For Quick Alerts
  ALLOW NOTIFICATIONS  
  For Daily Alerts

  ಟಿವಿ9, ಸುವರ್ಣ, ಪಬ್ಲಿಕ್ ಟಿವಿಗೆ ಚಾಲೆಂಜ್ ಹಾಕಿದ ಸುದೀಪ್

  By Bharath Kumar
  |

  ಒಂದ್ಕಡೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್...ಮತ್ತೊಂದೆಡೆ ಕಿಚ್ಚ ಸುದೀಪ್ ಚಾಲನೆ ಕೊಟ್ಟಿರುವ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್.

  ಈ ಎರಡು ಚಾಲೆಂಜ್ ಗಳು ಸದ್ಯ ಸೋಶಿಯಲ್ ಮಿಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅದರಲ್ಲೂ ಸುದೀಪ್ ಆರಂಭಿಸಿರುವ ಚಾಲೆಂಜ್ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿಯಾಗಿದೆ.

  ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್

  ಇಷ್ಟು ದಿನ ಕನ್ನಡದ ಸ್ಟಾರ್ ನಟರಿಗೆ ಚಾಲೆಂಜ್ ಹಾಕಿದ್ದ ಸುದೀಪ್ ಇದೀಗ, ಕನ್ನಡ ಸುದ್ದಿ ವಾಹಿನಿಗಳಿಗೆ ಚಾಲೆಂಜ್ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸವಾಲೆಸಿದಿರುವ ಸುದೀಪ್ ''ಟಿವಿ9, ಸುವರ್ಣ, ಪಬ್ಲಿಕ್ ಟಿವಿಗೆ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ನೀಡುತ್ತಿದ್ದೇನೆ. ನೋಡೋಣ ಹೇಗೆ ಸ್ವೀಕರಿಸುತ್ತಾರೋ'' ಎಂದಿದ್ದಾರೆ.

  ಇದು ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಟ್ಟಿದೆ. ಈಗ ಸುದೀಪ್ ಅವರ ಎಸೆದಿರುವ ಚೆಂಡು ಕನ್ನಡ ನ್ಯೂಸ್ ಚಾನಲ್ ಗಳ ಅಂಗಳದಲ್ಲಿದೆ. ಅದನ್ನ ಹೇಗೆ ತಗೋಳ್ತಾರೆ, ಅಥವಾ ಅಸಡ್ಡೆ ತೋರ್ತಾರಾ ಗೊತ್ತಿಲ್ಲ. ಒಟ್ನಲ್ಲಿ ಇದಂತೂ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

  ರಿಯಲ್ ಸ್ಟಾರ್ ಉಪೇಂದ್ರಗೆ ಸುದೀಪ್ ಹಾಕಿದರು ಚಾಲೆಂಜ್ರಿಯಲ್ ಸ್ಟಾರ್ ಉಪೇಂದ್ರಗೆ ಸುದೀಪ್ ಹಾಕಿದರು ಚಾಲೆಂಜ್

  ಸದ್ಯ, ಸುದೀಪ್ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ಕಾರಣದಿಂದ ಸರ್ಬಿಯಾದ ಬೆಲ್ ಗ್ರೇಡ್ ಗೆ ತೆರೆಳಿದ್ದಾರೆ. ಸುಮಾರು 25 ದಿನಗಳ ಕಾಲ ಅಲ್ಲೆ ಉಳಿಯಲಿದ್ದು, ನಂತರ ಭಾರತಕ್ಕೆ ವಾಪಸ್ ಆಗಲಿದ್ದಾರೆ.

  ಈಗಷ್ಟೇ 'ಅಂಬಿ ನಿಂಗೆ ವಯಸ್ಸಾಯ್ತೋ' ಹಾಗೂ 'ಪೈಲ್ವಾನ್' ಚಿತ್ರಗಳ ಚಿತ್ರೀಕರಣ ಮುಗಿಸಿರುವ ಸುದೀಪ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಕಾರ್ತಿಕ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada actor Sudeep has made a 'Bring Out The Pailwaan In You' challenge to tv9 kannada, suvarna news kannada and public tv kannada news channels.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X