»   » 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಬರೀ ಬಾಕ್ಸರ್ ಅಲ್ಲ, ಕುಸ್ತಿಪಟು ಕೂಡ.!

'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಬರೀ ಬಾಕ್ಸರ್ ಅಲ್ಲ, ಕುಸ್ತಿಪಟು ಕೂಡ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆದ 'ಪೈಲ್ವಾನ್' ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. 'ಪೈಲ್ವಾನ್' ಚಿತ್ರದ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸಂಗತಿ ಈಗಾಗಲೇ ಬಯಲಾಗಿದೆ.

'ಪೈಲ್ವಾನ್' ಪೋಸ್ಟರ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ನೋಡಿ?

ಇದರೊಂದಿಗೆ ಇನ್ನೊಂದು ಸರ್ ಪ್ರೈಸ್ ಕೂಡ ಎಲ್ಲರಿಗೂ ಕಾದಿದೆ. ಅದೇನಪ್ಪಾ ಅಂದ್ರೆ, 'ಪೈಲ್ವಾನ್' ಚಿತ್ರದಲ್ಲಿ ಸುದೀಪ್ ಕೇವಲ ಬಾಕ್ಸರ್ ಆಗಿ ಮಾತ್ರ ಅಲ್ಲ, ಕುಸ್ತಿಪಟು ಆಗಿಯೂ ಮಿಂಚಲಿದ್ದಾರೆ. ಹಾಗಂತ ನಿರ್ದೇಶಕ ಕೃಷ್ಣ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿರಿ...

ಬಾಕ್ಸಿಂಗ್ ಮತ್ತು ಕುಸ್ತಿ

'ಪೈಲ್ವಾನ್' ಚಿತ್ರದಲ್ಲಿ ಬಾಕ್ಸಿಂಗ್ ಹಾಗೂ ಕುಸ್ತಿಗೆ ಸಂಬಂಧಪಟ್ಟ ಕಥೆ ಹೆಣೆಯಲಾಗಿದ್ಯಂತೆ. ಚಿತ್ರದಲ್ಲಿನ ಬಾಕ್ಸಿಂಗ್ ಗೆ ಸಂಬಂಧಿಸಿದ ಸ್ಟಂಟ್ ಗಳನ್ನ ವಿದೇಶದ ಸ್ಟಂಟ್ ಮಾಸ್ಟರ್ ಗಳು ಸಂಯೋಜಿಸಲಿದ್ದಾರೆ.

'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

ಹುಬ್ಬಳ್ಳಿಯಲ್ಲಿ ಕುಸ್ತಿ

ಚಿತ್ರದಲ್ಲಿನ ಕುಸ್ತಿಗೆ ಸಂಬಂಧಿಸಿದ ಸ್ಟಂಟ್ ಹಾಗೂ ದೃಶ್ಯಗಳನ್ನ ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ಚಿತ್ರೀಕರಿಸಲು ನಿರ್ದೇಶಕ ಕೃಷ್ಣ ಪ್ಲಾನ್ ಮಾಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ

'ಪೈಲ್ವಾನ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇರಲಿದ್ದು, ಕರುಣಾಕರ್ ಛಾಯಾಗ್ರಹಣ ಇರಲಿದೆ. ಆರ್.ಆರ್.ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಚಿತ್ರ ತಯಾರಾಗಲಿದೆ.

ಅಕ್ಟೋಬರ್ ನಲ್ಲಿ ಚಿತ್ರೀಕರಣ

ಸದ್ಯ 'ದಿ ವಿಲನ್' ಚಿತ್ರೀಕರಣದಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಅದು ಮುಗಿದ ಕೂಡಲೆ ಅಂದ್ರೆ ಅಕ್ಟೋಬರ್ ಹೊತ್ತಿಗೆ 'ಪೈಲ್ವಾನ್' ಚಿತ್ರದ ಚಿತ್ರೀಕರಣ ಶುರು ಆಗಲಿದೆ.

English summary
Kannada Actor Kiccha Sudeep will be seen playing a Boxer and Wrestler in 'Phailwan'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada