಯ್ ಭಾಷೆಯ 'ಆಂಗ್ ಬ್ಯಾಕ್ 2' ಚಿತ್ರದ ಪೋಸ್ಟರ್ ನಂತೆಯೇ ಇರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಹೆಚ್ಚು ಕಡಿಮೆ ಹಾಗೆ ಕಾಣುತ್ತೆ ನೋಡಿ..

ಎಸ್.ಎಸ್.ರಾಜಮೌಳಿ ಬಿಡುಗಡೆ ಮಾಡಿರುವ ಮೋಷನ್ ಪೋಸ್ಟರ್, ಥಾಯ್ ಮಾರ್ಷಲ್ ಆರ್ಟ್ಸ್ ಸ್ಟಾರ್ ಟೋನಿ ಜಾ ಸಿನಿಮಾ 'ಆಂಗ್ ಬ್ಯಾಕ್ 2' ಚಿತ್ರದ ಪೋಸ್ಟರ್ ರೀತಿಯಲ್ಲೇ ಹೆಚ್ಚು ಕಡಿಮೆ ಕಾಣುತ್ತೆ. ಬೇಕಾದರೆ ನೀವೇ ನೋಡಿ...

ರಜಿನಿಕಾಂತ್ ಸಿನಿಮಾ ಇದೇ ವಿವಾದಕ್ಕೆ ಗುರಿ ಆಗಿತ್ತು

ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸೈಂಟಿಫಿಕ್ ಸಿನಿಮಾ '2.0' ಪೋಸ್ಟರ್ ಸಹ 'ಹ್ಯಾರಿ ಪಾಟರ್' ಮತ್ತು 'ದಿ ಡೆಥ್ಲಿ ಹ್ಯಾಲೋಸ್' ಜೊತೆಗೆ ಇತರೆ ಚಿತ್ರಗಳ ಪೋಸ್ಟರ್ ನಿಂದ ಪ್ರೇರಣೆಗೊಂಡಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.

ಚಿತ್ರ ರಿಲೀಸ್ ಯಾವಾಗ?

'ಬಾಹುಬಲಿ- ದಿ ಕನ್ ಕ್ಲೂಶನ್' ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ.

English summary
SS Rajamouli Directorial 'Baahubali 2' new poster is suspiciously similar to the poster of Thai martial arts star Tony Jaa's movie Ong Bak 2.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada