»   » ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!

ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಬಿಗ್ ಬಾಸ್' ಸುದೀಪ್ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಜಾದೂ ಮಾಡಿರುವುದು ಹಳೇ ಸುದ್ದಿ. ಇದೀಗ ಕಾಲಿವುಡ್ ನಲ್ಲೂ ಒಂದು ಕೈ ನೋಡುತ್ತಿರುವ ಕಿಚ್ಚ ಸುದೀಪ್, ಇಳಯದಳಪತಿ ವಿಜಯ್ ಜೊತೆ ಸಿನಿಮಾ ಮಾಡುತ್ತಿರುವುದು ನಿಮ್ಗೆಲ್ಲಾ ಗೊತ್ತೇ ಇದೆ.

ವಿಜಯ್ ಅಭಿನಯದ 58 ನೇ ಚಿತ್ರದಲ್ಲಿ, ವಿಜಯ್ ಸಹೋದರನಾಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಕೂಡ ಭರದಿಂದ ಸಾಗುತ್ತಿದ್ದರೂ, ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಮಾಡಿರಲಿಲ್ಲ. [ವಿಜಯ್ ಜೊತೆ ಕಿಚ್ಚ ಸುದೀಪ್ ಟಪ್ಪಾಂಗುಚ್ಚಿ]

''ವಿಜಯ್ 58'' ಅಂತಲೇ ಶುರುವಾದ ಈ ಚಿತ್ರಕ್ಕೀಗ 'ಪುಲಿ' ಅನ್ನುವ ಹೆಸರಿಡಲಾಗಿದೆ. ನಿನ್ನೆಯಷ್ಟೇ (ಜನವರಿ 3) ಚಿತ್ರದ ನಿರ್ಮಾಣ ಸಂಸ್ಥೆ ಎಸ್.ಕೆ.ಟಿ.ಸ್ಟುಡಿಯೋಸ್ 'ಪುಲಿ' ಅನ್ನುವ ಟೈಟಲ್ ನ ಅನೌನ್ಸ್ ಮಾಡಿದೆ.

puli

'ಪುಲಿ' ಚಿತ್ರದ ಹೀರೋ ವಿಜಯ್ ಆಗಿದ್ದರೂ, ಚಿತ್ರದಲ್ಲಿ ಸುದೀಪ್ ಗೂ ಅಷ್ಟೇ ಪ್ರಾಮುಖ್ಯತೆ ಇದೆ. ಅಲ್ಲಿಗೆ, ಜೂನಿಯರ್ 'ಸಿಂಹ'ನಾಗಿ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಿದ ಸುದೀಪ್, ಕಾಲಿವುಡ್ ನಲ್ಲಿ ವಿಜಯ್ ಜೊತೆ 'ಹುಲಿ'ಯಾಗಿ ಘರ್ಜಿಸಲಿದ್ದಾರೆ ಅಂತಾಯ್ತು.

ಆಕ್ಷನ್ ಕಮ್ ರೋಮ್ಯಾಂಟಿಕ್ ಸಿನಿಮಾ ಆಗಿರುವ 'ಪುಲಿ'ಯಲ್ಲಿ ನಟಿ ಶ್ರೀದೇವಿ ಕೂಡ ಬಣ್ಣ ಹಚ್ಚಿರುವುದು ವಿಶೇಷ. ನಟಿ ಹನ್ಸಿಕಾ ಮೋಟ್ವಾನಿ ಅಮ್ಮನಾಗಿ ಶ್ರೀದೇವಿ ಕಾಣಿಸಿಕೊಂಡಿದ್ರೆ, ಮುಖ್ಯ ಭೂಮಿಕೆಯಲ್ಲಿ ಶೃತಿ ಹಾಸನ್ ಇದ್ದಾರೆ. [ಕಾಲಿವುಡ್ ನಲ್ಲೇ ಸೆಟ್ಲ್ ಆಗ್ತಾರಾ ಕಿಚ್ಚ ಸುದೀಪ್ ]

ಕಾಲಿವುಡ್ ನಲ್ಲಿ ಅನೇಕ ಹಿಟ್ ಚಿತ್ರಗಳನ್ನ ನೀಡಿರುವ ಚಿಂಬುದೇವನ್ 'ಪುಲಿ'ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಂತೂ, ಬಹುನಿರೀಕ್ಷಿತ ಸುದೀಪ್ ಅಭಿನಯದ ಕಾಲಿವುಡ್ ಚಿತ್ರಕ್ಕೆ ಹೆಸರು ಫಿಕ್ಸ್ ಆಯ್ತು. ಕನ್ನಡದಲ್ಲಿ 'ಹೆಬ್ಬುಲಿ'ಯಾಗಿರುವ ಸುದೀಪ್, ಕಾಲಿವುಡ್ ನಲ್ಲಿ 'ಪುಲಿ'ಯಾಗಿದ್ದಾರೆ. ಎರಡೂ ಕಡೆ ಸುದೀಪ್ ಪಾತ್ರದಲ್ಲಿನ ಪವರ್ ಜಗಜ್ಜಾಹೀರಾಗಬೇಕಷ್ಟೆ. (ಏಜೆನ್ಸೀಸ್)

English summary
Sudeep and Vijay's 58th movie has been titled as 'Puli'. The title was announced on Sunday (Jan 3rd) by the film's production house SKT Studios.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada