For Quick Alerts
  ALLOW NOTIFICATIONS  
  For Daily Alerts

  ರಜಿನಿಕಾಂತ್ ಜೊತೆ ನಿಂತಿರುವ ಈ ವ್ಯಕ್ತಿ ಯಾರು ಗೊತ್ತಾ?

  By Harshitha
  |

  ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆ ಹೀಗೆ ಫೋಟೋ ಕ್ಲಿಕ್ ಮಾಡಿಸಿಕೊಂಡಿರುವ ವ್ಯಕ್ತಿಯ ಹೆಸರು ಶಿವಕುಮಾರ್. ಈ ಹಿಂದೆ 'ರೌಡಿ ಹೃದಯ' ಅಂತ ಒಂದು ಸಿನಿಮಾ ಮಾಡಿದ್ದರು. ಈಗ ಕಾಲಿವುಡ್ ನಲ್ಲಿ 'ಕಾಳಿ' ಅಂತ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ಅವರೇ ಹೀರೋ ಕಮ್ ಡೈರೆಕ್ಟರ್.

  'ಕಾಳಿ' ಎಂದ ಕೂಡಲೆ ಮೂರು ದಶಕಗಳ ಹಿಂದೆ ರಜಿನಿಕಾಂತ್ ಹಾಗೂ ಚಿರಂಜೀವಿ ಅಭಿನಯದ 'ಕಾಳಿ' ಸಿನಿಮಾ ನೆನಪಾಗಬಹುದು. ಈಗ ಅದೇ ಟೈಟಲ್ ನ ಶಿವಕುಮಾರ್ ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೋದರೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಬಯಲಿಗೆ ಬರುತ್ತೆ.! ['ಮದಾರಿ'-'ಕಬಾಲಿ' ಪೋಸ್ಟರ್ ಸೇಮ್: ಕಳ್ಳರು ಯಾರು?]

  ಕಳೆದ ವರ್ಷ ರಜಿನಿಕಾಂತ್ ಅಭಿನಯದಲ್ಲಿ 'ಕಬಾಲಿ' ಸಿನಿಮಾ ಬರಲಿದೆ ಎನ್ನುವ ಅನೌನ್ಸ್ ಮೆಂಟ್ ಹೊರಬಿತ್ತಲ್ಲಾ? ಆಗ ಎಲ್ಲರಿಗೂ ಸಹಜವಾಗಿ 'ಕಬಾಲಿ' ಬಗ್ಗೆ ಕುತೂಹಲ ಮೂಡಿತ್ತು. ಆದ್ರೆ, ವಾಸ್ತವದಲ್ಲಿ 'ಕಬಾಲಿ' ಚಿತ್ರದ ಶೀರ್ಷಿಕೆ ಬೇರಾರದ್ದೋ ಹೆಸರಲ್ಲಿ ಅದಾಗಲೇ ರಿಜಿಸ್ಟರ್ ಆಗಿ ಹೋಗಿತ್ತು. ಹಾಗೆ 'ಕಬಾಲಿ' ಚಿತ್ರದ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿದ್ದವರು ಬೇರೆ ಯಾರೂ ಅಲ್ಲ, ಇದೇ ಶಿವಕುಮಾರ್.

  ಶಿವಕುಮಾರ್ ಮೂಲತಃ ಮೈಸೂರಿನವರು. ಅಪ್ಪಟ ಕನ್ನಡಿಗರು. ತಮಿಳಿನಲ್ಲಿ ತಾವೊಂದು ಸಿನಿಮಾ ಮಾಡಬೇಕೆಂಬ ಆಸೆಯಿಂದ 2011ರಲ್ಲಿ 'ಕಬಾಲಿ' ಎನ್ನುವ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿಸಿದ್ದರು. 2015 ರ ಅಕ್ಟೋಬರ್ ತನಕವೂ ಆ ಟೈಟಲ್ ನ ರಿನೀವಲ್ ಮಾಡುತ್ತಲೇ ಬಂದಿದ್ದರು. [ಕರ್ನಾಟಕದಲ್ಲಿ 'ಕಬಾಲಿ' ಗಿಂತ 'ನಾಗರಹಾವು' ಟ್ರೆಂಡಿಂಗ್.!]

  ಆದರೆ ರಜಿನಿ ಅವರ ಸಿನಿಮಾ ಅನೌನ್ಸ್ ಆದ ಮೇಲೆ ಚಿತ್ರತಂಡಕ್ಕೆ ಶಿವಕುಮಾರ್ ಬಗ್ಗೆ ಗೊತ್ತಾಯ್ತು. ತಕ್ಷಣ ನಿರ್ಮಾಪಕ ಕಲೈಪುಲಿ ತನು ಅವರು ''ರಜನಿಕಾಂತ್ ಅವರು ನಟಿಸಲಿರುವ ಚಿತ್ರಕ್ಕೆ ನಿಮ್ಮ 'ಕಬಾಲಿ' ಶೀರ್ಷಿಕೆಯನ್ನು ಕೊಡಲು ಸಾಧ್ಯವೇ?'' ಎಂದು ಕೇಳಿದರು.

  ಹಿಂದೆ ಮುಂದೆ ಯೋಚಿಸದ ಶಿವಕುಮಾರ್ 'ರಜಿನಿ ಸರ್ ನನ್ನ ಪಾಲಿನ ದೇವರು. ಅವರು ನಟಿಸುವುದಾದರೆ ನಾನು ಕೊಡುತ್ತೇನೆ'' ಎಂದು ಒಂದೇ ಮಾತಿಗೆ ಒಪ್ಪಿಗೆ ನೀಡಿ 'ಕಬಾಲಿ' ಶೀರ್ಷಿಕೆ ಬಿಟ್ಟುಕೊಟ್ಟರು.

  ನಂತರ 'ಕಬಾಲಿ' ಸಿನಿಮಾ ಶೂಟಿಂಗ್ ಕೂಡ ಆರಂಭವಾಯಿತು. ಅದೊಂದು ದಿನ ಚಿತ್ರೀಕರಣದ ಸ್ಥಳಕ್ಕೆ ಶಿವಕುಮಾರ್ ಅವರನ್ನು ಕರೆಸಿ ರಜಿನಿ ಅವರಿಗೆ ಪರಿಚಯ ಮಾಡಿಕೊಡಲಾಯ್ತು. ಶಿವಕುಮಾರ್ ಮೈಸೂರಿನ ಹುಡುಗ ಎಂದು ರಜಿನಿಗೆ ಗೊತ್ತಾದ ಕೂಡಲೆ ಬಿಗಿದಪ್ಪಿ, ಕನ್ನಡದಲ್ಲೇ ಮಾತನಾಡಿ ಪ್ರೀತಿ ತೋರಿ ಕಳುಹಿಸಿಕೊಟ್ಟರು. [ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಟ್ರೆಂಡಿಂಗ್!]

  'ಕಬಾಲಿ' ಚಿತ್ರದ ಶೀರ್ಷಿಕೆಗಾಗಿ ಏನೂ ಪಡೆಯದ ಶಿವಕುಮಾರ್ ಗಾಗಿ ಸ್ವತಃ ರಜಿನಿ 'ಕಾಳಿ' ಶೀರ್ಷಿಕೆ ಕೊಡಿಸಿದ್ದಾರೆ.

  ಸದ್ಯದಲ್ಲೇ 'ಕಾಳಿ' ಸಿನಿಮಾ ಆರಂಭವಾಗಲಿದೆ. ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.

  English summary
  From whom did Super Star Rajinikanth get 'Kabali' title. Here is an interesting story behind it. Just take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X