»   » ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.?

ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.?

Posted By:
Subscribe to Filmibeat Kannada
ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಮದುವೆ ಡಿಸೆಂಬರ್ 1, 1999ರಲ್ಲಿ ನಡೆದಿತ್ತು. ಈ ಅದ್ಭುತ ಕ್ಷಣವನ್ನ ಇಂದಿನ ಅದೇಷ್ಟೋ ಅಭಿಮಾನಿಗಳು ನೋಡಿರಲ್ಲ. ಒಂದು ವೇಳೆ ಪುನೀತ್ ಅವರ ಮದುವೆ ಈಗೇನಾದ್ರೂ ನಡೆದಿದ್ದರೇ ಅಭಿಮಾನಿಗಳ ಸಂಭ್ರಮವನ್ನ ಊಹಿಸುವುದು ಕಷ್ಟ ಬಿಡಿ.

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಮದುವೆಯಲ್ಲಿ ಡಾ.ರಾಜ್ ಕುಮಾರ್ ಅವರ ಸಂಭ್ರಮವನ್ನ ನೋಡದವರು ಈ ಫೋಟೋವನ್ನ ನೋಡಿದರೇ ಸಾಕು. ಅವರ ಖುಷಿ, ಸಂತೋಷದ ಪರಿ ಹೇಗಿತ್ತು ಎಂಬುದು ಗೊತ್ತಾಗುತ್ತಿದೆ. ಸುಮಾರು 19 ವರ್ಷದ ಹಿಂದೆ ನಡೆದಿದ್ದ ಮದುವೆಯ ಕ್ಷಣಗಳನ್ನ ಈ ಫೋಟೋದಲ್ಲಿ ನೋಡಲು ಅವಕಾಶ ಸಿಕ್ಕಿದೆ.

ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲ, ದರ್ಶನ್, ಸುದೀಪ್, ಯಶ್, ಅಂಬಿ, ಜಗ್ಗೇಶ್, ವಿಷ್ಣು ಅವರ ಮದುವೆ ಆದಾಗ ಹೇಗಿದ್ದರು.? ಆ ಕ್ಷಣ ಹೇಗಿತ್ತು ಎಂಬುದನ್ನ ಚಿತ್ರಗಳ ಸಮೇತ ನೀಡಲಾಗಿದೆ. ಪುನೀತ್ ರಾಜ್ ಕುಮಾರ್ ಮದುವೆ ಫೋಟೋ ಕೊನೆಯಲ್ಲಿದೆ. ಮುಂದೆ ಓದಿ....

ದರ್ಶನ್-ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆ ಇಸವಿಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿತ್ತು. 200೦ ಮೇ 19 ರಂದು ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆಗ ದರ್ಶನ್ ಪೋಷಕ ಕಲಾವಿದನಾಗಿದ್ದರೇ ಹೊರತು ನಾಯಕನಟನಾಗಿರಲಿಲ್ಲ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಗಿಂದು ಖುಷಿಯ ವಿಚಾರ

ಶಿವು ವೆಡ್ಸ್ ಗೀತಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಮದುವೆ ಆಗಿದ್ದು 1986 ಮೇ 19. ಖ್ಯಾತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಗೀತಾ. ಎರಡು ಕುಟುಂಬಗಳ ಸಮ್ಮುಖದಲ್ಲಿ ಮದುವೆ ಆಗಿದ್ದರು. ಶಿವರಾಜ್ ಕುಮಾರ್ ಮದುವೆ ಆದ ವರ್ಷವೇ ಚೊಚ್ಚಲ ಸಿನಿಮಾ ಆನಂದ್ ಬಿಡುಗಡೆಯಾಗಿತ್ತು. ಶಿವಣ್ಣ ಮದುವೆ ಎಂಜಿಆರ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಕನ್ನಡ ನಟ-ನಟಿಯರು ಭಾಗಿಯಾಗಿದ್ದರು.

ಶಿವಣ್ಣ ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ

ಸುದೀಪ್ ಮತ್ತು ಪ್ರಿಯಾ

ಚಿತ್ರಕೃಪೆ: ಚಿತ್ರಲೋಕ.ಕಾಮ್

ಸುದೀಪ್ ಮತ್ತು ಪ್ರಿಯಾ ಅವರ ಮದುವೆ ಆಗಿದ್ದು 2000, ಅಕ್ಟೋಬರ್ 18. ಸುದೀಪ್ ಮತ್ತು ಪ್ರಿಯಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಆ ವೇಳೆ ಸುದೀಪ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ 'ಸ್ಪರ್ಶ' ಬಿಡುಗಡೆಯಾಗಿತ್ತು.

ಉಪ್ಪಿ-ಪ್ರಿಯಾಂಕಾ

ರಿಯಲ್ ಸ್ಟಾರ್ ಉಪೇಂದ್ರ ಮತ್ತು 'ಮಿಸ್ ಕೊಲ್ಕತ್ತಾ' ಆಗಿದ್ದ ಪ್ರಿಯಾಂಕಾ ಅವರ ವಿವಾಹ ಡಿಸೆಂಬರ್ 14, 2003ರಲ್ಲಿ ನಡೆದಿತ್ತು. ಇಬ್ಬರು ಸಿನಿಮಾ ಕಲಾವಿದರಾಗಿದ್ದ ವೇಳೆಯೇ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದರು.

ಚಿತ್ರಗಳು: 'ಉಪೇಂದ್ರ-ಪ್ರಿಯಾಂಕಾ' ದಂಪತಿಯ 13ನೇ ವಿವಾಹ ವಾರ್ಷಿಕೋತ್ಸವ

ರಕ್ಷಿತಾ-ಪ್ರೇಮ್

ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಕನ್ನಡದ ಸ್ಟಾರ್ ನಿರ್ದೇಶಕ ಪ್ರೇಮ್ ಅವರ ಮದುವೆ 2007 ರಲ್ಲಿ ನಡೆದಿತ್ತು. ಈ ಮದುವೆಗೆ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು ಆಗಮಿಸಿ ಆರ್ಶೀವಾದ ಮಾಡಿದ್ದರು.

ಗಣೇಶ್-ಶಿಲ್ಪಾ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಅವರು ಮದುವೆ 11 ಫೆಬ್ರವರಿ 2008 ರಂದು ಆಗಿತ್ತು. 'ಮುಂಗಾರು ಮಳೆ' ಚಿತ್ರದ ಯಶಸ್ಸಿನ ನಂತರ ಗಣೇಶ್-ಶಿಲ್ಪಾ ಅವರನ್ನ ವರಿಸಿದ್ದರು.

ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಮಗಳು ಕೊಟ್ಟ ಉಡುಗೊರೆ ಇದು

ವಿಷ್ಣುವರ್ಧನ್-ಭಾರತಿ

ಡಾ ವಿಷ್ಣುವರ್ಧನ್ ಮತ್ತು ಭಾರತಿ ಅವರ ಮದುವೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಉತ್ತಮ ನೆನಪಾಗಿ ಉಳಿದಿದೆ. 27 ಫೆಬ್ರವರಿ 1975 ರಂದು ಇಬ್ಬರು ಸಪ್ತಪದಿ ತುಳಿದಿದ್ದರು. ಆಗ ತಾನೆ 'ನಾಗರಹಾವು' ಚಿತ್ರದ ಮೂಲಕ ಯಶಸ್ಸು ಕಂಡಿದ್ದ ವಿಷ್ಣುವರ್ಧನ್ ಮತ್ತು ಆಗಾಗಲೇ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದ ಭಾರತಿ ಅವರ ವಿವಾಹ ದೊಡ್ಡ ಮಟ್ಟದಲ್ಲಿ ನಡೆದಿತ್ತು.

ಅಂಬರೀಷ್-ಸುಮಲತಾ

8 ಡಿಸೆಂಬರ್ 1991 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಮದುವೆ ನೆರವೇರಿತ್ತು. ಇಬ್ಬರು ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯಾಗಿ ಬೆಳೆದಿದ್ದರು. ಪರಸ್ಪರ ಪ್ರೀತಿಸಿ ಸಪ್ತಪದಿ ತುಳಿದಿದ್ದರು.

ಅಂಬಿ-ಸುಮಲತಾ 'ಸಿಲ್ವರ್ ಜ್ಯೂಬಿಲಿ' ಸಂಭ್ರಮದಲ್ಲಿ ದರ್ಶನ್, ಪುನೀತ್ ಭಾಗಿ

ಜಗ್ಗೇಶ್-ಪರಿಮಳ

ಜಗ್ಗೇಶ್ ಮತ್ತು ಪರಿಮಳ ದಂಪತಿಯ ಲವ್ ಸ್ಟೋರಿ ತುಂಬ ವಿಶೇಷವಾಗಿದೆ. 1984ರ ಮಾರ್ಚ್ ತಿಂಗಳಲ್ಲಿ ಜಗ್ಗೇಶ್ ಅವರು ವಿವಾಹವಾಗಿದ್ದರು.

ಯಶ್-ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಅವರ ವಿವಾಹ 2016ರ ಡಿಸೆಂಬರ್ 9 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ವರ್ಷಗಳ ಕಾಲ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

ಪುನೀತ್ ಮದುವೆ ಫೋಟೋ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಮದುವೆ ಡಿಸೆಂಬರ್ 1, 1999ರಲ್ಲಿ ನಡೆದಿತ್ತು.

16ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಸಂಭ್ರಮದಲ್ಲಿ ಪವರ್ ಸ್ಟಾರ್.!

English summary
Story behind Kannada Actors Marriage. Puneeth rajkumar, darshan, sudeep, ganesh, yash Marriage unseen Photos.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada