»   » ತಮನ್ನಾ ಭಾಟಿಯಾಗೆ ರಾಜಮೌಳಿ ಸ್ಪೆಷಲ್ ಗಿಫ್ಟ್

ತಮನ್ನಾ ಭಾಟಿಯಾಗೆ ರಾಜಮೌಳಿ ಸ್ಪೆಷಲ್ ಗಿಫ್ಟ್

Posted By:
Subscribe to Filmibeat Kannada

ಮಿಲ್ಕಿ ಬ್ಯೂಟಿ ಎಂದೇ ಖ್ಯಾತರಾಗಿರುವ ಸೌತ್ ಇಂಡಿಯನ್ ಬ್ಯೂಟಿ ಸೆನ್ಸೇಷನ್ ತಮನ್ನಾ ಭಾಟಿಯಾ ಅವರು 'ಬಾಹುಬಲಿ' ತಂಡ ಸೇರಿಕೊಂಡಿದ್ದಾರೆ. ಈ ಹಿಂದೆ ಪ್ರಭಾಸ್ ಗೆ 'ರೆಬೆಲ್' ಸಿನಿಮಾದಲ್ಲಿ ಜೋಡಿಯಾಗಿದ್ದ ತಮನ್ನಾ ಈಗ ರಾಜಮೌಳಿ ಆಕ್ಷನ್ ಕಟ್ನಲ್ಲಿ ಅಭಿನಯಿಸೋಕೆ ಥ್ರಿಲ್ಲಾಗಿದ್ದಾರೆ.

ಇದೇ ಡಿಸೆಂಬರ್ 21ಕ್ಕೆ 23 ವರ್ಷಕ್ಕೆ ಕಾಲಿಡ್ತಾ ಇರೋ ತಮನ್ನಾಗೆ ಇದು ರಾಜಮೌಳಿಯವರ ಸ್ಪೆಷಲ್ ಗಿಫ್ಟ್. ತಮನ್ನಾ ಇಲ್ಲಿ ಪ್ರಭಾಸ್ ಗೆ ಜೋಡಿಯಾಗುತ್ತಿರುವುದು ಅವಂತಿಕಾ ಅನ್ನುವ ಪಾತ್ರದ ಮೂಲಕ. ಹಾಗೇ ಇಲ್ಲಿ ಪ್ರಭಾಸ್ ಪಾತ್ರಕ್ಕೆ ಎರಡು ಶೇಡ್ ಗಳಿವೆ. ಒಂದು ಬಾಹುಬಲಿಯಾದರೆ ಮತ್ತೊಂದು ಶಿವುಡು. ಈ ಶಿವುಡು ಅನ್ನೋ ಪಾತ್ರಕ್ಕೆ ಅವಂತಿಕಾ ಜೋಡಿ. [ಹಾಟ್ ಬ್ಯೂಟಿ ತಮನ್ನಾ ಲಕ ಲಕ ಫೋಟೋಗಳು]


ತೆಲುಗಿನ ಬಾಹುಬಲಿ ತಮಿಳಲ್ಲಿ ಮಹಾಬಲಿಯಾಗಿ ತೆರೆಗೆ ಬರಲಿದೆ. 2015ಕ್ಕೇ ತಮಿಳಿನಲ್ಲೂ ಚಿತ್ರವನ್ನು ರಿಲೀಸ್ ಮಾಡಲಿರೋ ರಾಜಮೌಳಿ ಒಂದು ವಾರಿಯರ್ ಫೈಟ್ ಗೆ 2000 ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಬಳಸಿಕೊಳ್ಳುತ್ತಿದ್ದಾರೆ.

ಆ ಅದ್ಭುತ ಫೈಟ್ ಹೇಗಿರಬಹುದು ಅನ್ನುವುದನ್ನ ಯೋಚಿಸೀನೇ ಚಿತ್ರಪ್ರೇಮಿಗಳು ಹೊಸ ಕಲ್ಪನೆ ಕನಸುಗಳಲ್ಲಿ ಕಳೆದುಹೋಗಿರೋದು ಗ್ಯಾರಂಟಿ. ರಾಜಮೌಳಿ ಏನನ್ನೇ ಮಾಡಿದರೂ ಅದೊಂದು ಮಾಸ್ಟರ್ ಪೀಸ್. ಆದರೆ 2015ರ ವರೆಗೂ ಕಾಯ್ಬೇಕಲ್ಲ ಅನ್ನೋದೊಂದೇ ಬೇಸರ. (ಏಜೆನ್ಸೀಸ್)

English summary
Milky beauty Tamanna Bhatia joins SS Rajamouli's upcoming Telugu-Tamil period drama 'Baahubali' rest of the cast and is paired opposite Prabhas in the film. The film also features an ensemble cast of Rana Daggubati, Anushka Shetty, Ramya Krishnan and Sathyaraj.
Please Wait while comments are loading...