»   » ಸ್ಟೈಲಿಶ್ ಸ್ಟಾರ್ ಪ್ರೇಮ್ ಈಗ ಸಿಕ್ಸ್ ಪ್ಯಾಕ್ ಪೊಲೀಸ್

ಸ್ಟೈಲಿಶ್ ಸ್ಟಾರ್ ಪ್ರೇಮ್ ಈಗ ಸಿಕ್ಸ್ ಪ್ಯಾಕ್ ಪೊಲೀಸ್

Posted By:
Subscribe to Filmibeat Kannada

ತಮ್ಮ ಲವ್ಲಿ ಪಾತ್ರಗಳ ಮೂಲಕ ಹೆಂಗಳೆಯರ ಮನಕದ್ದಿದ್ದ ಲವ್ಲಿಸ್ಟಾರ್ ಪ್ರೇಮ್ ಈಗ ಆಕ್ಷನ್ ಸ್ಟಾರ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರು ಆಕ್ಷನ್ ಪ್ರಿಯರನ್ನೂ ಹಾಗೂ ಹೆಂಗಳೆಯರ ಹೃದಯವನ್ನು ಒಟ್ಟಿಗೆ ಕದಿಯಲಿದ್ದಾರೆ.

ಬಹಳ ಸುದೀರ್ಘ ಸಮಯದಿಂದ ಬಿಡುಗಡೆಯಾಗದೆ ಕಡೆಗೂ ಶತ್ರು ಚಿತ್ರ ತೆರೆಕಾಣುತ್ತಿದೆ. 'ಶತ್ರು' ಚಿತ್ರಕ್ಕಾಗಿ ನಾಯಕ ಪ್ರೇಮ್ ಕುಮಾರ್ ಅವರು 6 ಪ್ಯಾಕ್ ಆಗಿ ಕಂಗೊಳಿಸುವುದರ ಜೊತೆಗ ಮೈ ನವಿರೇಳಿಸುವಂತಹ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡು ಮೊದಲ ಬಾರಿಗೆ ಖಾಕಿ ಸಹ ತೊಟ್ಟಿದ್ದಾರೆ.


ಶ್ರೀ ಸಾಯಿರಾಮ್ ಪಿಕ್ಚರ್ಸ್ ಬ್ಯಾನರ್ ಎಂ. ಡಿ. ಪ್ರಕಾಶ್ ನಿರ್ಮಾಣದ 'ಶತ್ರು' ಚಿತ್ರದ ಅಡಿಬರಹ 'ಬಾಸ್ ಟು ಮಾಸ್'. ಚಿತ್ರದ ನಿರ್ದೇಶಕ ಜೆ.ಕೆ. ಶತ್ರು' ಚಿತ್ರದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಪೊಲೀಸ್ ಬಟ್ಟೆ ತೊಟ್ಟು ಮೀಸೆ ಮೇಲೆ ಕೈ ತಿರುಚುವ ನಾಯಕ ಇದರ ನಡುವೆ ಬಹು ದೊಡ್ಡ ಸವಾಲನ್ನು ಉತ್ತರ ಕರ್ನಾಟಕದ ಹಳ್ಳಿಯಲ್ಲಿ ಎದುರಿಸುತ್ತಾನೆ.

ನಿರ್ದೇಶಕ ಜೆ.ಕೆ. ಅವರು ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಗಳಿಂದ ಬಹಳಷ್ಟು ರಂಗಭೂಮಿ ಕಲಾವಿದರನ್ನು ಬಳಸಿ ಅನೇಕ ಪಾತ್ರಗಳಲ್ಲಿ ಬಳಸಿಕೊಂಡಿದ್ದಾರೆ.
ಖಾಕಿ ಧರಿಸಿರುವ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಲವ್ಲಿ ಸನ್ನಿವೇಶಗಳನ್ನು ನಾಯಕಿ ಡಿಂಪಲ್ ಚೋಪ್ರ ಜೊತೆ ಬಾಗವಹಿಸಿ ಮನರಂಜನೆ ನೀಡಿದ್ದಾರೆ.

ಪ್ರೇಮ್ ಕುಮಾರ್ ಅವರಿಗೆ ದೊಡ್ಡ ಸವಾಲಿನ ಪಾತ್ರ. ಶರತ್ ಲೋಹಿತಾಶ್ವ ಖಳನಾಗಿ ಕಾಣಿಸಿಕೊಂಡು ಉತ್ತರ ಕರ್ನಾಟಕದ ಭಾಷೆಯಲ್ಲಿ ಡೈಲಾಗ್ ಗಳು ಚಿತ್ರದಲ್ಲಿವೆ. ರಮೇಶ್ ಭಟ್, ರಂಗಾಯಣ ರಘು, ಬುಲ್ಲೆಟ್ ಪ್ರಕಾಶ್, ತಬಲಾ ನಾಣಿ, ಬಿ.ಎಸ್. ಆನಂದ್, ಅರುಣ್ ದೇವಸ್ಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಡಿ ಶಿವಲಿಂಗ್ ಸಹನಿರ್ದೇಶನ, ಸುಧೀಂದ್ರ ಅವರ ನಿರ್ಮಾಣ ನಿರ್ವಹಣೆ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ, ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣ, ಸೂಜಿತ್ ಶೆಟ್ಟಿ ಅವರ ಸಂಗೀತ ಈ ಚಿತ್ರಕ್ಕಿದೆ. ಇದೇ ಆ.30ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಶತ್ರು' ಬಿಡುಗಡೆಯಾಗುತ್ತಿದೆ. (ಒನ್ಇಂಡಿಯಾ ಕನ್ನಡ)

English summary
Stylish Star Prem's 'Shatru' releases on 30th August all over Karnakata. Prem is playing the role of a cop for the first time in his career, and will even flaunt his six pack abs in the movie. 
Please Wait while comments are loading...