»   » ಫೈಟ್ ಮಾಸ್ಟರ್ ರವಿವರ್ಮ ಈಗ ನಾಯಕ ನಟ

ಫೈಟ್ ಮಾಸ್ಟರ್ ರವಿವರ್ಮ ಈಗ ನಾಯಕ ನಟ

Posted By:
Subscribe to Filmibeat Kannada

ಸಾಹಸ ನಿರ್ದೇಶಕ ರವಿವರ್ಮ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಬಾಲಿವುಡ್ ನಲ್ಲೂ ಸಖತ್ ಫೇಮಸ್. ಸಲ್ಮಾನ್ ಖಾನ್ ಸಿನಿಮಾಗಳಿಗೆ ಸಾಹಸ ಸಂಯೋಜಿಸಿ ಜನಪ್ರಿಯತೆಗಳಿಸಿರುವ ರವಿವರ್ಮ, ಇದೀಗ ಹೀರೋ ಆಗುವುದಕ್ಕೆ ಮನಸ್ಸು ಮಾಡಿದ್ದಾರೆ.

ಇಲ್ಲಿಯವರೆಗೂ ತೆರೆಹಿಂದೆ ನಿಂತು ಹೀರೋಗಳನ್ನ 'ಸೂಪರ್ ಹೀರೋ' ಮಾಡುತ್ತಿದ್ದ ರವಿವರ್ಮ ಇದೀಗ ತೆರೆಮೇಲೆ ತಾನೇ ಖುದ್ದು 'ಹೀರೋ' ಆಗುತ್ತಿದ್ದಾರೆ. ಹಾಗೆ, ರವಿವರ್ಮರನ್ನ ಹೀರೋ ಮಾಡುತ್ತಿರುವವರು ನಿರ್ದೇಶಕಿ ರೂಪಾ ಐಯ್ಯರ್. [ಸಲ್ಲು, ಶಾರುಖ್ ಗೆ ಸ್ಟಂಟ್ ಮಾಡಿಸೋ ಮಂಡ್ಯ ಹೈದ]

Ravi varma

ಹಾಗೆ ನೋಡಿದರೆ, ''ರವಿವರ್ಮ ಹೀರೋ ಆಗುತ್ತಿದ್ದಾರೆ'' ಅನ್ನುವ ಮಾತು ಎರಡು ವರ್ಷ ಹಿಂದಿನದ್ದು. 'ಚಂದ್ರ' ಸಿನಿಮಾ ಮಾಡುವ ಮುನ್ನ ಈ ಆಲೋಚನೆ ಮಾಡಿದ್ದ ರೂಪಾ, ರವಿವರ್ಮ ಜೊತೆ ಮಾತುಕತೆ ಕೂಡ ನಡೆಸಿದ್ದರು.

ಅಷ್ಟರಲ್ಲಿ ರವಿವರ್ಮ ಬಾಲಿವುಡ್ ಗೆ ಹಾರಿದ್ದರಿಂದ, ಈ ಪ್ರಾಜೆಕ್ಟ್ ಅನಿವಾರ್ಯವಾಗಿ ಮುಂದೂಡಲಾಯ್ತು. ಇದೀಗ ಬಾಲಿವುಡ್ ಕಮಿಟ್ಮೆಂಟ್ ಮುಗಿಸಿ, ಗಾಂಧಿನಗರಕ್ಕೆ ಬಂದಿರುವ ರವಿವರ್ಮ ಬಣ್ಣ ಹಚ್ಚೋಕೆ ಮುಂದಾಗಿದ್ದಾರೆ. [ಹರಿಕೃಷ್ಣ, ರವಿವರ್ಮ ಹಾಗೂ ಬಾಬು ತ್ರಿವೇಣಿ ಸಂಗಮ]

ಅದಕ್ಕೋಸ್ಕರ ಮತ್ತಷ್ಟು ಸ್ಲಿಮ್ ಆಗಿ ಭರ್ಜರಿ ತಯಾರಿಯನ್ನೂ ರವಿವರ್ಮ ನಡೆಸುತ್ತಿದ್ದಾರೆ. ಹೇಳಿಕೇಳಿ, ರವಿವರ್ಮ ಆಕ್ಷನ್ ಮಾಡುವುದರಲ್ಲಿ ಫೇಮಸ್ ಆಗಿರುವುದರಿಂದ, ''ಅವರಿಗೆ ಸೂಟ್ ಆಗುವಂತಹ ಆಕ್ಷನ್ ಓರಿಯೆಂಟೆಡ್ ಸಿನಿಮಾ ಮಾಡುತ್ತಿದ್ದೀನಿ. ಕಂಪ್ಲೀಟ್ ಕಮರ್ಶಿಯಲ್ ಸಿನಿಮಾ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ರೂಪಾ ಐಯ್ಯರ್ ತಿಳಿಸಿದ್ದಾರೆ.

ಆಕ್ಷನ್ ಸಿನಿಮಾ ಆದ್ದರಿಂದ ಪವನ್ ಒಡೆಯರ್ ಕೈಲಿ ವಿಭಿನ್ನ ಕಥೆಯನ್ನ ರೂಪಾ ಬರೆಸುತ್ತಿದ್ದಾರಂತೆ. ಕಥೆ ರೆಡಿಯಾಗ್ತಿದ್ದಂತೆ ಶೂಟಿಂಗ್ ಶುರುವಾಗಲಿದೆ. ಆಮೇಲೆನಿದ್ದರೂ ತೆರೆಮೇಲೆ ರವಿವರ್ಮ ರಿಯಲ್ ಆಕ್ಷನ್ ನದ್ದೇ ಅಬ್ಬರ. (ಫಿಲ್ಮಿಬೀಟ್ ಕನ್ನಡ)

English summary
Stunt Master Ravi Varma, who is well-known in sandalwood and Bollywood is all set to debute as Hero in Roopa Iyer's untitled next directorial venture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada