»   » ಎಂ ಎಂ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಪ್ರೇಮ್!

ಎಂ ಎಂ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಪ್ರೇಮ್!

By: ಜೀವನರಸಿಕ
Subscribe to Filmibeat Kannada

ಎಂ ಎಂ ಸಿನಿಮಾ ಅಂದ್ರೇನು ಅಂತ ನಿಮ್ಮ ಮೊದಲ ಪ್ರಶ್ನೆ ಈಗ ಶುರುವಾಗುತ್ತೆ. ಎಂ ಎಂ ಸಿನಿಮಾ ಅಂದ್ರೆ ಮೈಸೂರು ಮಲ್ಲಿಗೆನಾ ? ಮುಂಗಾರುಮಳೆನಾ ? ಇಲ್ಲಾ ಇತ್ತೀಚೆಗೆ ಶುರುವಾದ ಮಲೆಮಹದೇಶ್ವರ ಅನ್ನೋ ಟೈಟಲ್ನ ಸಿನಿಮಾನಾ ಅಂತ ಯೋಚಿಸ್ತೀರಾ ?

ಇದು ಅದ್ಯಾವುದೂ ಅಲ್ಲ. ಇದು ಮಾನಸ ಮೂವೀಸ್ ಸಿನಿಮಾ. ನಿರ್ದೇಶಕರು ಮೋಹನ್ ಮಾಳಗಿ, ಸಂಗೀತ ನಿರ್ದೇಶಕರು ಮನೋಮೂರ್ತಿ ಎಲ್ಲವೂ ಎಂ ಎಂ. ಅಷ್ಟೇ ಯಾಕೆ ಸಿನಿಮಾದ ಹೆಸರು ಕೂಡ 'ಮಸ್ತ್ ಮೊಹಬ್ಬತ್'. ['ಮಳೆ'ಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ?]2012ರವರೆಗೂ ನೆನಪಿರಲಿ ಪ್ರೇಮ್ ಅದೃಷ್ಟ ನೆಟ್ಟಗಿರ್ಲಿಲ್ಲ. ಆದರೆ ಕಾಲಚಕ್ರ ತಿರುಗಲೇಬೇಕಲ್ಲ. ಕೆಳಗಿದ್ದವರು ಮೇಲೆ ಬರ್ಲೇಬೇಕು. ಕತ್ತಲಾಗಿದ್ದು ಬೆಳಕು ಹರಿಯಲೇಬೇಕು ಅನ್ನೋ ಹಾಗೆ ಪ್ರೇಮ್ ಟೈಂ ಈಗ ಚೆನ್ನಾಗಿದೆ. ಒಂದೊಂದಾಗಿ ಅದ್ಧೂರಿ ಸಿನಿಮಾಗಳಿಗೆ ಪ್ರೇಮ್ ನಾಯಕನಾಗ್ತಿದ್ದಾರೆ.

ಈಗ ಲವ್ಲೀ ಸ್ಟಾರ್ ಗೆ ಮತ್ತೊಂದು ಚಿತ್ರ "ಮಸ್ತ್ ಮೊಹಬ್ಬತ್". ಇದು ಕನ್ನಡ, ತಮಿಳು ದ್ವಿಭಾಷಾ ಚಿತ್ರ ಎಂಬ ಸುದ್ದಿಯೂ ಇದೆ. ಪ್ರೇಮ್ ಅವರ 'ಮಳೆ' ಚಿತ್ರಕ್ಕೆ ಇನ್ನೂ ಮೋಡಗಳು ಕವಿದಿಲ್ಲ. ಇನ್ನು 'ಮಳೆ' ಯಾವಾಗ ಸುರಿಯುತ್ತದೋ ಎಂಬ ನಿರೀಕ್ಷೆಯಲ್ಲಿ ಪ್ರೇಮ್ ಅಭಿಮಾನಿಗಳು ಇದ್ದಾರೆ.

ಸದ್ಯಕ್ಕೆ 'ಮಳೆ' ನಿಂತು ಹೋಗಿರೋದ್ರಿಂದ ಪ್ರೇಮ್ ಈಗ 'ಫೇರ್ ಅಂಡ್ ಲವ್ಲಿ' ಚಿತ್ರದಲ್ಲಿ ಬಿಜಿ. ಈ 'ಫೇರ್ ಅಂಡ್ ಲವ್ಲಿ'ಯಲ್ಲಿ ಪ್ರೇಮ್ ಗೆ ಜೋಡಿಯಾಗಿರೋದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಹುಡುಗಿ ಶ್ವೇತಾ ಶ್ರೀವಾತ್ಸವ್.

English summary
Stylish Star Premkumar's new film titled Mast Mohabbat directed by Mohan Magali. First time Mano Murthy and Prem team up in this movie. The 55-60 days shooting will be held in Mysore, Ooty and Bangalore.
Please Wait while comments are loading...