For Quick Alerts
  ALLOW NOTIFICATIONS  
  For Daily Alerts

  ಅಡಿಲೆಡ್ ಗೆ ಅಡಿಯಿಟ್ಟ ಸುದೀಪ್ 'ಬಚ್ಚನ್' ಚಿತ್ರ

  By Rajendra
  |

  ಈಗಾಗಲೆ ಯಶಸ್ವಿ ಪ್ರದರ್ಶನ ಕಂಡಿರುವ ಸುದೀಪ್ ಅಭಿನಯದ 'ಬಚ್ಚನ್' ಚಿತ್ರ ಇದೀಗ ಅಡಿಲೆಡ್ ಗೆ ಅಡಿಯಿಡುತ್ತಿದೆ. ಇದೇ ಜುಲೈ 27ರ ಶನಿವಾರದಂದು ಮಧ್ಯಾಹ್ನ 2 ಗಂಟೆಗೆ ಶಶಾಂಕ್ ನಿರ್ದೇಶನದ ಈ ಚಿತ್ರ ಅಡಿಲೆಡ್ ನಲ್ಲಿ ತೆರೆಕಾಣುತ್ತಿದೆ.

  ಉಮೇಶ್ ನಾಗಸಂದ್ರ ಅವರು ಈ ಚಿತ್ರದ ವಿತರಕರಾಗಿದ್ದು @Mercury Cinema, 13 Morphett Street, Adelaide SA 5000 ಇಲ್ಲಿ 'ಬಚ್ಚನ್' ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಟಿಕೆಟ್ ಬುಕಿಂಗ್ ಮಾಡಲು ಉಮೇಶ್ ಅವರನ್ನು ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು- 0401 034 456.

  ಕೂಲಾಗಿದ್ದಾಗ ಮಾತ್ರ ನಾನು ಜಂಟಲ್ ಮೆನ್...ಕೋಪ ಬಂದಾಗ...ನಾನು ಬಾರ್ಸೋ ಬಚ್ಚನ್. ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡು. ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ...ಬಚ್ಚನ್ ಗಿರಿನೇ ತೋರಿಸ್ಬೇಕು...ಎಂದು ಸುದೀಪ್ ಡೈಲಾಗ್ ಮೇಲೆ ಡೈಲಾಗ್ ಹೊಡೆದ 'ಬಚ್ಚನ್ ಚಿತ್ರ ಅರ್ಧ ಸೆಂಚುರಿ ಪೂರೈಸಿದೆ. [ಬಚ್ಚನ್ ಚಿತ್ರವಿಮರ್ಶೆ]

  ಬಚ್ಚನ್ ಚಿತ್ರ ತಾಂತ್ರಿಕವಾಗಿಯೂ ಪ್ರೌಢವಾಗಿದ್ದು ಶೇಖರ್ ಚಂದ್ರು ರವರ ಛಾಯಾಗ್ರಹಣ, ವಿ ಹರಿಕೃಷ್ಣ ಸಂಗೀತ ಮೆಚ್ಚುಗೆಗೆ ಪಾತ್ರವಾಗಿದೆ. ಪಾತ್ರವರ್ಗದಲ್ಲಿ ಪಾರೂಲ್ ಯಾದವ್, ತುಲಿಪ್ ಜೋಷಿ, ಭಾವನಾ, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರಿದ್ದಾರೆ.

  ಬಚ್ಚನ್ ಚಿತ್ರದ ಇನ್ನೊಂದು ವಿಶೇಷ ಎಂದರೆ, ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಿ ಅಲ್ಲೂ ಸದ್ದು ಮಾಡಿದ್ದು. ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈಗ ಅಡಿಲೆಡ್ ಗೆ ಅಡಿಯಿಡುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  Kannada movie 'Bachchan' starring Kichcha Sudeep others screening Mercury Cinema, 13 Morphett Street, Adelaide SA 5000 on Saturay, the 27th of July 2013, 2 PM. For tickets please contact: Umesh on 0401 034 456.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X