For Quick Alerts
  ALLOW NOTIFICATIONS  
  For Daily Alerts

  ಕಣದಲ್ಲಿರುವ ಸಿನಿ ತಾರೆಗಳ ಚಿತ್ರಗಳ ಪ್ರಸಾರಕ್ಕೆ ಬ್ರೇಕ್

  By Rajendra
  |

  ರೆಬೆಲ್ ಸ್ಟಾರ್ ಅಂಬರೀಶ್, ನವರಸಹ ಜಗ್ಗೇಶ್, ಶಶಿಕುಮಾರ್, ಮುಖ್ಯಮಂತ್ರಿ ಚಂದ್ರು, ಮಯೂರ್ ಪಟೇಲ್, ಬಿ.ಸಿ ಪಾಟೀಲ್, ಮದನ್ ಪಟೇಲ್, ಸಿ.ಪಿ ಯೋಗೇಶ್ವರ್ ಜೊತೆಗೆ ರಮ್ಯಾ, ರಕ್ಷಿತಾ, ಪೂಜಾಗಾಂಧಿ, ಶ್ರುತಿ, ಮಾಳವಿಕಾ ಅವಿನಾಶ್ ಸೇರಿದಂತೆ ಚುನಾವಣಾ ಕಣಕ್ಕಿಳಿಯುತ್ತಿರುವ ಹಿರಿ ಕಿರಿ ಬೆಳ್ಳಿತೆರೆ ನಟ ನಟಿಯರ ಚಲನಚಿತ್ರವನ್ನು ಕಿರುತೆರೆಯಲ್ಲಿ ಪ್ರದರ್ಶಿಸುವುದಕ್ಕೆ ಚುನಾವಣಾ ಆಯೋಗ ಕೊಕ್ಕೆ ಹಾಕಿದೆ.

  ವಿಧಾನಸಭೆ ಚುನಾವಣೆ ಮುಗಿಯುವ ತನಕ ಅಭ್ಯರ್ಥಿಗಳಾಗಿರುವ ಸಿನಿಮಾ ಮಂದಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಆಯೋಗ ಫರ್ಮಾನು ಹೊರಡಿಸಿದೆ. ಈ ಬಗ್ಗೆ ಟಿವಿ ಚಾನೆಲ್ ಮುಖ್ಯಸ್ಥರಿಗೆ ಚುನಾವಣಾ ಆಯೋಗ ಸೂಚನೆಗಳನ್ನು ನೀಡಿದೆ.

  ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿವಿಧ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿರುವ ನಟ, ನಟಿಯರ ಚಲನಚಿತ್ರಗಳು ಚುನಾವಣೆ ಮುಗಿಯುವ ತನಕ ಪ್ರದರ್ಶಿಸುವುದಿಲ್ಲ ಎಂದು ಟಿವಿ ಚಾನೆಲ್ ಮುಖ್ಯಸ್ಥರು ಆಶ್ವಾಸನೆ ನೀಡಿದ್ದಾರೆ.

  ಹೀಗಾಗಿ ಪ್ರೇಕ್ಷಕರು ತಮ್ಮ ನೆಚ್ಚಿನ ನಟ ನಟಿಯರು ಅಭಿನಯಿಸುವ ಚಿತ್ರಗಳ ಹಾಡು, ಚಿತ್ರ, ಟ್ರೈಲರ್ ಸೇರಿದಂತೆ ಯಾವುದೇ ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ.

  ಅಂಬರೀಶ್ ಅವರ ಬುಲ್ ಬುಲ್, ಉಮಾಶ್ರೀ ಅವರ ಛತ್ರಿಗಳು ಸಾರ್ ಛತ್ರಿಗಳು, ಪೂಜಾಗಾಂಧಿ ಅವರ ಜನವರಿ 1 ಬಿಡುಗಡೆ ಹಾಗೂ ಮಧುಬಂಗಾರಪ್ಪ ಅವರ ದೇವಿ ಚಿತ್ರಗಳು ಚುನಾವಣಾ ನೀತಿ ಸಂಹಿತೆ ಮುಗಿಯುವ ತನಕ ಬಿಡುಗಡೆಯಾಗುತ್ತಿಲ್ಲ. (ಏಜೆನ್ಸೀಸ್)

  English summary
  Election Commission of India orders not to broadcast/telecast movies of film stars who are contesting in the upcoming May 2013 Karnataka assembly election. Actors list included, for NO-Broadcast, No- show, No Telecast for the month of April 2013 are Rakishta, Pooja Gandhi, Umashree, Shruthi, Malavika Avinash, Ambarish, Shashikumar, Jaggesh, BC Patil, Yogeshwar, Ashok, Madan Patel, Mayur Patel and others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X