»   » ಜುಲೈ ಕೊನೆಗೆ ಸುದೀಪ್ ಮತ್ತೊಂದು ಹಿಂದಿ ಚಿತ್ರ

ಜುಲೈ ಕೊನೆಗೆ ಸುದೀಪ್ ಮತ್ತೊಂದು ಹಿಂದಿ ಚಿತ್ರ

Posted By:
Subscribe to Filmibeat Kannada

"ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡು. ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ...ಬಚ್ಚನ್ ಗಿರಿನೇ ತೋರಿಸ್ಬೇಕು..." ಎಂದು ಸುದೀಪ್ ಡೈಲಾಗ್ ಮೇಲೆ ಡೈಲಾಗ್ ಹೊಡೆದ 'ಬಚ್ಚನ್ ಇದೀಗ ಹಿಂದಿಗೆ ಡಬ್ ಆಗಿದೆ.

ಈಗಾಗಲೆ ಅರ್ಧ ಸೆಂಚುರಿ ಪೂರೈಸಿರುವ 'ಬಚ್ಚನ್' ಚಿತ್ರ ಹಿಂದಿ ಆವೃತ್ತಿ ಇದೇ ಜುಲೈನಲ್ಲಿ ತೆರೆಕಾಣುತ್ತಿದೆ. ಶೀಘ್ರದಲ್ಲೇ ಆಡಿಯೋ ಸಹ ಬಿಡುಗಡೆಯಾಗುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರ ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಸೇರಿದ್ದು 20 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಬಾರಿಸಿದೆ.


ಮುಂಬೈ ಮೂಲದ ನಿರ್ಮಾಣ ಸಂಸ್ಥೆಯೊಂದು ಬಚ್ಚನ್ ಡಬ್ಬಿಂಗ್ ರೈಟ್ಸ್ ತೆಗೆದುಕೊಂಡಿದ್ದು ಜುಲೈ ತಿಂಗಳಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ನಾಯಕಿ ತುಲಿಪ್ ಜೋಶಿ ಅವರನ್ನೂ ಮುಂಬೈ ಕಂಪನಿ ಸಂಪರ್ಕಿಸಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಶಾಂಕ್. (ಬಚ್ಚನ್ ಚಿತ್ರ ವಿಮರ್ಶೆ)

ಇನ್ನು ಬಚ್ಚನ್ ಚಿತ್ರದ ತೆಲುಗು ಹಾಗೂ ತಮಿಳು ಡಬ್ಬಿಂಗ್ ರೈಟ್ಸ್ ಉದಯ್ ಮೆಹ್ತಾ ಅವರ ಬಳಿಯೇ ಇವೆಯಂತೆ. ತೆಲುಗು, ತಮಿಳು ಬಚ್ಚನ್ ಚಿತ್ರ ಏಕಕಾಲಕ್ಕೆ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ತೆಲುಗು, ತಮಿಳು ಚಿತ್ರಗಳಿಗೆ ಸಖತ್ ಬೇಡಿಕೆ ಇದ್ದು ಬಚ್ಚನ್ ಚಿತ್ರ ಅಲ್ಲೂ ಸದ್ದು ಮಾಡುವ ಸೂಚನೆಗಳನ್ನು ನೀಡಿದೆ.

ಸುದೀಪ್ ಅವರ ಎತ್ತರಕ್ಕೆ ತಕ್ಕಂತೆ ಅವರ ಚಿತ್ರಗಳೂ ಎತ್ತರಕ್ಕೆ ಏರುತ್ತಿರುವುದು ವಿಶೇಷ. ಸದ್ಯಕ್ಕೆ ಅವರು ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಬಚ್ಚನ್ ಚಿತ್ರ ತಾಂತ್ರಿಕವಾಗಿಯೂ ಪ್ರೌಢವಾಗಿದ್ದು ಶೇಖರ್ ಚಂದ್ರು ರವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ. ಪಾತ್ರವರ್ಗದಲ್ಲಿ ಪಾರೂಲ್ ಯಾದವ್, ತುಲಿಪ್ ಜೋಷಿ, ಭಾವನಾ, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Kannada action thriller Bachchan directed by Shashank featuring Sudeep, Bhavana, Parul Yadav and Tulip Joshi in the lead roles, dubbed to Hindi. Hindi vesion will release in July.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada