For Quick Alerts
  ALLOW NOTIFICATIONS  
  For Daily Alerts

  ದೀಪದ ಬೆಳಕಲ್ಲಿ ಹೊಳೆದ ತಾರೆಯರು: ಕೊರೊನಾ ಮಾರಿಗೆ ಬೆಳಕಿನ ಸೆಡ್ಡು

  |

  ಕೊರೊನಾ ವಿರುದ್ಧ ಭಾರತೀಯರೆಲ್ಲರೂ ಒಗ್ಗಟ್ಟು ಪ್ರದರ್ಶಿಸಲು, ಕೊರೊನಾ ಪೀಡಿತರ ಜೊತೆಗೆ 'ನಾವಿದ್ದೇವೆ' ಎಂದು ಸಾರು ಹೇಳಲು ಭಾನುವಾರ ರಾತ್ರಿ ಎಲ್ಲರೂ ಒಟ್ಟಾಗಿ ದೀಪ ಹಚ್ಚುವಂತೆ ಪ್ರಧಾನಿಗಳು ಕೊಟ್ಟಿದ್ದ ಕರೆಗೆ ದೇಶವೇ ಓಗೊಟ್ಟಿದೆ.

  ನಿಮಗೊಂದು ಸಲಾಂ ದೀಪಿಕಾ ದಾಸ್ | Deepika Das | Lights Up Dia | Filmibeat Kannada

  ಭಾರತೀಯರೆಲ್ಲಾ ಭಾನುವಾರ ರಾತ್ರಿ 9 ಗಂಟೆಗೆ ಮನೆಯಲ್ಲಿನ ಲೈಟ್ ಆರಿಸಿ ಒಂಬತ್ತು ನಿಮಿಷಗಳ ಕಾಲ ದೀಪ ಆರಿಸಿ, ಕೊರೊನಾ ವಿರುದ್ಧ ತಮ್ಮ ಒಗ್ಗಟ್ಟು ಸಾರಿದ್ದಾರೆ.

  Live Updates: ದೇಶಾದ್ಯಂತ 'ದೀಪ' ಕ್ರಾಂತಿ ಮೊಳಗಿಸಿದ ಪ್ರಧಾನಿ ಮೋದಿ

  ಬಾಲಿವುಡ್, ಟಾಲಿವುಡ್ ಸ್ಟಾರ್‌ಗಳೂ ಸಹ ಮೋದಿ ಅವರು ಕೊಟ್ಟಿದ್ದ ಕರೆಗೆ ಓಗೊಟ್ಟು ಲೈಟ್‌ಗಳನ್ನು ಆರಿಸಿ ದೀಪಗಳನ್ನು ಹಚ್ಚಿ, ಕತ್ತಲಲ್ಲಿ ಹೊಳೆದಿದ್ದಾರೆ. ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

  ಬಹುತೇಕ ಸೆಲೆಬ್ರಿಟಿಗಳು ದೀಪಗಳನ್ನು ಹಚ್ಚಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆಯ್ದ ಕೆಲವು ಸ್ಟಾರ್‌ಗಳ ಚಿತ್ರವನ್ನು ಇಲ್ಲಿ ಒಟ್ಟುಗೂಡಿಸಿ ನೀಡಲಾಗಿದೆ.

  ಪತ್ನಿ ಜೊತೆಗೆ ದೀಪ ಹಿಡಿದು ನಿಂತ ಶಿವಣ್ಣ

  ಪತ್ನಿ ಜೊತೆಗೆ ದೀಪ ಹಿಡಿದು ನಿಂತ ಶಿವಣ್ಣ

  ಕೊರೊನಾ ಬಾಹುಗಳು ಚಾಚಿದಾಗಿನಿಂದಲೂ ಶಿವರಾಜ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಜಾಗೃತೆ ನೀಡುವ ಕಾರ್ಯ ಮಾಡುತ್ತಲೇ ಇದ್ದಾರೆ. ಇಂದು ಸಹ ಸರಿಯಾಗಿ ಒಂಬತ್ತು ಗಂಟೆಗೆ ಪತ್ನಿಯೊಂದಿಗೆ ದೀಪ ಹಿಡಿದು ನಿಂತು ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಶಿವಣ್ಣ.

  ದೀಪ ಬೆಳಗಿದ ಜಗ್ಗೇಶ್

  ನಟ, ಬಿಜೆಪಿ ಸದಸ್ಯ ಜಗ್ಗೇಶ್ ಅವರು ಮೋದಿ ಕರೆ ಕೊಟ್ಟಂತೆ ದೀಪಗಳನ್ನೆಲ್ಲಾ ಆರಿಸಿ ದೀಪ ಹಚ್ಚಿದ್ದಾರೆ. ದೀಪ ಸಂದರ್ಭದಲ್ಲಿ ತಮ್ಮ ಹಿರಿಯರ ಮಾತುಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

  ಅಂಗಳದಲ್ಲಿ ಕೂತು ದೀಪ ಹಚ್ಚಿದ ಕಿಚ್ಚ

  ಕಿಚ್ಚ ಸುದೀಪ್ ಅಂಗಳದಲ್ಲಿ ಕೂತು ಮೇಣದ ಬತ್ತಿ ಹಚ್ಚುವ ಮೂಲಕ ಮೋದಿ ಕರೆ ಪಾಲಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.

  DPW ಎಂದ ಸೃಜನ್ ಲೋಕೇಶ್

  DPW ಎಂದ ಸೃಜನ್ ಲೋಕೇಶ್

  ದೀಪದ ಮೂಲಕವೇ ವೈದ್ಯರು, ಪೊಲೀಸರು, ಪೌರ ಕಾರ್ಮಿಕರಿಗೆ ಸೆಲ್ಯೂಟ್ ಹೊಡೆದಿದ್ದಾರೆ ನಟ ಸೃಜನ್ ಲೋಕೇಶ್. ದೀಪದಲ್ಲಿಯೇ ಡಿಪಿಡಬ್ಲು ಅಕ್ಷರಗಳನ್ನು ರಚಿಸಿದ್ದಾರೆ ಅವರು.

  ಕುಟುಂಬದೊಂದಿಗೆ ನಿಂತ ಚಿರಂಜೀವಿ

  ಕುಟುಂಬದೊಂದಿಗೆ ನಿಂತ ಚಿರಂಜೀವಿ

  ಮೆಗಾಸ್ಟಾರ್ ಚಿರಂಜೀವಿ ಇಡೀಯ ಕುಟುಂಬದೊಂದಿಗೆ ಮೇಣದಬತ್ತಿ ಹಿಡಿದು ನಿಂತು ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು.

  ನಟಿ ಸುಧಾರಾಣಿ ಸ್ವಸ್ಥಿಕ್ ದೀಪ

  ನಟಿ ಸುಧಾರಾಣಿ ಸ್ವಸ್ಥಿಕ್ ದೀಪ

  ಸ್ವಸ್ಥಿಕ್ ಆಕಾರದ ದೀಪಗಳನ್ನು ಹಿಡಿದು ನಟಿ ಸುಧಾರಾಣಿ ಮೋದಿ ಕರೆಗೆ ಓಗೊಟ್ಟಿದ್ದಾರೆ. ಕೊರೊನಾ ವಿರುದ್ಧ ಒಮ್ಮತ ಪ್ರದರ್ಶಿಸಿದ್ದಾರೆ.

  ಆಕಾಶಕ್ಕೆ ದೀಪ ಹಿಡಿದ ಅಕ್ಷಯ್

  ಆಕಾಶಕ್ಕೆ ದೀಪ ಹಿಡಿದ ಅಕ್ಷಯ್

  ಮೋದಿ ಆಪ್ತರೂ ಆಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮೇಣದ ಬತ್ತಿ ಹಿಡಿದು ಆಕಾಶಕ್ಕೆ ಮುಖ ಮಾಡಿ ಫೋಸು ನೀಡಿದ್ದಾರೆ. ಅವರು ಕೊರೊನಾ ವಿರುದ್ಧ ಹೋರಾಟಕ್ಕೆ 25 ಕೋಟಿ ನೆರವು ನೀಡಿದ್ದಾರೆ.

  ಕುಟುಂಬದೊಂದಿಗೆ ದೀಪ ಹಚ್ಚಿದ 'ದಿಯಾ'

  ಕುಟುಂಬದೊಂದಿಗೆ ದೀಪ ಹಚ್ಚಿದ 'ದಿಯಾ'

  ದಿಯಾ ನಾಯಕಿ ಖುಷಿ ಪತಿ ಮತ್ತು ಮಗಳೊಂದಿಗೆ ದೀಪ ಹಚ್ಚಿದ್ದಾರೆ. ದಿಯಾ ಸಿನಿಮಾದ ಮೂಲಕ ಖ್ಯಾತಿಯ ಉತ್ತಂಗಕ್ಕೇರಿರುವ ಖುಷಿ ಕುಟುಂಬದೊಂದಿಗೆ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

  English summary
  Star actors, celebrities light the lamp as requested by Narendra Modi and showed their solidity against Coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X