For Quick Alerts
  ALLOW NOTIFICATIONS  
  For Daily Alerts

  ದಿಗಂತ್-ಐಂದ್ರಿತಾ ದಂಪತಿಗೆ ವಿಶ್ ಮಾಡಿದ ಕಿಚ್ಚ ಸುದೀಪ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ದೂದ್ ಪೇಡಾ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿಗೆ ಶುಭಕೋರಿದ್ದಾರೆ. ಅಷ್ಟಕ್ಕು ಕಿಚ್ಚ ವಿಶ್ ಮಾಡಿದ್ದೇಕೆ? ದಿಗಂತ್ ಅಥವಾ ಐಂದ್ರಿತಾ ಅವರ ಹುಟ್ಟಹಬ್ಬನಾ ಅಥವಾ ಮದುವೆ ವಾರ್ಷಿಕೋತ್ಸವವೇನಾ ಎಂದು ಯೋಚಿಸುತ್ತಿದ್ದೀರಾ? ಯಾವುದು ಅಲ್ಲ ಸುದೀಪ್ ಶುಭಕೋರಿದ್ದು, ಇಬ್ಬರ ಹೊಸ ಸಿನಿಮಾಗಾಗಿ.

  ಹೌದು, ದಿಗಂತ್ ಮತ್ತು ಐಂದ್ರಿತಾ ಇಬ್ಬರು ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 8 ವರ್ಷಗಳ ನಂತರ ತೆರೆಮೇಲೆ ಒಂದಾಗಿರುವ ದಿಗಂತ್ ಮತ್ತು ಐಂದ್ರಿತಾಗೆ ಸುದೀಪ್ ಬೆಸ್ಟ್ ವಿಶಸ್ ಹೇಳಿದ್ದಾರೆ. ಅಂದಹಾಗೆ ದಿಗಂತ್ ದಂಪತಿ ಒಟ್ಟಿಗೆ ನಟಿಸುತ್ತಿರುವುದು 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರದಲ್ಲಿ.

  'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ ನಟ ದಿಗಂತ್'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ ನಟ ದಿಗಂತ್

  ಈ ಸಿನಿಮಾದ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಇರುವ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ಅನ್ನು ಐಂದ್ರಿತಾ ಶೇರ್ ಮಾಡಿ, 'ಮಲೆನಾಡಿನ ಮೋಹಕ ತಾಣದಲ್ಲಿ ಚಿತ್ರೀಕರಣ ನಡೆಯುತ್ತಿದೆ. 8 ವರ್ಷದ ಬಳಿಕ ತೆರೆ ಹಿಂದಿನ ನನ್ನ ಪ್ರೀತಿ ದಿಗಂತ್ ಜೊತೆ ಮತ್ತೆ ನಟಿಸುತ್ತಿದ್ದೀನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ಇಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಸೂಪರ್. ಒಳ್ಳೆಯದಾಗಲಿ ದಿಗಂತ್ ಮತ್ತು ಐಂದ್ರಿತಾ' ಎಂದು ಹೇಳಿದ್ದಾರೆ.

  ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ, ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ದಿಗಂತ್ ಇಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಾಗರದ ಪುಟ್ಟ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

  ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ರಂಜಿನಿ ರಾಘವನ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ವಿನಾಯಕ ಕೊಡ್ಸರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ವಿನಾಯಕ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

  Aditi Prabhudeva | ಬದುಕಿದ್ರೆ ಚಿರು-ಮೇಘನಾ ತರ ಬದುಕ್ಬೇಕು | Chiranjeevi Sarja | Filmibeat Kannada

  ಇದೀಗ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೋಸ್ಟರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಈ ಸಿನಿಮಾ ಹೇಗೆ ಮೂಡಿಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  English summary
  Kannada Actor Sudeep best wishes to Diganth and Aindrita Ray for back and together onscreen after a 8 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X