»   » ಸ್ಟಿಲ್ ಫೋಟೋಗ್ರಾಫರ್ ಬಸವರಾಜ್ ಕ್ಯಾನ್ಸರ್ ಗೆ ಬಲಿ

ಸ್ಟಿಲ್ ಫೋಟೋಗ್ರಾಫರ್ ಬಸವರಾಜ್ ಕ್ಯಾನ್ಸರ್ ಗೆ ಬಲಿ

Posted By:
Subscribe to Filmibeat Kannada

ಈ ಕ್ಯಾನ್ಸರ್ ಮಹಾಮಾರಿ ಸಾಕಷ್ಟು ಕಲಾವಿದರನ್ನು ನುಂಗಿ ನೀರು ಕುಡಿದಿದೆ. ಕೆಲವು ಕಲಾವಿದರು ಕ್ಯಾನ್ಸರ್ ಗೆದ್ದರೆ ಇನ್ನೂ ಕೆಲವರು ಅದಕ್ಕೆ ಬಲಿಯಾಗಿದ್ದಾರೆ. ಕೆಲವರು ಈ ಮಹಾಮಾರಿ ಜೊತೆ ಹೋರಾಡುತ್ತಲೇ ಇದ್ದಾರೆ. ಇತ್ತೀಚೆಗೆ ಕೆಂಗೇರಿ ಬಸವರಾಜ್ (45) ಕ್ಯಾನ್ಸರ್ ಮಹಾಮಾರಿಗೆ ಬಲಿಯಾಗಿದ್ದಾರೆ.

ಸುದೀರ್ಘ ಸಮಯದಿಂದ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದಕ್ಕೆ ಅವರ ಕೆಟ್ಟ ಅಭ್ಯಾಸವೇ ಕಾರಣ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಸದಾ ಪಾನ್ ಪರಾಗ್ ಹಾಗೂ ಜರ್ದಾ ಜಗಿದು ಜಗಿದು ಅವರಿಗೆ ಕ್ಯಾನ್ಸರ್ ಆಗಿತ್ತು. ಕಡೆಗೆ ಕ್ಯಾನ್ಸರ್ ಅವರನ್ನು ಜಗಿಯಲು ಶುರುಮಾಡಿತು.

K Basavaraj

ಇನ್ನೂ ಅವರಿಗೆ 45ರ ಪ್ರಾಯ. ಈ ಸಣ್ಣ ವಯಸ್ಸಿನಲ್ಲೇ ಅವರನ್ನು ಕ್ಯಾನ್ಸರ್ ಬಲಿ ತೆಗೆದುಕೊಂಡಿದೆ. ಸರಿಸುಮಾರು 100ಕ್ಕೂ ಹೆಚ್ಚು ಚಿತ್ರಗಳಿಗೆ ಬಸವರಾಜ್ ಅವರು ಸ್ಟಿಲ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಅಂಬರ' ಚಿತ್ರಕ್ಕೆ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು.

ಸರಳ ಜೀವಿಯಾಗಿದ್ದ ಬಸವರಾಜ್ ಅವರು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹಾಗೂ ಸೂರಪ್ಪ ಬಾಬು ಬ್ಯಾನರ್ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ತರ್ಲೆ ನನ್ ಮಕ್ಕಳು, ದಶಮುಖ ಸೇರಿದಂತೆ ಹಲವು ಚಿತ್ರಗಳಿಗೆ ಅವರು ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ಯಾಕೋ ಏನೋ 'ಅಂಬರ' ಚಿತ್ರತಂಡಕ್ಕೆ ಸಾಕಷ್ಟು ವಿಘ್ನಗಳೇ ಎದುರಾಗುತ್ತಿವೆ. ಈ ಹಿಂದೆ ಈ ಚಿತ್ರದ ಸಹಾಯಕ ಕಲಾ ನಿರ್ದೇಶಕ ಸದಾಶಿವಯ್ಯ (48) ಚಿತ್ರೀಕರಣ ವೇಳೆ ಗಂಗಾನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಈಗ ಅದೇ ಚಿತ್ರದ ತಾಂತ್ರಿಕ ಬಳಗಕ್ಕೆ ಸೇರಿರುವ ಬಸವರಾಜ್ ಅವರನ್ನು ಕ್ಯಾನ್ಸರ್ ಹೆಮ್ಮಾರಿ ಕಸಿದುಕೊಂಡಿದೆ. (ಏಜೆನ್ಸೀಸ್)

English summary
Kannada films still photographer K Basavaraj (45) dies of cancer. He worked of over 100 films as still photographer, worked recently for 'Ambara', which had Yogesh and Bhama in lead.
Please Wait while comments are loading...