»   » ವಿಜಯ್ ಜೊತೆ ಕಿಚ್ಚ ಸುದೀಪ್ ಟಪ್ಪಾಂಗುಚ್ಚಿ

ವಿಜಯ್ ಜೊತೆ ಕಿಚ್ಚ ಸುದೀಪ್ ಟಪ್ಪಾಂಗುಚ್ಚಿ

Posted By:
Subscribe to Filmibeat Kannada

ಅಂತೂ ಇಂತೂ ಕಿಚ್ಚ ಸುದೀಪ್ ಕಾಲಿವುಡ್ ಗೆ ಎಂಟ್ರಿಕೊಟ್ಟಾಗಿದೆ. ಕಾಲಿವುಡ್ ಗೆ ಕಾಲಿಡ್ತಿದ್ದಂತೆ ನಲ್ಲ, ಇಳಯದಳಪತಿ ಜೊತೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕೋಕೆ ಶುರುಹಚ್ಕೊಂಡಿದ್ದಾರೆ. ನೀವಂದುಕೊಂಡಂತೆ ತಮಿಳು ಚಿತ್ರರಂಗದಲ್ಲಿ ಸುದೀಪ್ ಧೂಳೆಬ್ಬಿಸುವುದು ಅಕ್ಷರಶಃ ನಿಜವಾಗಿದೆ.

ಹೌದು, ಇನ್ನೂ ಹೆಸರಿಡದ ಇಳೆಯದಳಪತಿ ವಿಜಯ್ ನಟಿಸುತ್ತಿರುವ 58ನೇ ಚಿತ್ರದಲ್ಲಿ ಸುದೀಪ್ ಮುಖ್ಯಪಾತ್ರದಲ್ಲಿ ಮಿಂಚಲಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ವಿಜಯ್ ಗೆ ಅಣ್ಣನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಕೂಡ ಹಬ್ಬಿತ್ತು. ಅದನ್ನೆಲ್ಲ ಖುದ್ದು ಸುದೀಪ್ ಇಂದು (ನವೆಂಬರ್ 16) ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

Sudeep and Vijay1

ಶೂಟಿಂಗ್ ಗೋಸ್ಕರ ಇತ್ತೀಚೆಗಷ್ಟೇ ಚೆನ್ನೈಗೆ ಹಾರಿದ್ದ ಸುದೀಪ್, ಇಂದು ವಿಜಯ್ ಜೊತೆ ಕ್ಲಿಕ್ ಮಾಡಿರುವ ಫೋಟೋವನ್ನ ಟ್ವೀಟ್ ಮಾಡಿದ್ದಾರೆ. ವಿಜಯ್ ನ ಮೀಟ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸುದೀಪ್, ವಿಜಯ್ ರವರನ್ನ 'ವಂಡರ್ ಫುಲ್ ಹೋಸ್ಟ್' ಅಂತ ಬಣ್ಣಿಸಿದ್ದಾರೆ.

ಹೇಳಿಕೇಳಿ ನೃತ್ಯದಲ್ಲಿ ಇಳೆಯದಳಪತಿ ಜನಪ್ರಿಯ. ಈ ಚಿತ್ರದಲ್ಲೂ ಹಾಡು, ಡ್ಯಾನ್ಸು ಜೋರಾಗಿರಲಿದೆ ಅನ್ನುವುದಕ್ಕೆ ಸುದೀಪ್ ಮಾಡಿರುವ ಟ್ವೀಟ್ ಸಾಕ್ಷಿ. ಹಾಡಿನ ಚಿತ್ರೀಕರಣದಿಂದಲೇ ಶೂಟಿಂಗ್ ಶುರುಮಾಡಿರುವ ಸುದೀಪ್, 'ವಿಜಯ್ ಜೊತೆ ಡ್ಯಾನ್ಸ್ ಮಾಡುತ್ತಿರುವುದು ಖುಷಿಕೊಟ್ಟಿದೆ' ಅಂತ ಟ್ವೀಟಿಸಿದ್ದಾರೆ.

ಇನ್ನೂ ಇದೇ ಸೆಟ್ ನಲ್ಲಿ ಸೌಂದರ್ಯದ ಸಿರಿದೇವಿ ನಟಿ ಶ್ರೀದೇವಿ ಕೂಡ ಇರುವುದು ಸುದೀಪ್ ಗೆ ಮತ್ತಷ್ಟು ಜೋಷ್ ನೀಡಿದ್ಯಂತೆ. ಮೊದಲ ಬಾರಿಗೆ ವಿಜಯ್ ಮತ್ತು ಸುದೀಪ್ ರಂತ ಹೀರೋಗಳಿಗೆ ತಾಯಿ ಪಾತ್ರ ಮಾಡುತ್ತಿರುವ ಶ್ರೀದೇವಿ ನಟನೆ ಅದ್ಭುತ ಅಂತ ಶೂಟಿಂಗ್ ಸ್ಪಾಟ್ ನಿಂದಲೇ ಸುದೀಪ್ ಟ್ವೀಟ್ ಮಾಡಿದ್ದಾರೆ. [ತಮಿಳು ನಟ ವಿಜಯ್ ಗೆ ಅಣ್ಣನಾದ ಕಿಚ್ಚ ಸುದೀಪ್?]

ಚಿಂಬು ದೇವನ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದ್ದು, ಬಿಗ್ ಬಜೆಟ್ ನಲ್ಲಿ ರೆಡಿಯಾಗ್ತಿದೆ. ಉತ್ಸಾಹದಿಂದ ಶೂಟಿಂಗ್ ನಲ್ಲಿ ಪಾಲ್ಗೊಂಡು ಸುದೀಪ್ ಮಾಡುತ್ತಿರುವ ಟ್ವೀಟ್ ಗಳನ್ನ ನೋಡಿದ್ರೆ, ಸಿನಿಮಾ ಭರ್ಜರಿಯಾಗಿ ರೆಡಿಯಾಗುತ್ತಿರುವುದು ಖಚಿತ.

English summary
Sudeep is shaking leg with Kollywood Actor Vijay in his kollywood debute. Sudeep and Vijay started their shoot with the songs. Multilingual actress Sridevi is also present in the set. Sudeep is super excited with the project and have been tweeting the updates.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada