For Quick Alerts
  ALLOW NOTIFICATIONS  
  For Daily Alerts

  ನೋಡಿ ಹೇಗಿದ್ದಾರೆ 'ಸೈರಾ' 'ಸಿನಿಮಾದ ಸುದೀಪ್

  |
  ಸೈರಾದಿಂದ ಹೊರ ಬಂತು ಸುದೀಪ್ ಹೊಸ ಲುಕ್...! | FILMIBEAT KANNADA

  ನಟ ಸುದೀಪ್ ಮತ್ತೆ ಟಾಲಿವುಡ್ ಪ್ರವೇಶ ಮಾಡಿರುವ ವಿಷಯ ಎಲ್ಲರಿಗೆ ತಿಳಿದಿದೆ. 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದು, ಚಿತ್ರದ ಮೇಕಿಂಗ್ ಫೋಟೋವೊಂದು ರಿವೀಲ್ ಆಗಿದೆ.

  ಈ ಫೋಟೋದಲ್ಲಿ ನಟ ಸುದೀಪ್ ಹಾಗೂ ತಮಿಳು ನಟ ವಿಜಯ್ ಸೇತುಪತಿ ಇದ್ದಾರೆ. ಇಬ್ಬರ ಲುಕ್ ರಗಡ್ ಆಗಿದೆ. ಅದರಲ್ಲಿಯೂ ಸುದೀಪ್ ವೇಷ ನಿಜಕ್ಕೂ ಸಿನಿಮಾದ ಮೇಲೆ, ಅವರ ಪಾತ್ರದ ಮೇಲೆ ದೊಡ್ಡ ನಿರೀಕ್ಷೆ ಹುಟ್ಟುವಂತೆ ಮಾಡಿದೆ.

  ಇದು ಮೆಗಾಸ್ಟಾರ್ ಚಿರಂಜೀವಿ ನಟನೆಯ 151 ನೇ ಸಿನಿಮಾವಾಗಿದೆ. ಅವುಕು ರಾಜ ಎಂಬ ರಾಜನ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಜಗಪತಿ ಬಾಬು, ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರ, ತಮನ್ನಾ ಸೇರಿದಂತೆ ಹಲವರು ಸಿನಿಮಾದಲ್ಲಿ ಇದ್ದಾರೆ.

  'ಈಗ' ಹಾಗೂ 'ಬಾಹುಬಲಿ' ಸಿನಿಮಾದ ನಂತರ ಸುದೀಪ್ ಮತ್ತೆ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಸುರೇಂದ್ರ ರೆಡ್ಡಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  English summary
  Abhinaya Chakravarthy kiccha sudeep' another look from SyeRaa Narasimha Reddy movie is out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X