For Quick Alerts
  ALLOW NOTIFICATIONS  
  For Daily Alerts

  ತೆಲುಗು, ತಮಿಳು ಭಾಷೆಗೆ ಕಿಚ್ಚನ 'ಬಚ್ಚನ್' ಡಬ್

  By Rajendra
  |

  ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ಚಿತ್ರ ಯುಗಾದಿ ಹಬ್ಬದಂದು (ಏ.11) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಸರಿಸುಮಾರು 200 ಚಿತ್ರಮಂದಿರಗಳಿಗೆ 'ಬಚ್ಚನ್' ಚಿತ್ರ ಅಪ್ಪಳಿಸುತ್ತಿದೆ. ಇದೇ ಸಂದರ್ಭದಲ್ಲಿ ಇತರ ಭಾಷೆಗಳಿಗೂ ಬಚ್ಚನ್ ಡಬ್ ಮಾಡಲಾಗುತ್ತಿದೆ.

  ಈಗಾಗಲೆ ಸುದೀಪ್ ಅವರಿಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಅಭಿಮಾನಿಗಳಿದ್ದಾರೆ. ಇದನ್ನು ಮನಗಂಡಿರುವ ಬಚ್ಚನ್ ಚಿತ್ರದ ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಶೀಘ್ರದಲ್ಲೇ ಇತರೆ ಭಾಷೆಗಳಿಗೆ ಡಬ್ ಮಾಡುವುದಾಗಿ ಹೇಳಿದ್ದಾರೆ.

  ಈ ಹಿಂದೆ ಸುದೀಪ್ ಅಭಿನಯದ 'ಈಗ' ಚಿತ್ರ ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿತ್ತು. ಈಗ ಬಚ್ಚನ್ ಸರದಿ. ಶಶಾಂಕ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ನಿಮ್ಮ ನೆಚ್ಚಿನ ತಾಣ ಒನ್ಇಂಡಿಯಾ ಕನ್ನಡದಲ್ಲಿ ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ.

  ಚಿತ್ರದ ಬಗ್ಗೆ ಮಾತನಾಡಿರುವ ಸುದೀಪ್, ಬಚ್ಚನ್ ಚಿತ್ರದಲ್ಲಿನ ಒಂದೇ ಒಂದು ಆಕ್ಷನ್ ಸೀನ್ ಗಾಗಿ ಒಂಬತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ತಮ್ಮ ಪಾತ್ರ ಮೂರು ಶೇಡ್ ಗಳಿಂದ ಕೂಡಿದೆ. ಭಾವನಾ, ತುಲಿಪ್ ಜೋಷಿ ಹಾಗೂ ಪರುಲ್ ಯಾದವ್ ಮೂವರು ಹೀರೋಯಿನ್ ಗಳು ಮೂರು ವಿಭಿನ್ನ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದಿದ್ದಾರೆ.

  ಸುದೀಪ್, ಪಾರೂಲ್ ಯಾದವ್, ತುಲಿಪ್ ಜೋಶಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ. (ಒನ್ಇಂಡಿಯಾ ಕನ್ನಡ)

  English summary
  Abhinaya Chakravarthi Sudeep lead Kannada film Bachchan releasing on Ugadi festival day (11th April) in over 200 screens. The film is set for dubbing to other languages very soon says producer Uday K Mehta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X