For Quick Alerts
  ALLOW NOTIFICATIONS  
  For Daily Alerts

  ಗುಪ್ತಚರ ಇಲಾಖೆ ಕೊಟ್ಟ ಎಚ್ಚರಿಕೆಯಿಂದ ಅಂಬಿ ಅಂತ್ಯಕ್ರಿಯೆಯಲ್ಲಿ ರಮ್ಯಾ ಪಾಲ್ಗೊಳ್ಳಲಿಲ್ಲ.! ಹೌದೇ.?

  |
  ಗುಪ್ತಚರ ಇಲಾಖೆ ಕೊಟ್ಟ ಎಚ್ಚರಿಕೆಯಿಂದ ಅಂಬಿ ಅಂತ್ಯಕ್ರಿಯೆಯಲ್ಲಿ ರಮ್ಯಾ ಪಾಲ್ಗೊಳ್ಳಲಿಲ್ಲ.! ಹೌದೇ.?

  'ಸ್ಯಾಂಡಲ್ ವುಡ್ ಕ್ವೀನ್' ಎಂದೇ ಕರೆಯಿಸಿಕೊಳ್ಳುತ್ತಿದ್ದ, ಮಂಡ್ಯದ ಮಾಜಿ ಸಂಸದೆ ರಮ್ಯಾ ವಿರುದ್ಧ ಅಂಬರೀಶ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಅಂಬರೀಶ್ ಗೆ ಅಂತಿಮ ನಮನ ಸಲ್ಲಿಸದ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ರಮ್ಯಾಗೆ ಮಂಡ್ಯ ಜನತೆ ಶ್ರದ್ಧಾಂಜಲಿ ಅರ್ಪಿಸಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

  ರಾಜಕೀಯದಲ್ಲಿ ರಮ್ಯಾ ನೆಲೆಯೂರಲು, ಮಂಡ್ಯದ ಸಂಸದೆ ಆಗಲು ನೇರ ಕಾರಣ ಅಂಬರೀಶ್. ಇಂತಿಪ್ಪ ಅಂಬರೀಶ್ ಇಹಲೋಕ ತ್ಯಜಿಸಿದಾಗ, ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ರಮ್ಯಾ ಆಗಮಿಸಲಿಲ್ಲ. ಇದರಿಂದ ಮಂಡ್ಯ ಜನತೆ ಕುಪಿತಗೊಂಡಿದ್ದರು.

  ಅಂಬರೀಶ್ ಅಂತ್ಯಕ್ರಿಯೆಯಲ್ಲಿ ರಮ್ಯಾ ಪಾಲ್ಗೊಳ್ಳದೇ ಇರಲು ವಿಚಿತ್ರ ಕಾಯಿಲೆ ಕಾರಣ ಎಂದು ಇಲ್ಲಿಯವರೆಗೂ ಸುದ್ದಿ ಆಗಿತ್ತು. ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಆಸ್ಟಿಯೋಕ್ಲ್ಯಾಟೋಮಾ ಎಂಬ ಅಪರೂಪದ ಕಾಯಿಲೆಗೆ ರಮ್ಯಾ ತುತ್ತಾಗಿದ್ದಾರೆ. ಇದರಿಂದ ರಮ್ಯಾ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಅವರು ಓಡಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಲಾಗಿತ್ತು.

  ಆದ್ರೀಗ ನೋಡಿದ್ರೆ, ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಮ್ಯಾ ದೆಹಲಿಯಿಂದ ಬೆಂಗಳೂರಿನ ವಿಮಾನ ಟಿಕೆಟ್ ಬುಕ್ ಮಾಡಿದ್ದರಂತೆ. ಆದ್ರೆ, ಅಷ್ಟರಲ್ಲಿ ಗುಪ್ತಚರ ಇಲಾಖೆಯಿಂದ ಬಂದ ಎಚ್ಚರಿಕೆಯಿಂದ ರಮ್ಯಾ ಬೆಂಗಳೂರಿಗೆ ಬರಲಿಲ್ಲ ಎನ್ನಲಾಗಿದೆ. ಮುಂದೆ ಓದಿರಿ...

  ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

  ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

  ''ಒಂದು ವೇಳೆ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ರಮ್ಯಾ ಪಾಲ್ಗೊಂಡರೆ, ರಮ್ಯಾ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇದೆ'' ಎಂದು ಗುಪ್ತಚರ ಇಲಾಖೆ ವರದಿ ನೀಡಿದ ಕಾರಣ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ರಮ್ಯಾ ಪಾಲ್ಗೊಳ್ಳಲಿಲ್ಲ ಎಂಬ ಸುದ್ದಿ ಸದ್ಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

  ಅಂಬಿ ಅಂತ್ಯಕ್ರಿಯೆಗೆ ಗೈರು : ಡಿಕೆಶಿ ಬಳಿ ಕಾರಣ ಹೇಳಿಕೊಂಡಿದ್ದ ರಮ್ಯಾ

  ಕೊನೆಯ ಕ್ಷಣದಲ್ಲಿ ಬದಲಾವಣೆ

  ಕೊನೆಯ ಕ್ಷಣದಲ್ಲಿ ಬದಲಾವಣೆ

  ರಾಜ್ಯಸಭೆಯ ಹಿರಿಯ ಸದಸ್ಯರೊಬ್ಬರ ಜೊತೆಗೆ ದೆಹಲಿಯಿಂದ ಬೆಂಗಳೂರಿಗೆ ಬರಲು ರಮ್ಯಾ ವಿಮಾನದ ಟಿಕೆಟ್ ಬುಕ್ ಮಾಡಿಸಿದ್ದರು. ಆದ್ರೆ, ಅಷ್ಟರಲ್ಲಿ ಗುಪ್ತಚರ ಇಲಾಖೆ ವರದಿ ಬಂದಿದ್ದರಿಂದ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಮ್ಯಾ ಹಿಂದೇಟು ಹಾಕಿದರು ಎನ್ನಲಾಗಿದೆ.

  ಮಂಡ್ಯ ಪಾಲಿಗೆ ಸತ್ತ ರಮ್ಯಾ: 'ಶ್ರದ್ಧಾಂಜಲಿ' ಅರ್ಪಿಸಿದ ಜನತೆ

  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರಮ್ಯಾ

  ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ರಮ್ಯಾ

  ಆಸ್ಟಿಯೋಕ್ಲ್ಯಾಟೋಮಾ ಎಂಬ ಅಪರೂಪದ ಕಾಯಿಲೆಯಿಂದ ರಮ್ಯಾ ಬಳಲುತ್ತಿದ್ದಾರೆ. ಕಾಲು ನೋವು ಕಾಣಿಸಿಕೊಂಡ ಕೂಡಲೆ ಚಿಕಿತ್ಸೆ ಪಡೆದ ಪರಿಣಾಮ, ರಮ್ಯಾ ಕಾಲು ಸದ್ಯ ಗೆಡ್ಡೆ ಹಾಗೂ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿದೆ.

  ಅಂಬಿ ದರ್ಶನಕ್ಕೆ ರಮ್ಯಾ ಬರ್ಲಿಲ್ಲ: ಕಾರಣ ವಿಚಿತ್ರ ಕಾಯಿಲೆ.! ಏನದು.?

  ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದ ರಮ್ಯಾ

  ಅಂಬರೀಶ್ ನಿಧನದ ಸುದ್ದಿ ಕೇಳಿದ್ಮೇಲೆ, ಟ್ವಿಟ್ಟರ್ ನಲ್ಲಿ ರಮ್ಯಾ ಸಂತಾಪ ಸೂಚಿಸಿದ್ದರು. ''ಅಂಬರೀಶ್ ಅಂಕಲ್'' ಅಂತ ಪ್ರೀತಿಯಿಂದ ಕರೆಯುತ್ತಿದ್ದ ರಮ್ಯಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಅಂತಲೇ ಹಲವರು ಭಾವಿಸಿದ್ದರು. ಆದ್ರೆ, ಅದು ಸಾಧ್ಯವಾಗದ ಕಾರಣ ರಮ್ಯಾ ಮೇಲೆ ಮಂಡ್ಯ ಜನತೆ ಮುನಿಸಿಕೊಂಡಿದ್ದಾರೆ.

  English summary
  According to the latest reports, State Intelligence report suggested Ramya to not to attend Ambareesh's last rites, as there was a possibility of attack on her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X